ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೇಮ ತನಗಗಳು

ಎನ್ ಎ ಭಾವಿಕಟ್ಟಿ.

1
ಬಾಳ ಹೊತ್ತು ಇರಲ್ಲ
ಬಾಳಲಿ ಬಿರುಗಾಳಿ
ತಾಳ್ಮೆ ಇರಲಿ ಕೊಂಚ
ಬರುವುದು ತಂಗಾಳಿ
2
ಸುಮ್ಮನಿರು ಆ ದಿನ
ನೆನೆದು ಕಾಡಬೇಡ
ಸಸಿ ಮರವಾಗಿವೆ
ನಕ್ಕಾವು ಮರಿಬೇಡ
3
ಪ್ರೇಮಿಗಳ ದಿನಕೆ
ಏನುಡುಗೊರೆ? ಎಂದೆ
ಟ್ವೆಂಟಿಫೋರ್ ಕ್ಯಾರೆಟ್
ಗೋಲ್ಡಲ್ಲ ಜೇನು ಎಂದ
4
ಕಾಯಾ ವಾಚಾ ಮನಸಾ
ಮಂತ್ರಕೆ ಶಕ್ತಿ ಇದೆ
ಅದಕೇ ನಡೆಯೋದು
ಸುವರ್ಣ ಮಹೋತ್ಸವ
5
ಪ್ರೇಮ ನಿವೇದನೆಗೆ
ಫೆ. ಹದಿನಾಲ್ಕೇ ಯಾಕೆ?
ನಿತ್ಯನೂತನವದು
ದಿನ ನಿಗದಿ ಸಲ್ಲದು


About The Author

Leave a Reply

You cannot copy content of this page

Scroll to Top