ಕಾವ್ಯ ಸಂಗಾತಿ
ವಿಷ್ಣು ಆರ್. ನಾಯ್ಕ
ಬಸ್ ಕಂಡಕ್ಟರ್ ಮತ್ತು ಬದುಕು..
ಎಷ್ಟೋ ಜನರು ಬರುತ್ತಾರೆ..
ಹೋಗುತ್ತಾರೆ..
ಕನಸು ಕಟ್ಟಲು ಅಲ್ಲ..
ಬದುಕು ರೂಪಿಸಲಲ್ಲ..
ಕಾಮನಬಿಲ್ಲಿನ ಹಾಗೆ…
ಮರೀಚಿಕೆಯಾಗಿ..
ಸಂಬಂಧಗಳ ಹಂಗಿಲ್ಲ
ಟಿಕೆಟ್…ಟಿಕೆಟ್…
ಎಲ್ಲಿಗೆ? ಹಣ ಕೊಡಿ…
ಟಿಕೆಟ್ ಜೋಪಾನ…
ಇಷ್ಟೇ ಕಂಡಕ್ಟರ್ ವರಸೆ..
ನಿತ್ಯ ನೂತನ
ನಿರಂತರ ಪಯಣ
ಕಂಡಕ್ಟರ್ ನಂತೆ ಬದುಕು ಕೂಡಾ..
ಈಗ ಜೊತೆಯಿದ್ದವರೂ ನಾಳೆ
ಅಗಲಲೇ ಬೇಕು
ಬದುಕಿನ ನಿಲ್ದಾಣ ಬರಲೇ ಬೇಕು
ಟಿಕೆಟ್ ನೀಡದಿದ್ದರೆ.. , ಪಡೆಯದಿದ್ದರೆ..
ಶಿಕ್ಷೆ ತಾನೆ..?
ಹಾಗೆ ಬದುಕಲ್ಲೂ ಇದೆ
ಮಾಡಿದ ತಪ್ಪುಗಳಿಗೆ ಶಿಕ್ಷೆ
ಬಸ್ ಕೆಟ್ಟಂತೆ ಕೆಲವೊಮ್ಮೆ
ಬದುಕು ಕೆಡುತ್ತದೆ
ರಿಪೇರಿಗಾಗಿ ಕಾಯುತ್ತದೆ
ರಿಪೇರಿ..,ಪಯಣ..
ಅನುಮಾನ, ಆಶಾವಾದ
ಕ್ಷಣ…ಕ್ಷಣ..
ಎಂದು ಬರಲಿದೆ ಸಂತಸದ ನಿಲ್ದಾಣ..?
ಕಂಡಕ್ಟರ್ ನ ಆಶಾವಾದ ಬದುಕಿಗೂ ಇದೆ
ಖಾಲಿಯಾಗದು ಬಸ್ಸು…ಬದುಕು
ಎಂದೂ…ಯಾವತ್ತೂ…
ಎಲ್ಲೋ ಕಾದಿದ್ದಾರೆ
ಪಯಣಿಗರು, ಜೊತೆಗಾರರು
ಸಿಗುತ್ತದೆ ಬದುಕಿನುದ್ದಕ್ಕೂ
ಭಾವನೆಗಳು..,ಹಣ… ,ಟಿಕೆಟ್…
ಬದುಕು , ಬಸ್ಸಿಗಿದೆ
ಕೊನೆಗಾಣದ ನಿಲ್ದಾಣ
ಹೀಗೆ ಕನಸ ಪಯಣ
ಬದುಕು ‘ಜೋಪಾನ’
ವಿಷ್ಣು ಆರ್. ನಾಯ್ಕ