ಕಾವ್ಯ ಸಂಗಾತಿ
ಇಮಾಮ್ ಮದ್ಗಾರ್
ನೀನೆ ಹೇಳಬೇಕಿದೆ
ಶಾಂತವಾಗಿದ್ದ ಮನದ ನದಿಗೆ
ಒಲುಮೆಯ ಕಲ್ಲೆಸೆದು ಅಲೆಗಳ
ನೆಬ್ಬಿಸಿದೆ
ಅಂಕೆಗಳ ಅಂಕುಶವಿಲ್ಲ
ಅಲೆಗಳಿಗೆ
ಈಗ ಅಲೆಗಳ ಶಾಂತವಾಗಿಸಲು
ನೀನೇ..ಕೇವಲ ನೀನೇ ಬೇಕು
ಖಾಲಿಯಾಗಿದ್ದ ಮನಸಿಗೆ ನೀನೆ
ಕನಸಿನರುಚಿ ಕಲಿಸಿದ್ದು
ಈಗ ನಿನಗಾಗಿ ಕೂಡಿಟ್ಟ ಕನಸು
ಮತ್ಯಾರಿಗೇ ಕೊಡಲಿ
ಚಂದಿರನಿಂದು ರಜೆಯ
ಮೇಲಿದ್ದಾನೆ
ಬರುವ ಮನಸಾದರೆ ಮಿಣುಕು
ಹುಳುವಿಗೆ ಕರೆಮಾಡು
ನಾನೂ ದೀಪಹಚ್ಚಿಲ್ಲ ನಂಗೂ
ಗೊತ್ತಿದೆ
ಪ್ರೀತಿಸಲು ಬೆಳಕುಬೇಕು ನಿಂಗೆ
ಸಹನೆ ಮೀರಿದ ಹಸಿವಾಗಿದೆ ನಂಗೆ
ಅಧರಗಳ ಆಲಿಂಗನ ವಾದಾಗ
ಮುಗುಳ್ನಗೆಗೂ ನಾಚಿಕೆ
ಆರುಮೆಯ ಮದ್ಯೆ ಅಸೂಯೆ
ಮರೀಚಿಕೆ
ಕರಗುವ ಭಯವಿರದು ಪ್ರೀತಿಗೆ
ಮತ್ತೇ ಮದ್ದು ಹುಚ್ಚೆದ್ದ ಕುದುರೆಗೆ ಬೇಗ ಬಾ
ಇಂದು ಅಮವಾಸ್ಯೆ
ಮರೆಯ ಬೇಡ
ಮಿಣುಕು ಹುಳುವಿಗೆ ಬರಲು ಹೇಳು
ಪ್ರಶ್ನೆಗಳು ಕಾದಿವೆ
ಉತ್ತರ ನೀನೇ ಹೇಳಬೇಕಿದೆ
Su