ಕಾವ್ಯ ಸಂಗಾತಿ
ಸುಧಾ ಪಾಟೀಲ್
ಪದಗಳು
ತಡಕಾಡಿದೆ ಪದಗುಚ್ಚಗಳ
ಪದಗಳ ಪುನರಾವರ್ತನೆಯಾಗದಂತೆ
ಪರದಾಡಿದೆ ಪದವಿನ್ಯಾಸ ಗಳ
ಅರ್ಥ ಗಳನ್ನು ಹುಡುಕುವ
ಶಬ್ದ ಕೋಶದಲ್ಲಿ
ಹುಡುಕಾಡಿದೆ ಪದರಂಗದ
ಚೌಕು ಮನೆಗಳ ಚೌಕಟ್ಟಿನಲ್ಲಿ
ಪದರು ಪದರಾಗಿ ಬಿಡಿಸಿಟ್ಟ
ಹಾಳೆಯಲ್ಲಿ, ಪದವಿಭಾಗ ಮಾಡಿ
ಪದಪಲ್ಲಟ ಮಾಡ ಹೊರಟೆ
ಪದ ಪುಂಜಗಳ ನಡುವೆ
ಪದಾರ್ಪಣ ಮಾಡಿ
ಪದಾವೃತ್ತಿ ಮಾಡ ಹೊರಟೆ
ಪರಾಮರ್ಶೆ ಮಾಡದೇ, ಪರೀಕ್ಷಕಳಾ ಗದೆ, ಪದಜೋಡಣೆ ಮಾಡಿ
ಪರಭಾರೇ ಮಾಡುವ ಕಾತುರ
ಪರವಶಳಾಗಿ ಪರವಾನಗಿ
ಬೇಡದೆ, ಛಾಪು ಒತ್ತುವ ಅವಸರ
ಪದಗಳ ಜೋಡಣೆಗೆ
ಪರಾಗ ಸ್ಪರ್ಶದ ತಳುಕು
ಪದಗಳ ವಿಂಗಡಣೆಗೆ
ಸಾರ್ಥಕತೆಯ ಮೆರುಗು
ಪರಾಂಬರಿಸುವ, ವಿಮರ್ಶಿಸುವ
ಕೇಳುಗರೇ ನೀವೇ ನನ್ನ ಪದಗಳ ಹೆಜ್ಜೆಗುರುತುಗಳು
ಪದಗಳ ಸುಂದರ ಮನಸಿನ ಪದರನ್ನು ಬಿಚ್ಚಿಟ್ಟ ಭಾವ ತುಂಬಾ ಚೆನ್ನಾಗಿ ಮೂಡಿ ಬಂದಿದೆ..ಸುಧಾ .
ಪ್ರಥಮ ಪದಪುಂಜಗಳನ್ನು ಪಾರದರ್ಶಕತೆಯಿಂದ ಜೋಡಿಸಿ ಪ್ರೇಕ್ಷಕರನ್ನು ಪುಳಕಿತಗೊಳಿಸಿರುವಿರಿ ಸುಧಾ
ಪರಿಪೂರ್ಣ ಅರ್ಥದಿ ಪದಗಳಪುಂಜವನ್ನು ಪದವಾಗಿಸಿ ಪ್ರಫುಲ್ಲತೆಯಿಂದ ಪಸರಿಸುವಂತೆ ಮಾಡಿರುವಿರಿ ಸುಧಾ …. ಅತ್ಯಂತ ಸುಂದರವಾಗಿ ಮೂಡಿಬಂದಿದೆ .
ಪ್ರಥಮ ಪದಪುಂಜಗಳನ್ನು ಪಾರದರ್ಶಕತೆಯಿಂದ ಜೋಡಿಸಿ ಪ್ರೇಕ್ಷಕರನ್ನು ಪುಳಕಿತಗೊಳಿಸಿರುವಿರಿ ಸುಧಾ -❣️
Great I like it. Keep it up
Padagalu tumba channagi moodi bandide Sudha akka well written, keep it up
Beautifully written