ಈಶ್ವರ ಜಿ ಸಂಪಗಾವಿ ಗಜಲ್

ಕಾವ್ಯ ಸಂಗಾತಿ

ಗಜಲ್

ಈಶ್ವರ ಜಿ ಸಂಪಗಾವಿ

ಬಾಯಾರಿ ಬಳಲಿದ ಜೀವಿ ಆಸೆಗಳ ನೀರಿಗೆ ಇಳಿದಿದೆ
ಹಸಿವ ತಾಳದೆ ಬಡತನದ ಮೊಸಳೆ ಬಲಿಗೆ ಸುಳಿದಿದೆ

ನೀರೊಳಗೆ ಅಡಗಿ ಕಾಲನೆಂಬ ಮೊಸಳೆ ಕಚ್ಚಿ ಬಿಟ್ಟಿದೆ
ಪಾರಾಗಲು ಹಂಬಲಿಸಿದೆ ಸೋತು ತಾಪದಿ ಉಳಿದಿದೆ

ಸನ್ನಿವೇಶವರಿತ ಭಕ್ತಿ ನೀರಾನೆ ಬಂದು ಚಿಮ್ಮಿಸರಿಸಿದೆ
ಬದುಕಿದ ಬಡಪಾಯಿ ಬಳಗ ಸೇರಿ ಉಸಿರು ಎಳೆದಿದೆ

ರಕ್ತ ಸುರಿದರೂ ಲೆಕ್ಕಿಸದೆ ಬಾಳಲು ಓಡುತ್ತ ಸಾಗುತಿದೆ
ಬದುಕುಳಿದ ಸಹಚರನ ಕಂಡ ಹಿಂಡು ಖುಷಿ ತಳೆದಿದೆ

ಮಾಂಸ ಭಕ್ಷಕ ಇಚ್ಛೆ ಹುಲ್ಲು ತಿನಲು ಸಾಧ್ಯವೇ ಈಶನೆ
ಅನ್ಯ ಪ್ರಾಣಗಳ ಬಲಿ ಪಡೆವುದು ಸಹಜವೇ ಬೆಳೆದಿದೆ


2 thoughts on “ಈಶ್ವರ ಜಿ ಸಂಪಗಾವಿ ಗಜಲ್

  1. ಈಶ್ವರ ಸರ್ ಕವನ ಸೂಪರ
    ಇನ್ನು ಸ್ವಲ್ಪ ದೊಡ್ಡದು ಇದ್ದರೆ ಚೆನ್ನ
    ಧನ್ಯವಾದಗಳು

  2. ಬದುಕಿನ ಓಟದ ಅಳಿವು ಉಳಿವಿನ ಸೂಕ್ಷ್ಮತೆಯ ಗಝಲ್….ಸುಂದರ ಸೊಗಸು ……..

Leave a Reply

Back To Top