ಸಾಂಗತ್ಯ
ನಳಿನ ಡಿ ಚಿಕ್ಕಮಗಳೂರು
ಈಗೀಗ ಪದಗಳು ಜಾರಿ,
ನಮ್ಮಗಳ ರಸ ಸಾಮ್ರಾಜ್ಯ ಮೀರಿ ಓಡುತ್ತಿವೆ,
ಕಾಳ ರಾತ್ರಿಯ ಏಕಾಂತಗಳನೂ
ನಿನ್ನ ನೆನಪಿಲ್ಲದೇ ಸಹಿಸಬಲ್ಲೆನಾದರೂ,
ನಿಟ್ಟುಸಿರೊಂದು ತಟಕ್ಕನೆ
ನಿನ್ನ ಕೇಳಬೇಕೆ?
ಅಹೋರಾತ್ರಿ ಕನಸಿನಲ್ಲಿ
ಸಿಗಬೇಡವೋ?
ಬಿಡುವು ಮಾಡಿಕೊಂಡು ಮಲಗಿರುವುದು ಸುಖಕ್ಕಲ್ಲ, ಶ್ರಮ ನಿವಾರಣೆಗೆ..
ಕಣ್ಣೆಳೆಯುತವೆ ಯಾರೋ ಮಗ್ಗುಲು ಬದಲಾಯಿಸುತ್ತಾರೆ,
ಯಾರ ಮಕ್ಕಳಿಗೆ ಇನ್ನಾರೋ ಹಸಿವಇಂಗಿಸುತ್ತಾರೆ
ಗರಗಸವಾಗದಿರಲಿ ನನ್ನ ನೆನಪುಗಳು ನಿನಗೆ,ಮೆದುಳು ಸಾಕುವ ಗಟ್ಟಿಗಿತ್ತಿಯ ಮೇಲೆ ಕ್ಷಮೆಯಿರಲಿ, ನಿನ್ನ ಮನೆ ದಾಟಿ ಬಹುದೂರ ಬಂದಿರುವೆ..
ಕೆರೆ ಏರಿಯ ಕೊರೆವ ಚಳಿ
ಮುಗಿಸಿದೆ
ನಳಿನ ಡಿ ಚಿಕ್ಕಮಗಳೂರು
ನಿಟ್ಟುಸಿರನ್ನು
ಜೋಡಿಸಿ
……………..
ಕವಿತೆ ದಾಖಲಾಗುತ್ತದೆ…