ಮಲಯಾಳಂ ಕವಿತೆಯ ಕನ್ನಡಾನುವಾದನನ್ನ ‘ ಶವಪೆಟ್ಟಿಗೆ ‘ಗೆ ಹೆಗಲು ಕೊಡುವ ಮಂದಿಯ ಬಳಿ….!

ಅನುವಾದ ಸಂಗಾತಿ

ನನ್ನ ‘ ಶವಪೆಟ್ಟಿಗೆ ‘ಗೆ ಹೆಗಲು ಕೊಡುವ ಮಂದಿಯ ಬಳಿ….!

ಮಲಯಾಳಂ ಮೂಲ: ಎ.ಅಯ್ಯಪ್ಪನ್.

ಕನ್ನಡ ಅನುವಾದ: ಐಗೂರು ಮೋಹನ್ ದಾಸ್, ಜಿ

ನನ್ನ ‘ಶವಪೆಟ್ಟಿಗೆ ‘ ಗೆ
ಹೆಗಲು ಕೊಡುವ ಮಂದಿಯ ಬಳಿ
ಒಂದು ಕೊನೆಯ ಮಾತು….!

ಜಗತ್ತಿಗೆ ಇನ್ನೂ ತಿಳಿಯದೇ
ಇರುವ ಒಂದು ಮಹಾ
‘ರಹಸ್ಯ’ವನ್ನು ಹೇಳುವೆ ಕೇಳಿ…!

ನನ್ನ ‘ಹೃದಯ’ದ
ಸ್ಥಾನದಲ್ಲಿ ಒಂದು
‘ಹೂವು’ ಇರುತ್ತದೆ…!

ಹದಿಹರೆಯದ ಕಾಲದ
ಕೆಟ್ಟ ದಿನಗಳಲ್ಲಿ ಪ್ರಣಯದ
‘ಆತ್ಮ ತತ್ವ’ ಹೇಳಿಕೊಟ್ಟ
ಪ್ರಣಯ ಸಖಿಯ ಕಾಣಿಕೆ…!

ನನ್ನನ್ನು ಮಣ್ಣುನಲ್ಲಿ ಮುಚ್ಚುವ
ಮುನ್ನ ಹೃದಯದಿಂದ
ಆ ‘ಹೂವು’ ನ್ನು ಕಿತ್ತು
ತೆಗೆಯಬೇಕು….!

ಕೈಗಳಿಂದ ಮುಖವನ್ನು
ಮುಚ್ಚಬೇಕು…!
ಕೈ ರೇಖೆಗಳು ಅಳಿಸಿ
ಹೋಗಿರುವ ಹಸ್ತಗಳಲ್ಲಿ
ಒಂದು ಪ್ರಣಯ ಹೂವು ಇರಬೇಕು..!

ಹೂವುನೊಂದಿಗೆ ನನಗೆ
ಮರಳಿ ಹೋಗಬೇಕು…!

ಮರಣವು ನನ್ನ ಬಳಿ
ನಿಂತಿರುವ ನಿಮಿಷ
ಈ ಸತ್ಯ ಹೇಳಲು
ನನಗೆ ‘ಸಮಯ’ ಇರುವುದಿಲ್ಲ…!

ಸುರಿದು ಕೊಟ್ಟ
ತಂಪಾದ ‘ನೀರು’ನಲ್ಲಿ
ಜೀವವು ಮೃತ್ಯು
ಕಡೆಗೆ ಕೊಚ್ಚಿ ಹೋಗಲಿ…!

ಇಲ್ಲಾದಿದ್ದರೇ ಈ ‘ಶವಪೆಟ್ಟಿಗೆ ‘ಯನ್ನು
ಮುಚ್ಚದೇ ನೀವು
ಹೋಗಿ ಬೀಡಿ… !

ಇನ್ನೂ ನನ್ನ
ಸ್ನೇಹಿತರು
‘ಮರಣ ಹೊಂದಿದವರು’
ಮಾತ್ರ….!!!.


Leave a Reply

Back To Top