ಎಸ್.ಕೆ.ಭಗವಾನ್-ಇನ್ನು ನೆನಪು ಮಾತ್ರ

ಎಸ್.ಕೆ.ಭಗವಾನ್-

ಇನ್ನು ನೆನಪು ಮಾತ್ರ

ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕರಾಗಿದ್ದ ದೊರೆ-ಭಗವಾನ್ ಜೋಡಿಯ ಪೈಕಿ ಒಬ್ಬರಾಗಿದ್ದ ಹಿರಿಯ ನಿರ್ದೇಶಿಸಿದ ಎಸ್.ಕೆ.ಭಗವಾನ್ ತಮ್ಮ 90 ನೇವಯಸ್ಸಿನಲ್ಲಿ ವಯೋಸಹಜ ಕಾಯಿಲೆಗಳಿಂದಾಗಿ ನಿಧನಹೊಂದಿದ್ದಾರೆ. ಸದಭಿರುಚಿಯ ಹಾಗೂ ಕಾದಂಬರಿ ಆಧಾರಿತ ಹಲವಾರು ಚಿತ್ರಗಳನ್ನು ನಿರ್ದೇಶಿಸಿರುವ ಭಗವಾನ್, ಕನ್ನಡ ಚಿತ್ರರಂಗ ಕಂಡ ಓರ್ವ ಅಪೂರ್ವಹಾಗೂ ಯಶಸ್ವಿ ನಿರ್ದೇಶಕ ಎಂದು ಹೇಳಬಹುದು. ಅವರ ಮೂಲ ಹೆಸರು ” ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್”. ತಮ್ಮ 65 ವರ್ಷಗಳಿಗೂ ಆಧಿಕ ಚಿತ್ರ ಯಾತ್ರೆಯಲ್ಲಿ ಭಗವಾನ್ ರವರು ದೊರೆಯವರೊಂದಿಗೆ ಸೇರಿ 55 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳ ಪೈಕಿ24 ಚಿತ್ರಗಳು ಕಾದಂಬರಿ ಆಧಾರಿತ ಚಿತ್ರಗಳಾಗಿವೆ. 1956 ರಲ್ಲಿ ಹಿರಿಯ ಸಾಹಿತಿ ಮತ್ತು ನಿರ್ದೇಶಕ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕರಾಗಿ ” ಭಾಗ್ಯೋದಯ” ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಎಸ್ ಕೆ ಭಗವಾನ್, ಪುಟ್ಟಣ್ಣ ಕಣಗಾಲ್ ರವರಂತೆ ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಅಗ್ರಗಣ್ಯರಾಗಿದ್ದರು.. ಕೆಲವು ಚಿತ್ರಗಳನ್ನುತಮ್ಮದೇ ಆದ ಅನುಪಂ ಪ್ರೊಡಕ್ಷನ್ಸ್‌ ಮೂಲಕ ನಿರ್ಮಿಸಿ
ನಿರ್ದೇಶಿಸಿದ್ದಾರೆ. 1971 ರಲ್ಲಿ ಬಿಡುಗಡೆಯಾದ ” ಕಸ್ತೂರಿ ನಿವಾಸ ” ಅವರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದೆ. ಡಾ.ರಾಜ ಕುಮಾರ್ ನಾಯಕತ್ವದಲ್ಲಿ ಅವರು ನಿರ್ದೇಶಿಸಿದ ಬಹುತೇಕ ಚಿತ್ರಗಳು ಯಶಸ್ವಿಯಾಗಿವೆ. ಅನೇಕ ಚಿತ್ರಗಳು ಯಶಸ್ವಿಯಾಗಿ 25 ವಾರಗಳು ಅಥವಾ ಅದಕ್ಕಿಂತ ಹೆಚ್ಚಿಗೆ ಪ್ರದರ್ಶನಗೊಂಡಿವೆ. ಅವುಗಳ ಪೈಕಿ ಎರಡು ಕನಸು ಸಮಯದ ಗೊಂಬೆ, ಗಿರಿ ಕನ್ಯೆ, ವಸಂತ ಗೀತ, ಜೀವನ ಚೈತ್ರ, ಒಡ ಹುಟ್ಟಿದವರು, ನಾನೊಬ್ಬ ಕಳ್ಳ, ಪ್ರತಿದ್ವನಿ,ಯಾರಿವನು ಮುಂತಾದವುಗಳನ್ನು ಹೆಸರಿಸಬಹುದು. ಬಾಂಡ್ ಶೈಲಿಯ ಚಿತ್ರಗಳಾದ ಗೋವಾದಲ್ಲಿ ಸಿ ಐ ಡಿ 999, ಆಪರೇಷನ್ ಡೈಮಂಡ್ ರಾಕೇಟ್, ಜೇಡರ ಬಲೆ ಮುಂತಾದವುಗಳನ್ನು ನಿರ್ದೇಶಿಸಿದ ಭಗವಾನ್ಭಕ್ತಿ ಪ್ರಧಾನ ಚಿತ್ರವಾದ ” ಮಂತ್ರಾಲಯ ಮಹಾತ್ಮೆ ” ಯನ್ನು ನಿರ್ದೇಶಿದರು. ಈ ಚಿತ್ರದಲ್ಲಿ ಬರುವ ” ಇಂದುಎನಗೆ ಗೋವಿಂದ ನಿನ್ನಯ ಪಾದಾರವಿಂದವ ತೊರೊಮುಂಕುಂದನೇ” ಎಂದು ಪ್ರಾರಂಭವಾಗುವ ರಾಘವೇಂದ್ರ ಸ್ವಾಮಿಗಳ ರಚನೆಯನ್ನು ” ರಾಜನ್ ನಾಗೇಂದ್ರ” ಸಂಗೀತ ನಿರ್ದೇಶನದಲ್ಲಿ ಡಾ.ಪಿ.ಬಿ.ಶ್ರೀನಿವಾಸ್ ” ಅತ್ಯಂತ ‌ಮಧುರವಾಗಿ ಹಾಡಿದ್ದಾರೆ. ಇದೇ ಹಾಡನ್ನು ‌” ಎರಡು ಕನಸು ” ಚಿತ್ರಕ್ಕೂ ಸಹ ಬಳಸಿಕೊಳ್ಳಲಾಗಿದ್ದು ಹಿರಿಯ ಗಾಯಕಿ ಎಸ್.ಜಾನಕಿ ಭಾವಪರವಶರಾಗಿ ಅತ್ಯಂತ ತನ್ಮಯತೆಯಿಂದ ಹಾಡಿದ್ದಾರೆ. ಡಾ.ರಾಜಕುಮಾರ್ ನಂತರ. , ಅನಂತನಾಗ್ ನಾಯಕತ್ವದ ಹಲವಾರು ಯಶಸ್ಬಿ ಚಿತ್ರಗಳನ್ನು ಭಗವಾನ್ ನಿರ್ದೇಶಿಸಿದ್ದಾರೆ. ಅವುಗಳ ಪೈಕಿ‌ ಬಯಲು ದಾರಿ, ಚಂದನದ ಗೊಂಬೆ, ಬೆಂಕಿಯ ಬಲೆ, ಸೇಡಿನ ಹಕ್ಕಿ, ಬಿಡುಗಡೆಯ ಬೇಡಿ ಮುಂತಾದವುಗಳನ್ನು ಹೆಸರಿಸಬಹುದು ‌ ಶಂಕರ್ ನಾಗ್ ನಾಯಕತ್ವದ ” ಮುನಿಯನ ಮಾದರಿ” ವಿಷ್ಣುವರ್ಧನ್ ನಾಯಕತ್ವದ ” ನೀನು ನಕ್ಕರೆ ಹಾಲು ಸಕ್ಕರೆ” ಮುಂತಾದ ಯಶಸ್ವಿ ಚಿತ್ರಗಳ ಪಟ್ಟಿಯೇ ನಮಗೆ ದೊರಕುತ್ತದೆ. ಅನಂತನಾಗ್ ಮತ್ತು ಲಕ್ಷ್ಮೀ ಇವರನ್ನು ತಮ್ಮ ಚಿತ್ರಗಳ ಮೂಲಕ ಯಶಸ್ವಿ ಜೋಡಿಯನ್ನಾಗಿಸಿದ ಕೀರ್ತಿಯು ಸಹ ಇವರಿಗೆ ಸಲ್ಲುತ್ತದೆ. ಸ್ವಲ್ಪ ಕಾಲ ದೊರೆಯವರೊಂದಿಗೆ ಯಾವುದೋ ಕಾರಣಕ್ಕೆ ಮುನಿಸಿಕೊಂಡಿದ್ದ ಭಗವಾನ್ ತಾವೊಬ್ಬರೇ ಒಂದು ಚಿತ್ರವನ್ನು ನಿರ್ದೇಶಿಸಿ ಕೈ ಸುಟ್ಟುಕೊಂಡಿದ್ದರು.

ಪುನಃ ಈ ಜೋಡಿ ಒಂದಾಗಿತ್ತು. ಇದಾದ ಕೇಲವೇ ತಿಂಗಳುಗಳ ಅಂತರದಲ್ಲಿ ಈ ಜೋಡಿಯ ಪೈಕಿ
ಒಬ್ಬರಾಗಿದ್ದ ‌” ದೊರೆಯವರು ನಿಧನ ಹೊಂದಿದರು. ನಂತರ ಭಗವಾನ್ ಕೂಡ ತೆರೆಯಿಂದ ಮರೆಯಾದರೂ ಸಹ ಚುಟುವಟಿಕೆಯ ಹಾಗೂ ಶಿಸ್ತುಬದ್ಧ ‌ಜೀವನ ನಡೆಸುತ್ತಿದ್ದರು. ಕೆಲವು ತಿಂಗಳ ಹಿಂದೆ ತೀವ್ರ ಅನಾರೋಗ್ಯ ಪೀಡಿತರಾಗಿದ್ದ ಅವರುಚಿಕಿತ್ದೆ ಪಡೆದು ಮನೆಗೆ ಹಿಂದಿರುಗಿದ್ದರು. ಡಾ.ರಾಜ್ ಕುಮಾರ್ ರವರ ಯಶಸ್ಸಿಗೆ ಸ್ವಲ್ಪಮಟ್ಟಿಗೆ ದೊರೆ- ಭಗವಾನ್‌ ಜೋಡಿಯೂ ಸಹ ಕಾರಣವೆನ್ನಬಹುದು. ಡಾ.ರಾಜಕುಮಾರ್ ರವರ ಪರಮಾಪ್ತರ ಪೈಕಿ ಒಬ್ಬರಾಗಿದ್ದ ಭಗವಾನ್ ಡಾ.ರಾಜ ಕುಮಾರ್ ನಡೆಸಿಕೊಡುತ್ತಿದ್ದ ರಸ ಮಂಜರಿ ಕಾರ್ಯಕ್ರಮಗಳಲ್ಲಿ
ಡಾ.ರಾಜಕುಮಾರ್ ಹಿಂದೆ ಮುಂದೆ ಓಡಾಡುತ್ತ ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆ ಕಟ್ಟುತ್ತಿದ್ದರು. ಡಾ.ರಾಜಕುಮಾರ್, ದೊರೆ ಭಗವಾನ್ ಹಾಗೂ ಚಿ.ಉದಯಶಂಕರ್ ಕನ್ನಡ ಚಿತ್ರರಂಗದ ” ಅಪೂರ್ವ ಸಂಗಮ” ದಂತಿದ್ದರು.

ಇವರ ಸುದೀರ್ಘ ಕಲಾಸೇವೆಯನ್ನು ಪರಿಗಣಿಸಿ,2017 ರಲ್ಲಿ ಚಿತ್ರೋದ್ಯಮದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ” ದಾದಾ ಸಾಹೇಬ್ ಫಾಲ್ಕೆ ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅದಕ್ಕಿಂತ ಮುಂಚೆ ಅಂದರೆ 1995-96 ನೇ ಸಾಲಿನ “ಪುಟ್ಟಣ್ಣ ಕಣಗಾಲ್ ಪ್ರಶಸ್ತಿ” ನೀಡಿ
ಗೌರವಿಸಲಾಗಿದೆ. ಪ್ರಶಸ್ತಿಗಳನ್ನು ಮೀರಿ ನಿಂತ ಈ ಹಿರಿಯ ನಿರ್ದೇಶಕರಿಗೆ ಗೌರವಪೂರ್ವಕ ಶ್ರದ್ಧಾಂಜಲಿಗಳು.


ಕೆ.ವಿ.ವಾಸು

One thought on “ಎಸ್.ಕೆ.ಭಗವಾನ್-ಇನ್ನು ನೆನಪು ಮಾತ್ರ

Leave a Reply

Back To Top