ಸವಿತಾ ನಾಗಭೂಷಣರವರ ಕವಿತೆ ತೆಲುಗಿಗೆ ಅನುವಾದ ಸ.ರಘುನಾಥ ಅವರಿಂದ

ಅನುವಾದ ಸಂಗಾತಿ

ರಾಮ ಕೃಷ್ಣ ಶಿವ

ಕನ್ನಡ ಮೂಲ:ಸವಿತಾ ನಾಗಭೂಷಣ

ತೆಲುಗು ಅನುವಾದ : ಸ. ರಘುನಾಥ

ರಾಮ ಕೃಷ್ಣ ಶಿವ

ಕಚ್ಚಿ ರುಚಿ ನೋಡಿದ
ಹಣ್ಣಿಗೆ ತುಟಿ ಹಚ್ಚಿದನಲ್ಲ
ಆ ರಾಮ
ನನಗೆ ಪ್ರಿಯನಾಗಲಿ

ಒಂದಗುಳು ಅನ್ನವನೆ
ಉಕ್ಕಿಸಿ
ಹಸಿವಿನ ಸೊಕ್ಕಡಗಿಸಿದನಲ್ಲ
ಆ ಕೃಷ್ಣ
ನನಗೆ ಪ್ರಿಯನಾಗಲಿ

ಸತ್ತು ಒರಗಿದ ಸತಿಯ
ಹೊತ್ತು ತಿರುಗಿದನಲ್ಲ
ಅತ್ತು ಸೊರಗಿದನಲ್ಲ
ಆ ಶಿವ
ನನಗೆ ಪ್ರಿಯನಾಗಲಿ

****

ಸವಿತಾ ನಾಗಭೂಷಣ

ರಾಮುಡು ಕೃಷ

ರಾಮುಡು ಕೃಷ್ಣುಡು ಶಿವುಡು

ಕೊರಕಿ ರುಚಿ ಚೂಸಿನ
ಪಂಡುಕು ಮೋವಿಬೆಟ್ಟೆ ಗದಾ
ಆ ರಾಮುಡು
ಪ್ರಿಯಡವ್ವಾಲಿ ನಾಕು

ಒಕ್ಕ ಮೆತುಕು ಬುವ್ವನೇ
ಉಬುಕಿಂಚಿ
ಆಕಲಿ ಮದಮಣಿಚೆ ಗದಾ
ಆ ಕೃಷ್ಣುಡು
ಪ್ರಿಯುಡವ್ವಾಲಿ ನಾಕು

ಗತಿಂಚಿ ಕೋಲಿನ ಸತಿನಿ
ಮೋಸುಕುನಿ ದಿರಿಗಿ ಗದಾ
ಏಡ್ವಿ ನುಚ್ಚುಕುನ್ನಾಡು ಗದಾ
ಆ ಶಿವುಡು
ಪ್ರಿಯಡವ್ವಾಲಿ ನಾಕು

***

ಸ. ರಘುನಾಥ


2 thoughts on “ಸವಿತಾ ನಾಗಭೂಷಣರವರ ಕವಿತೆ ತೆಲುಗಿಗೆ ಅನುವಾದ ಸ.ರಘುನಾಥ ಅವರಿಂದ

  1. ಚಂದದ ಕವಿತೆಗೆ ಚಂದದ ಅನುವಾದ, ಅಭಿನಂದನೆಗಳು ಸರ್

  2. ಅಭಿನಂದನೆಗಳು ಸರ್ ಇಂತಹ ಹಲವಾರು ಕವಿತೆಗಳು ನಿಮ್ಮಿಂದ ಅನುವಾದವಾಗಲಿ ಇತರಿಗೆ ಸ್ಪೂರ್ತಿಯಾಗಲಿ.

Leave a Reply

Back To Top