ವನಿತೆಯಳಲು
ವಿಮಲಾರುಣ ಪಡ್ಡoಬೈಲು.
ತಂಗಾಳಿ ಬೀಸುವ ಮುಸ್ಸಂಜೆಯಲ್ಲಿ
ಹೃದಯದಿ ನಾದವು ಹೊಮ್ಮಿತ್ತು
ಆ ನಾದಕೆ ಹೆಣ್ಣೇ ನೀ ಶೃತಿಯಾದೆ.
ಹೆಣ್ಣು ಹೆಣ್ಣೆಂಬ ಭಾವದಿ
ಹೆಣ್ಣು ನಶಿಸುವ ಲೋಕದಿ
ಹೆಣ್ಣಿಗೆ ಹೆಣ್ಣೇ ಹೆಣಗುತಿಹಳು
ಹೆಣ್ಣಾ ಉಳಿಸುವ ಕಾತರದಿ.
ಉತ್ತುಂಗಕ್ಕೇರಿಸಿದರು ಹೆಣ್ತನವ
ಭಾರತಾಂಬೆಯ ಹೆಣ್ಣಾಗಿಸಿದರು
ಹರಿವನದಿ ಭೂತಾಯ ಒಡಲ ಹೆಣ್ಣೆಂದರು
ಆದರೂ ಹೆಣ್ಣಿನೆಡೆಯಾಕೆ ಶೂನ್ಯನೋಟ..?
ಪತಿಯ ಕಣ್ ಮನ ತಣಿಸುವಳು ಹೆಣ್ಣೇ
ಹಡೆಯುವಳು ಹೆಣ್ಣೇ
ಕಂದಂಗೆ ಹಾಲುಣ್ಣಿಸಿ ತುತ್ತಾ ನೀಡುವಳು ಹೆಣ್ಣೇ
ಆದರೂ ಪರಿತಪಿಸುವಳು
ತನ್ನ ಬಗೆಗಿನ ಅನಾದರಕ್ಕಾಗಿ.
ತಪ್ಪನ್ನು ತಿದ್ದಿ ತೀಡಿ
ಬದುಕಿನ ಪಾಠವ ಬರೆದವಳು ಹೆಣ್ಣೇ
ಗೃಹ ಕೃತ್ಯಕೆ ಹಬ್ಬಹರಿದಿನದ ಸಡಗರಕೆ
ಹೆಣ್ಣೇ ನೀನಿದ್ದರೆ ಆ ದಿನ ಮೃಷ್ಟಾನ್ನ.
ಒಳ ಹೊರಗು ಸರ್ವಕಾರ್ಯಕು
ಹೆಣ್ಣೇ ನೀನಾಧಾರ
ಆದರೂ ನಡೆಯುತ್ತಿದೆ
ನಿನ್ನ ಭ್ರೂಣಹತ್ಯೆಯು ನಿರಂತರ.
ವಿಮಲಾರುಣ ಪಡ್ಡoಬೈಲು.
Nice