ಸ್ಯಾನಿಟರಿ ಪ್ಯಾಡ್-ಕಾದಂಬರಿ-ಕಂಸ (ಕಂಚುಗಾರನಹಳ್ಳಿ ಸತೀಶ್)

ಪುಸ್ತಕ ಸಂಗಾತಿ

ಕಂಸ (ಕಂಚುಗಾರನಹಳ್ಳಿ ಸತೀಶ್)

ಸ್ಯಾನಿಟರಿ ಪ್ಯಾಡ್(ಕಾದಂಬರಿ)


ಸ್ಯಾನಿಟರಿ ಪ್ಯಾಡ್ – ಕಾದಂಬರಿ
(ಓನ್ಲಿ ಫಾರ್ ಲೇಡೀಸ್ )
ಲೇಖಕರು :ಕಂಸ (ಕಂಚುಗಾರನಹಳ್ಳಿ ಸತೀಶ್)
ಸಹಶಿಕ್ಷಕರು ಸಹಿ ಪ್ರ ಶಾಲೆ ಬೆನಕನಕೊಪ್ಪ ನರಗುಂದ 582207 ಜಿಲ್ಲಾ ಗದಗ
ಪ್ರಕಾಶಕರು: ಕಂಸ ಪ್ರಕಾಶನ ಕಡೂರು ಜಿಲ್ಲೆ ಚಿಕ್ಕಮಗಳೂರು
Price:100/
ಮುದ್ರಣ:ಭವಾನಿ ಪ್ರಿಂಟರ್ಸ್

ಬಸ್ ಸ್ಟ್ಯಾಂಡ್ ಹತ್ರ ,ಬೆಟಗೇರಿ ಗದಗ.

ಈ ಕಾದಂಬರಿಯನ್ನು ಲೇಖಕರು ತಮ್ಮ ತಂದೆ ಮತ್ತು ತಾಯಿ ಅವರಿಗೆ ಸಮರ್ಪಿಸಿದ್ದಾರೆ.
ಈ ಕಾದಂಬರಿಯ ವೈದ್ಯಕೀಯ ವಿಷಯದ ಸುತ್ತ ಹೆಣೆದ ಒಂದು ಸುಂದರ ಕಥೆಯಂತಿದೆ.ಲೇಖಕರು ಹಳ್ಳಿಯಲ್ಲಿ ಹುಟ್ಟಿ ಬೆಳೆದವರು, ಹಳ್ಳಿಯ ಸೊಬಗು ಸೌಂದರ್ಯವನ್ನು ,ಸಂಬಂಧಗಳನ್ನು, ಶಾಲೆಗೆ ಹೋಗುವ ಪ್ರಸಂಗವನ್ನು, ಗೆಳೆಯರ ಒಡನಾಟವನ್ನು, ಬಡತನದ ಬೇಗೆಯನ್ನು ,ಕೂಲಿ ನಾಲಿ ಮಾಡುವವರ ಸ್ಥಿತಿಗತಿಗಳನ್ನು ಮನಮುಟ್ಟುವಂತೆ ಬಿಚ್ಚಿಟ್ಟಿದ್ದಾರೆ.ಲೇಖಕರು ಮಲೆನಾಡಿನ ಮೂಲದವರಾದರು ಕಥೆಯುದ ಕ್ಕೂ ಕರ್ಮಭೂಮಿ, ಬೆಳವಲದ ಗಂಡು ಭಾಷೆಯ ಸೊಗಡು ಸೊಬಗು ಚೆನ್ನಾಗಿ ಮೂಡಿಬಂದಿದೆ.

ಈ ಕಾದಂಬರಿಯ ಮೂಲ ಸಾರಾಂಶವೇನೆಂದರೆ ಕೇವಲ ಒಂದು ಸ್ಯಾನಿಟರಿ ಪ್ಯಾಡ್ ನಿಂದ ರೂಪಗೊಂಡ ಕಥೆಯಾಗಿದೆ. ಕಥಾರಾಯಕ ಒಮ್ಮೆ ನರಗುಂದದಿಂದ ಹುಬ್ಬಳ್ಳಿಗೆ ಬಸ್ಸಿನಲ್ಲಿ ಹೊರಟಾಗ ದಂತದ ಗೊಂಬೆಅಂತಹ ಹುಡುಗಿ ಖಾಲಿ ಇದ್ದ ಮಗ್ಗಲು ಸೀಟಿನಲ್ಲಿ ಕೂರುತ್ತಾಳೆ. ಹರೆಯದ ಕಥಾನಾಯಕ ವಯೋ ಸಾಹಸ ಪ್ರಚೋದನೆಗಳಿಂದ ಮಾತು ಬೆಳೆಯುತ್ತಾನೆ. ಹರಟೆ ಗುಂಗಿನಲ್ಲಿ ಹುಬ್ಬಳ್ಳಿ ಬಂದಂತೆ ಗೊತ್ತಾಗುವುದಿಲ್ಲ.

ಇಲ್ಲಿಂದ ಸ್ಯಾನಿಟರಿ ಪ್ಯಾಡೆನ್ನ ಪರಿಚಯ ಸಂಶೋಧನೆಗಳು ಸರಮಾಲೆಗಳು ಬಿಚ್ಚಿಕೊಳ್ಳುತ್ತವೆ ನಿರಂತರ ಮಾತನಾಡುವುದು ಸ್ನೇಹ ಬೆಳೆಯುವುದು ನಂತರ ಪ್ರೀತಿಗೆ ತರುವುದು ಸಿನಿಮೀಯವಾಗಿ ಸಾಗುತ್ತದೆ. ಮದುವೆಗೆ ಜಾತಿ ಅಂತಸ್ತು ಅಡ್ಡ ಬಂದಾಗ ತೊಡೆದುಹಾಕಿ ಮದುವೆಗೆ ಸಜ್ಜಾಗುವು ದು ,ಸಂದರ್ಭದ ಸದುಪಯೋಗ ಪಡೆಯಲು ಮುಂದಾಗುವ ಆಟೋವಾಲಾ, ಘರವಾಲಗಳ ಪರಿಚಯ ಮಾಡಿಸುತ್ತಾರೆ. ಇಂಥವರ ಮಾತಿಗೆ ಮರುಳಾಗಿ ತೆಗ್ಗಿಗೆ ಬೀಳಬೇಡಿ ಎಂದು ಎಚ್ಚರಿಸಿದ್ದಾರೆ.
ಈ ಕಾದಂಬರಿಗೆ ಮುನ್ನುಡಿಯನ್ನು ಡಾ. ಕರವೀರ ಪ್ರಭು ಕ್ಯಾಲ್ಕೊಂಡ ಮಾಜಿ ರಾಜ್ಯಾಧ್ಯಕ್ಷರು ಕರ್ನಾಟಕ ವೈದ್ಯ ಸಾಹಿತ್ಯ ಪರಿಷತ್ ಬೆಂಗಳೂರು ಅವರು ಬರೆದಿದ್ದಾರೆ.ಹಾಗೂ ಡಾಕ್ಟರ್ ಬಿ ಟಿ ಲಲಿತಾ ನಾಯಕ್ ಸಾಹಿತಿಗಳು ಮಾಜಿ ಸಚಿವರು ಕೂಡ ಈ ಕಾದಂಬರಿಗೆ ತಮ್ಮ ಪ್ರತಿಕ್ರಿಯೆಯನ್ನು ಸೂಚಿಸಿದ್ದಾರೆ. ಮಹಿಳೆಯರ ನಿರಂತರ ಸಂಕಟದ ವಿಷಯವನ್ನು ಎತ್ತಿಕೊಂಡು ಕಲಾತ್ಮಕವಾಗಿ ಮತ್ತು ಸಂಶೋಧನಾತ್ಮಕವಾಗಿ ಹೆಣೆದು ಆ ಮೂಲಕ ಜನತೆಯ ಹಾಗೂ ಸರಕಾರದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ, ಮಹಿಳೆಗೆ ಋತುಸ್ರಾವದ ಪ್ರಕ್ರಿಯೆ ಪ್ರಕೃತಿದತ್ತವಾದದ್ದು, ಅತ್ಯಂತ ಸಹಜವಾದದ್ದು.ಅಂತಹ ಸಂದರ್ಭದಲ್ಲಿ ಕೈಗೆ ಎಟುಕಲಾರದ ಬೆಲೆ ತೆತ್ತು ಸ್ಯಾನಿಟರಿ ಪ್ಯಾಡ್ ಅನ್ನು ಖರೀದಿಸಲು ಶಕ್ತವಲ್ಲದ ವಿದ್ಯಾರ್ಥಿನಿ ಸಮೂಹ ಕೂಲಿ ಕಾರ್ಮಿಕ ಬಡ ಮಾಧ್ಯಮ ವರ್ಗದ ಮಹಿಳಾಸೂಹಗಳು ಮುಜುಗರ ಅನಾರೋಗ್ಯ ಅಸಹಾಯಕತೆಯಿಂದ ಪರಿತಪಿಸುತ್ತವೆ. ಇದನ್ನು ನಿವಾರಿಸಿ ಮಾನ ರಕ್ಷಣೆ ಆರೋಗ್ಯ ರಕ್ಷಣೆಯ ರಕ್ಷಾ ಕವಚವಾಗಿ ಸ್ಯಾನಿಟರಿ ಪ್ಯಾಡ್ ಅನ್ನು ನಿರಂತರವಾಗಿ ಉಚಿತವಾಗಿ ಒದಗಿಸುವ ಜವಾಬ್ದಾರಿಯನ್ನು ಸರಕಾರ ಬರಲೇಬೇಕು ಎಂಬ ಹಾಕುತ್ತಾಯವನ್ನು ಕಾದಂಬರಿ ಸಮರ್ಥವಾಗಿ ಪ್ರತಿಪಾದಿಸುತ್ತದೆ.

ಈ ಕಾದಂಬರಿಯತಿ ಮುಖ್ಯ ವಿಷಯವೇನೆಂದರೆ, ಮಹಿಳೆಯರ ಸುಚಿತ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಮಹಿಳೆಯರ ಹಕ್ಕು ಎಂದು ಪರಿಗಣಿಸಿ ಸರ್ಕಾರ ರಾಜ್ಯದ ಉದ್ದಗಲಕ್ಕೂ ಸ್ಯಾನಿಟರಿ ಪ್ಯಾಡ್ ಯೋಜನೆಯನ್ನು ರೂಪಿಸಬಹುದಿತ್ತು. ಆದರೆ ಶಾಲಾ ಕಾಲೇಜುಗಳಲ್ಲಿ ಮಾತ್ರ ವಿತರಿಸುತ್ತಿದ್ದು ಅವು ಕೂಡ ನಿರಂತರವಾಗಿ ಶಾಲೆಗಳನ್ನು ತಲುಪುತ್ತಿಲ್ಲ ಜೊತೆಗೆ ಕಳೆದ ಮೂರು ನಾಲ್ಕು ವರ್ಷಗಳಿಂದ ಈ ಯೋಜನೆ ಕಣ್ಮರೆಯಾಗಿದೆ. ಅಲ್ಲದೆ ಕೇವಲ ಶಾಲೆ ಕಾಲೇಜುಗಳಷ್ಟರಲ್ಲಿ ಮಾತ್ರ ಮಹಿಳೆಯರಿಲ್ಲ .
ಮಹಿಳೆಯರಲ್ಲಿ ಋತುಸ್ರಾವ ಎಂಬುದು ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿದ್ದು, ಯಾವಾಗ ಎಲ್ಲಿ ಬೇಕಾದರೂ ಸಂಭವಿಸಬಹುದು ಆದ್ದರಿಂದ ಉಚಿತವಾಗಿ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಬಸ್ ನಿಲ್ದಾಣಗಳಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಎಲ್ಲಾ ಕಡೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಸೆಂಟರ್ ರೂಪದಲ್ಲಿ ವ್ಯವಸ್ಥೆ ಮಾಡಿದರೆ ಮಹಿಳೆಯರಿಗೆ ಸಂಭವಿಸಬಹುದಾದ ಮುಜುಗರ ಅಥವಾ ತೊಂದರೆಯನ್ನು ತಪ್ಪಿಸಬಹುದು ಎಂಬುದು ಈ ಕಾದಂಬರಿಯ ಅತಿ ಮುಖ್ಯ ಉದ್ದೇಶವಾಗಿದೆ.

ಈ ಸ್ಯಾನಿಟರಿ ಪ್ಯಾಡ್ ಮಕ್ಕಳು ಮತ್ತು ಮಹಿಳೆಯರ ವಯಸ್ಸಾದವರ ಮತ್ತು ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ವರದಾನವಾಗಿದೆ ಎಂಬುದು ಅತ್ಯಂತ ಸಂತೋಷದ ವಿಷಯ. ಅದೃಷ್ಟ ವಸಾದ್ ವಿಜ್ಞಾನ ಬೆಳದಂತೆ ಸ್ಯಾನಿಟರಿ ಪಾರಿವಾಳ ಪರಿಚಯವಾಯಿತು ಅಂದ ಹಾಗೆ ಸ್ಯಾನಿಟರಿ ಪ್ಯಾಟರ್ನ್ ಅನ್ವೇಷಣೆಗೂ ಮೊದಲು ಸುಮಾರ್ 10ನೇ ಶತಮಾನದಿಂದಲೂ ಕೂಡ ದಿನಗಳಲ್ಲಿ ಸ್ತ್ರೀಯರು ಬಟ್ಟೆಯನ್ನು ಬಳಸುತ್ತಿದ್ದರು.
ಮೊದಲು ಸ್ಯಾನಿಟರಿ ಪ್ಯಾಡ್ ನ ಬಳಕೆಯು ಫ್ರಾನ್ಸ್ನ ಬೆಂಜಮಿನ್ ಫ್ರಾಂಕ್ಲಿನ್ ಅವರ ಸಂಶೋಧನೆಯಿಂದ ಪ್ರಾರಂಭವಾಯಿತು.
ಮೊದಲು ಇವುಗಳನ್ನು ಜಾಗತಿಕ ಕ್ರಾಂತಿಗಳ ಸಮಯದಲ್ಲಿ ಯುದ್ಧ ಭೂಮಿಯಲ್ಲಿ ಸೈನಿಕರಿಗೆ ಆಗುವ ಗಾಯಗಳ ರಕ್ತಸ್ರಾವವನ್ನು ತಡೆಗಟ್ಟಲು ಬಳಸುತ್ತಿದ್ದರು.1988 ರ ಸುಮಾರಿಗೆ ಇಂಗ್ಲೆಂಡಿನ ಸೈಕಲ್ ಸಹೋದರರು ಹೊಸ ತಂತ್ರಜ್ಞಾನ ಬಳಸಿ ಸ್ಯಾನಿಟರಿ ಪ್ಯಾಡುಗಳನ್ನು ಪರಿಚಯಿಸಿದರು ,ಆದರೆ ಅಧಿಕೃತವಾಗಿ 1896ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಿದವು.

1954 ರಲ್ಲಿ ಮೇರಿ ಭ್ರಯಾ ಟ್ರಯ್ಸ್ ಎನ್ನುವ ಮಹಿಳೆ ಹಕ್ಕು ಪತ್ರವನ್ನು ಪಡೆದು ಸ್ಯಾನಿಟರಿ ಪ್ಯಾಡ್ ಅನ್ನು ನವೀಕರಣಗೊಳಿಸಿದರು ಸ್ಯಾನಿಟರಿ ಪ್ಯಾಡ್ ಗಳ ಬಗ್ಗೆ ಕಾಳಜಿ ಹೊಂದಿದ ಮೊದಲ ಮಹಿಳೆ ಅವರು ತದನಂತರ 1998 ರಲ್ಲಿ ಭಾರತದ ಅರುಣಾಚಲಂ ಮುರುಗನಂತಂ ಎಂಬುವರು ಅತಿ ಕಡಿಮೆ ವೆಚ್ಚದಲ್ಲಿ ಯಂತ್ರದ ಮೂಲಕ ತಯಾರಿಸಲು ಪ್ರಾರಂಭಿಸಿದರು ಅವರ ಹೆಂಡತಿ ಋತು ಶ್ರಾವದ ದಿನಗಳಲ್ಲಿ ಬಳಸುತ್ತಿದ್ದ ಬಟ್ಟೆಯಿಂದಾಗಿ ಅವರು ಸ್ಯಾನಿಟರಿ ಪ್ಯಾಡ್ನ ತಯಾರಿಕೆ ಕೆಲಸಕ್ಕೆ ಕೈ ಹಾಕಿದರು. ಈ ಬೆಳವಣಿಗೆ ಲಕ್ಷಾಂತರ ಹೆಣ್ಣು ಮಕ್ಕಳಿಗೆ ದಾರಿದೀಪವಾಯಿತು.


ಸವಿತಾ ಮುದ್ಗಲ್

One thought on “ಸ್ಯಾನಿಟರಿ ಪ್ಯಾಡ್-ಕಾದಂಬರಿ-ಕಂಸ (ಕಂಚುಗಾರನಹಳ್ಳಿ ಸತೀಶ್)

Leave a Reply

Back To Top