ನಾನೇನ ಬರೆಯಲಿ
ಅಂಬುಜಾ
ಮನಸು ಕಾಲಿಯಾಗಿದೆ
ಲೇಖನಿ ಬತ್ತಿಹೋಗಿದೆ
ನಾನೇನು ಬರೆಯಲಿ ಹೇಳು.
ಮೌನ ಎಲ್ಲೆಡೆ ಪಸರಿಸಿದೆ
ವಿರಹದಿ ಜೀವ ಬೆಂದಿದೆ
ನಾನೇನು ಬರೆಯಲಿ ಹೇಳು||೧||
ಆಕಾಶ ಕಳಚಿ ಬಿದ್ದಿದೆ
ಭೂಮಿ ಬಾಯ್ ಬಿರಿದಿದೆ
ನಾನೇನು ಬರೆಯಲಿ ಹೇಳು.
ಪ್ರಕೃತಿ ವಿಕೋಪ ಮುನಿದೆದ್ದಿದೆ
ಜೀವರಾಶಿಗಳು ಮಸಣ ಸೇರಿದೆ
ನಾನೇನು ಬರೆಯಲಿ ಹೇಳು||೨||
ಧರ್ಮ ಅಳಿದು ಹೋಗುತ್ತಿದೆ
ಅಧರ್ಮ ತಾಂಡವಾಡುತಿದೆ
ನಾನೇನು ಬರೆಯಲಿ ಹೇಳು.
ಹೊಸ ನೀರು ಅಬ್ಬರಿಸುತಿದೆ
ಹೊಸ ನೀರು ಕೊಚ್ಚುತಿದೆ
ನಾನೇನು ಬರೆಯಲಿ ಹೇಳು||೩||
ಹಳೆಬೇರಿಗೆ ನಂಜು ಅಡರುತಿದೆ
ಹೊಸಚಿಗುರು ಕಮರಿ ಬತ್ತುತಿದೆ
ನಾನೇನು ಬರೆಯಲಿ ಹೇಳು.
ಕಾಮಧೇನುವಿಗೆ ಕಾಲವಿಲ್ಲ
ಕಾಡು ಹಂದಿಯದೇ ರಾಜ್ಯವೆಲ್ಲ
ನಾನೇನು ಬರೆಯಲಿ ಹೇಳು||೪||
ಅತ್ತೆಗೆ ಆರು ಮಂದಿ ಬೇಕು
ಸೊಸೆಗೆ ಎರಡೇ ಮಂದಿ ಸಾಕು
ನಾನೇನು ಬರೆಯಲಿ ಹೇಳು.
ಜಗತ್ತು ವಿಶಾಲವಾಗಿದೆ ಹರಡಿದೆ
ಮನಸುಗಳು ಮುದುಡಿ ತರಗಾಗಿದೆ
ನಾನೇನು ಬರೆಯಲಿ ಹೇಳು||೫||
ಅಂಬುಜಾ
Chennagi moodi bandide.innashtu kavanagalu nimminda barali.vagdeviya anugraha nimma melirali.