ಡಾ ಶಶಿಕಾಂತ ಪಟ್ಟಣ ಕವಿತೆ-ಮೂರ್ತಿಯಾದೆ

ಕಾವ್ಯ ಸಂಗಾತಿ

ಮೂರ್ತಿಯಾದೆ

ಡಾ ಶಶಿಕಾಂತ ಪಟ್ಟಣ

ಹಲವು ಉಳಿಯ
ಪೆಟ್ಟು ತಿಂದು
ಶಿಲೆಯ ಮೂರ್ತಿ
ಅರಳಿದೆ
ಮೊನಚು ಹೊಡೆತಕೆ
ನೋಯಲಿಲ್ಲ
ಬೆಂದ ಬವಣೆ
ಹೇಳಲಿಲ್ಲ
ದೇವ ವಿಗ್ರಹವಾದ ಮೇಲೆ
ಸಾಲಿನಲ್ಲಿ ಭಕ್ತರು
ಕಲ್ಲು ಸಕ್ಕರೆ ಹಾಲು ತುಪ್ಪ
ನಿತ್ಯ ಹೂವು ತುಳಸಿ ಮಾಲೆ
ಸಹನೆ ಸಂಯಮ ಕಲ್ಲು ಬಂಡೆ
ಶಿಲ್ಪಗಾರನ ಪ್ರೀತಿಯು
ಕಷ್ಟ ನಷ್ಟ ಮೆಟ್ಟಿ ನಿಂತು
ಮೂರ್ತಿಯಾದೆ ಜನರಿಗೆ


11 thoughts on “ಡಾ ಶಶಿಕಾಂತ ಪಟ್ಟಣ ಕವಿತೆ-ಮೂರ್ತಿಯಾದೆ

    1. ಮೊನಚು ಹೊಡೆತಕೆ ನೋಯಲಿಲ್ಲ
      ಬೆಂದ ಬವಣೆ ಹೇಳಲಿಲ್ಲ
      ಮಾರ್ಮಿಕ ಸಾಲುಗಳು

  1. ಡಾ. ಶಶಿಕಾಂತ. ಪಟ್ಟಣ ರವ್ರೆ, ಮೂರ್ತಿಯಾದೆ ನಾನು ತಮ್ಮ ಕಾವ್ಯ ಪೂರ್ಣ ಸುಂದರವಾಗಿದೆ.

Leave a Reply

Back To Top