ಕಾವ್ಯ ಸಂಗಾತಿ
ಲಕ್ಷ್ಮೀದೇವಿ ಪತ್ತಾರ
ಹೀಗಿರಲಿ ಕವಿತೆ
ಮೊಗ್ಗು ಹೂವಾಗಿ ಅರಳಿದಂತೆ ಅರಳಲಿ ಕವಿತೆ
ಮುಗ್ಧ ಮಗುವಿನ ಸ್ನಿಗ್ಧ ನಗುವಿನಂತಿರಲಿ ಕವಿತೆ
ಮಜ್ಜಿಗೆಯೊಳಗಿಂದ ಬೆಣ್ಣೆ ಎದ್ದು ಬಂದಂತಿರಲಿ ಕವಿತೆ
ಹಾಲು ಉಕ್ಕಿ ಹರಿದಂತೆ ಹರಿದು ಬರಲಿ ಕವಿತೆ
ಮಾಗಿದ ಹಣ್ಣು ಉದುರಿ ಬೀಳುವಂತೆ ಹೊರ ಬರಲಿ ಕವಿತೆ
ಬೀಜ ಮೊಳಕೆಯೊಡೆದು ಸಸಿ ಹೊರ ಬಂದಂತೆ ಎದ್ದು ಬರಲಿ ಕವಿತೆ
ಕಾಣದ ತಂಗಾಳಿ ಬೀಸಿ ಬಂದಂತೆ ಬರಲಿ ಕವಿತೆ
ಸುದ್ದಿ ಮಾಡದೆ ಸುರಿವ ಮುಂಗಾರು ಮಳೆಯಂತೆ ಸುರಿಯಲಿ ಕವಿತೆ
ಸಾಗರದ ಅಲೆಗಳು ಉಕ್ಕೆರುವಂತೆ ,
ಮೂಡಣದಿ ಸೂರ್ಯ ಉದಯಿಸುವಂತೆ
ಪೂರ್ಣ ಚಂದ್ರನ ಬೆಳದಿಂಗಳಂತೆ
ಸಹಜವಾಗಿ ಹೊರ ಹೊಮ್ಮಲಿ ಕವಿತೆ
ಸುಂದರ ಕವಿತೆ ಮೇಡಂ
ಹೌದು ಕವಿತೆ ಸ್ವಾಭಾವಿಕವಾಗಿದ್ದರೆ ಚೆಂದ. ತಿಣುಕು ಕವಿತೆ ಎಂದಿಗೂ ಶಾಶ್ವತವಲ್ಲ. ತುಂಬಾ ಸುಲಲಿತ ಸುಂದರವಾಗದೆ.