ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಈಶ್ವರ ಜಿ ಸಂಪಗಾವಿ.

ಗಜಲ್

ಅಂಬಿಗನಿಲ್ಲದ ಬಾಳ ದೋಣಿಯು ಗೊತ್ತುಗುರಿಯಿಲ್ಲದೆ ಸಾಗುತಿದೆ
ನೆರೆತೊರೆಗಳಿಗೆ ಅಂಜದೆ ಉಬ್ಬರ ಇಳಿತಗಳ ಪರಿಯಿಲ್ಲದೆ ಬಾಗುತಿದೆ

ತನಗರಿಯದ ಅಪರಿಮಿತ ಶಕ್ತಿ ಕರಪಿಡಿದು ನಡೆಸುವುದರ ನಂಬಲಿದೆ
ಗೊಂದಲಗಳ ಗೂಡಿನಲಿ ಗುರಿಗಳಿಗೆ ಇಂಬು ಸರಿಯಿಲ್ಲದೆ ತೂಗುತಿದೆ

ನಿರಾಶೆ ಹತಾಸೆ ಬೆಂಕಿಯಲಿ ಕರಗುವ ಮೇಣದ ಗುಂಡಾಗಿ ಸೊರಗಿದೆ
ಅಸ್ತಿತ್ವ ಅರಸಿ ಮನ ಗುರುವಿನ ಗುರುತರ ಬಾಹುಯಿಲ್ಲದೆ ತೇಗುತಿದೆ

ಹತ್ತು ಹಲವಾರು ಸುತ್ತುವರಿದ ಬಣ್ಣಗಳ ಜಾಲ ಚಿತ್ತ ಚಂಚಲ ಮಾಡಿದೆ
ಏಕತಾನತೆಯ ಏಕಾಗ್ರತೆ ಕೈಗೆಟುಕುವ ಭರವಸೆಯಿಲ್ಲದೆ ಹೋಗುತಿದೆ

ಕಳೆದ ದಿನಗಳ ಕರ್ಮದ ಕೆಸರಲಿ ಹೂತ ಪಾದ ಕೀಳಲು ಹೆಣಗಾಡಿವೆ
ಜನ್ಮ ಸಾರ್ಥಕ ಸಾಧನೆಗೆ ಈಶನ ಕೃಪಾ ಕಟಾಕ್ಷತೆಯಿಲ್ಲದೆ ಮಾಗುತಿದೆ


About The Author

Leave a Reply

You cannot copy content of this page

Scroll to Top