ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ. ಪುಷ್ಪಾ ಶಲವಡಿಮಠ

ಜನುಮ -ಜನುಮಗಳ ಪ್ರೇಮ
(ಬಸವಣ್ಣ -ನೀಲಲೋಚನೆಯ ಮಧುರ ಪ್ರೇಮ )

ಸಮುದಿತ ಶಬುದಗಳಲ್ಲಿ ಕಂಡೆ
ನಿನ್ನ ವಿಮಲ ಮತೀಯs
ಸಮೋಜ್ವಲ ಕಣ್ಣ ಕಾಂತಿಯಲಿ ಕಂಡೆ
ನಿನ್ನ ಸುಜಲ ಮನಸs
ಬಸವಾ ಎನ್ನ ಬಸವಾ
ನಿನ್ನ ಸರ್ವಾoಗ ಸೌಂದರ್ಯದ
ಭಾವ ವಿನ್ಯಾಸದ ಮನಮೋಹಕ
ದಿವ್ಯ ಪ್ರತಿಮೆಯ ಕಂಡು ಬೆರಗಾದೆ
ಕೂಡಲಸಂಗಮ ದೇವನ ಹೃದಯದಲ್ಲಿ
ವಿರಾಜಿಸಿದ ದೇವ ಮಾನವನ ಕಂಡು ಬೆರಗಾದೆ
ಬೆರಗಿನಲಿ ನಿಬ್ಬೆರಗಾಗಿ ನಿಂದೆ!
ಸಮತೆಯ ಮಮತೆಯ ಬಸವ ಪ್ರಭುವೇ!
ನಿನ್ನ ನೋಡಿ ನನ್ನನ್ನೇ ಮರೆತೆ ಮತ್ತೇ ಮತ್ತೇ.

ಎನ್ನೆದೆಗೊಳದ ಹೂವೇ!
ನಿನ್ನ ಮೃದುಲ ನಿರ್ಮಲ
ಸುಕೋಮಲ ಭಾವವ
ಪುಷ್ಪಮಾಲೆ ಮಾಡಿ
ಬಸವನಿಗರ್ಪಿಸಿ ಕೃಥಾರ್ತಳಾದ
ಓ ನೀಲಲೋಚನೆಯೇ!
ವಿಚಾರಪಥನಿಯೇ…..!
ಪೃಥ್ವಿಯಗಲದ ಚಲುವೆಯೇ!
ನಿನ್ನ….
ಒಂಟಿಯಾಗಿ ಬಿಟ್ಟು ಈಗ
ಸಂಗಮಕ್ಕೆ ಹೋಗಲಾರೆ
ಮುಳುಗಿದರೂ ತಂಗಡಿಗಿಯಲಿ
ಕೂಡಿಯೇ ಮುಳುಗೋಣ….


ಡಾ. ಪುಷ್ಪಾ ಶಲವಡಿಮಠ

About The Author

2 thoughts on “ಜನುಮ -ಜನುಮಗಳ ಪ್ರೇಮ<br>(ಬಸವಣ್ಣ -ನೀಲಲೋಚನೆಯ ಮಧುರ ಪ್ರೇಮ )”

Leave a Reply

You cannot copy content of this page

Scroll to Top