ಸವಿತಾ ಇನಾಮದಾರ್ ಕವಿತೆ-ಕೆಂಪಾಯಿತು ಬಾನು

ಕಾವ್ಯ ಸಂಗಾತಿ

ಕೆಂಪಾಯಿತು ಬಾನು

ಸವಿತಾ ಇನಾಮದಾರ್

ನಲ್ಲಾ..
ನಿನ್ನ ಆಲಿಂಗನದ ಸ್ವರ್ಗ ಸುಖದಲ್ಲಿದ್ದವಳಿಗೆ
ಬೆಳಗಾದದ್ದೇ ತಿಳಿಯಲಿಲ್ಲ..
ಮತ್ತೆ ವಿರಹದ ನೋವ ಕೊಟ್ಟು
ಎನ್ನನಗಲಿ ನೀ ಹೋಗೇ ಬಿಟ್ಟೆಯಲ್ಲ?

ಒಬ್ಬಂಟಿಯಾದಾಗ ಏನೂ ರುಚಿಸದೆನಗೆ
ನನ್ನ ನೋವು ಕಾಣದಾಗಿದೆಯೇ ನಿನಗೆ?.
ನೀನಿರದೆ ಸಿಹಿಯೂ ಕಹಿಯಾಗುವುದು
ಹಸಿವೆಯೂ ಮಾಯವಾಗುವುದು.

ಕಾತರದಿ ನಿನ್ನಾಗಮನಕೆ
ಕಾಯುತಿವೆ ಎನ್ನ ಕಂಗಳು
‘ಚಿನ್ನಾ’ ಎಂಬ ಸವಿ ನುಡಿ ಕೇಳಲು
ಕಾಯುತಿವೆ ಎನ್ನ ಕಿವಿಗಳು.

ನನ್ನ ಪ್ರೀತಿಯ ಆಳ ಅರಿತ
ಆ ಬಾನೂ ಸಹ ಕೆಂಪಗಾಪಾಯಿತು
ಮುತ್ತಿನ ಮಳೆಗೆ ಕಾಯುತ್ತಿದ್ದ
ಇಳೆಯೂ ತಂಪಾಯಿತು.

ಮುಸ್ಸಂಜೆಯಾಯಿತು ಬಂದೆನ್ನ ಸೇರು ನಲ್ಲ
ಇನ್ನುಈ ವಿರಹದ ಬೇಗೆಯನ್ನು ನಾ ತಾಳೆನಲ್ಲಾ.


One thought on “ಸವಿತಾ ಇನಾಮದಾರ್ ಕವಿತೆ-ಕೆಂಪಾಯಿತು ಬಾನು

Leave a Reply

Back To Top