ಅವಳ ಪ್ರತಿ ಘಳಿಗೆಗಳಲ್ಲು ನಲಿವಿರಲಿ
ಟಿ.ದಾದಾಪೀರ್. ತರೀಕೆರೆ
ಸುಡುವ ಸೂರ್ಯನು ಪುರುಷನಾಗಿದ್ದಾನೆ
‘ಆದರೆ ಮಬ್ಬು, ಮುಸುಕುಗಳ ತೊಳೆವ
ಅವಳ ಮೈಯ ಬಣ್ಣದ
ಬೆಳಕಿನ ಕಾಂತಿಗೆ ಹೆಣ್ಣಿನ ಘನತೆಯ ತಂಪಿದೆ’
ಸೃಷ್ಟಿ ಯಾವ ಲಿಂಗ ?ಎನ್ನುವ
ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ
‘ಮುಂಗುರುಳು, ಕೆಂದುಟಿಯ
ಅವಳ ಚೆಲ್ವಿನಲಿ ಆಕಷ೯ಕ
ಸ್ತ್ರೀತ್ವದ ಲಜ್ಜೆಯ ಗುರುತುಗಳಿವೆ’
ಕದಲದೆ ನಿಂತ ಕಡಲು ಹೆಣ್ಣೊ,ಗಂಡೊ ಎಂಬ
ಜಿಜ್ಞಾಸೆ ಗಳ ಮಧ್ಯೆ
‘ಕಡಲಿನ ತೀರದ ಅವಳ ಗಾಢ ಮೌನ ಮತ್ತು ಗಂಭೀರತೆಯಲಿ
ಮನ ಕಲಕುವ ಮಾತೃತ್ವವಿದೆ’
ಸಂಜೆ ಬಾಡುವ ಹೂಗಳಿಗೆ
ಅವಳ ಏಕೆ ಹೋಲಿಸಲಿ
‘ಅವಳ ಮುಂಗೋಪ, ಮುನಿಸುಗಳ
ಹಿಂದಿರುವ ಪ್ರೀತಿಗೆ ಎಂದೂ
ಕಳೆ ಗುಂದದಿರುವ ತಾಯಿ ಕಾರುಣ್ಯವಿದೆ’
ಅವಳಿಗೆ ವಷ೯ದ ಒಂದು ದಿನ ಮಾತ್ರ ಏಕೆ ಹೊಗಳಿಕೆ
‘ಸುಡುವಾಗ್ನಿಯಲ್ಲು ತಂಪು ಚೆಲ್ಲುವ
ಕತ್ತಲೆಗೆ ಬೆಳಕಾಗುವ
ಬೆಳದಿಂಗಳ ದೀಪದ
ಅವಳ ಪ್ರತಿ ಘಳಿಗೆಯಲ್ಲು ಹೊಸತನದ ನಲಿವಿರಲಿ.
ಟಿ.ದಾದಾಪೀರ್. ತರೀಕೆರೆ
ಚೆನ್ನಾಗಿದೆ