‘ಅವನಿ’
ನಿಂಗಮ್ಮ ಭಾವಿಕಟ್ಟಿ ಹುನಗುಂದ
ನಾ ‘ಅವನಿ’ ಯಾದರೆ
ನೀ ‘ಅವನು’ ಬಾ ನೆನೆಯೋಣು
ಪದುಮವಾದರೆ ನಾ
ನೀನರುಣ ಬಾ ಅರಳೋಣು
ನಾ ನವಿಲಾದರೆ ನೀ ಮುಗಿಲು ಬಾ ನಲಿಯೋಣು
ಹೆಣ್ಣೆಂಬ ಹೆಮ್ಮೆ ಹಮ್ಮಿದ್ದರೆ ಅದು ನಿನ್ನದೂ
ಮುಂದಾರು? ಬೇಡ
ಪೂರಕವೆಂಬುದಷ್ಟೇ
ಇದ ಬಿಟ್ಟು ಕೊಚ್ಚಿಕೊಳುವ ಇರಾದೆ ನನಗಿಲ್ಲ.
ಬೆಲೆ ಗೌರವ ಕೊಡೆನ್ನಲೇಕೆ? ಅದು ನಿನ್ನದೂ ಆದರೆ ನನ್ನದೂ ಪಾಲಾಗದ ಹಕ್ಕು.
ದೃಷ್ಟಿ ತಪ್ಪಿದರೆ ಸೃಷ್ಟಿಯಸಮ ನಿಭಾಯಿಸಲಾರೆ
ಯುದ್ದ ಭೂಮಿಯಲಿ ಅಂತರಿಕ್ಷದಲಿ, ಹೆಜ್ಜೆಗುರುತುಗಳಿರುವಾಗಲೂ ಬೀಗುವೆಯಾದರೆ
ನೀನರ್ಧವೇ..
ನಿಂಗಮ್ಮ ಭಾವಿಕಟ್ಟಿ ಹುನಗುಂದ .