ಕಾವ್ಯ ಸಂಗಾತಿ
ತರಹೀ ಗಜ಼ಲ್
ಶಮಾ. ಜಮಾದಾರ.
ಅನಸೂಯಾ ಜಹಗೀರದಾರ ಮೇಡಮ್ ಅವರ ಮಿಸ್ರವನ್ನು,ಸಾನಿಮಿಸ್ರ ಆಗಿ ಬಳಸಿರುವೆ.
ತರಹೀ ಗಜ಼ಲ್.
ಸಂಚಿನ ಕುಟಿಲತೆಯ ನೀತಿ ಮಣ್ಣಡಿ ಹುಗಿದುಹಾಕಿತು
ಮಿಂಚಿನ ಮುಗುಳ್ನಗೆಯ ಪ್ರೀತಿ ಮುನ್ನುಡಿ ಬರೆಸಿಕೊಂಡಿತು
ತನ್ಮಯತೆಯ ಏಕತಾನತೆಯಲಿ ಸೂರೆ ಗೊಂಡಿತು ತನ್ನತನ
ಮಂಚದ ಮೇಲಿನ ಮಲ್ಲಿಗೆಯು ಮಮ್ಮಲ ಮರಗಿ ಮುರುಟಿತು
ನಿಜವೆಂದುದು ಭ್ರಮೆಯ ಕವಚದಿಂದ ಇಣುಕಿ ದರ್ಶನಕೊಟ್ಟಿತು
ವಿರಾಟ ರೂಪದ ವಂಚನೆಯ ದೈತ್ಯ ಬದುಕನ್ನು ಕೆಡಿಸಿತು
ಅಂದಗೆಟ್ಟ ಜರತಾರಿಗೆಲ್ಲಿಯ ಬೆಲೆ ಮಾನವಂತರ ಪೇಟೆಯಲ್ಲಿ
ಮುಕ್ಕಾದ ಮಡಿಕೆಯಲ್ಲಿ ಜೀವನವು ಸೋರಿ ಬೀದಿ ಪಾಲಾಯಿತು
ನಗೆಯ ನಗವನ್ನು ಹಾಡ ಹಗಲೇ ಶಮೆ ಹಿಡಿದು ಹುಡುಕುತಿರುವೆ
ನನ್ನ ಕಥೆಯಿದು ಬರುವ ಪೀಳಿಗೆಗೆ ದಾರಿ ದೀವಿಗೆಯಾಯಿತು.
ಅರ್ಥಪೂರ್ಣ ಮೇಡಮ್.
ನನ್ನ ಗಜಲ್ ತರಹಿ ಆಗಿಸಿದ್ದಕ್ಕೆ ಧನ್ಯವಾದಗಳು.