ಕಾವ್ಯ ಸಂಗಾತಿ
ಕನಸುಗಳು
ಸುಧಾ ಪಾಟೀಲ್
ಕನಸುಗಳು ಭಿತ್ತಿಚಿತ್ರದಂತೆ
ಮೊಗೆದಷ್ಟು ತೆರೆದುಕೊಳ್ಳುವವು
ಕನಸುಗಳು ಬಿತ್ತಿದ ಬೀಜಗಳಂತೆ
ನಿಧಾನವಾಗಿ ಹುಲುಸಾಗಿ ಬೆಳೆಯುವವು
ಭವಿಷ್ಯವನ್ನು ರೂಪಿಸುವ ಕನಸುಗಳು
ಅಭಿರುಚಿಯ ಬಿಂಬಿಸುವ ಕನಸುಗಳು
ವಿಚಾರಧಾರೆಯ ನಿರೂಪಿಸುವ ಕನಸುಗಳು
ಗಟ್ಟಿಗೊಂಡು ಹದಗೊಂಡು ನಮಗೆ ಆಕಾರ ಕೊಡುವ ಕನಸುಗಳು
ಕನಸುಗಳು ಬಣ್ಣ ಬಣ್ಣದ ಹಾರಾಡುವ ಚಿಟ್ಟೆಗಳಂತೆ
ಹಿಡಿಯಬೇಕು ಹಿಡಿದಿಟ್ಟುಕೊಳ್ಳಬೇಕು
ಕನಸುಗಳು ಮುಷ್ಠಿಯಲ್ಲಿ ಬಿಗಿಹಿಡಿದ
ಕಪ್ಪೆಚಿಪ್ಪಿನಂತೆ
ತೆರೆಯಬೇಕು ತೆರೆದು ನೋಡಬೇಕು
ಕನಸುಗಳು ಬೆಚ್ಚನೆಯ ಹೊದಿಕೆಯಲ್ಲಿ
ಅರಳುವ ಹೂಗಳು
ಅಘ್ಹ್ರಾಣಿ ಸಬೇಕು ಅನುಭವಿಸಬೇಕು
ಕನಸುಗಳು ಮುತ್ತಿನ ಮಣಿಗಳಂತೆ
ಪೋಣಿಸಬೇಕು ಪೋಷಿಸಬೇಕು
ಕನಸುಗಳು ಬಿತ್ತಿ ಉತ್ತಿ ಬೆಳೆ ಬೆಳೆದ ಹಾಗೆ
ಸಾಕಾರಗೊಳ್ಳುವವು
ಕನಸುಗಳು ಎದೆಯಲ್ಲಿ ಅಡಗಿರುವ
ಗುಟ್ಟುಗಳು ಕನವರಿಕೆಗಳು
ಸಾವಿರ ಸಾವಿರ ನೆನಪುಗಳು
ಬನ್ನಿ ನಾವೆಲ್ಲ ಸೇರಿ ನಮ್ಮ ನಮ್ಮ
ಕನಸುಗಳನ್ನು ನನಸಾಗಿಸೋಣ
ನನಸಾಗಿಸೋಣ
Very well expressed
Beautiful poem
Dr Shashikant Pattan