ಕಾವ್ಯ ಸಂಗಾತಿ
ಮಾಜಾನ್ ಮಸ್ಕಿ
ಸ(ಅ)ಬಲೆ
ನೆಲೆಯೇ ಇಲ್ಲದ ಬಾಳಿಗೆ
ಭುವಿಯೇ ಅಡಿಪಾಯ
ಆಕಾಶವೇ ಚಪ್ಪರ
ಕೊರಳ ಉರುಳು ಕಳಚಿದರೇ ತಾಳಿ
ಕೈಯ್ಯ ಬೇಡಿ ಒಡೆದರೆ ಬಳೆ
ಕಾಲಿನ ಸರಪಳಿ ಕಿತ್ತೊಗೆದಿರಲು
ವಿಧವೆಗೆ ಕೊಟ್ಟ ಸ್ವಾತಂತ್ರ ಇದೆ ಅಲ್ಲವೇ
ಒಡವೆಯ ಭಾರವೇಕೆ
ಪತಿಯ ಮನವೊಲಿಸಲು
ಶೃಂಗಾರ ವಯ್ಯಾರ ತೊಡಕಿಲ್ಲ
ವಿಲಾಸದ ಕಿಚ್ಚು ಆರಿರಲು
ಸುಖವೇ ಅಲ್ಲದ ಸುಖ ತ್ಯಜಿಸಿ
ಶಾಂತ ಮೂರ್ತಿ ಆದಳೇ ಹೆಣ್ಣು
ಹಂಗಿನ ಅರಮನೆ ತೊರೆದಾಯಿತು
ಆಸೆ ನಿರಾಶೆಯ ಹಿಮಪಾತ ಕರಗಿ
ಮನದಲ್ಲಿ ತಾಳ್ಮೆ ಘನಿಕರಿಸುತ್ತಿರಲು
ಒಂದು ದಿನದ ಆಚರಣೆ ಸಾಕೆ…
ಅಸಮಾಧಾನದ ಪ್ರಳಯಾಂತಕವೆ ಇವಳು
ಸ್ವಾಭಿಮಾನದ ಕಿಚ್ಚು ಹೆಣ್ಣು
ನಿನಗೆ ಬೇಕೇ ಅಬಲೆಯ ಪಟ್ಟ??!!
ಮಾಜಾನ್ ಮಸ್ಕಿ