ಕಾವ್ಯ ಸಂಗಾತಿ
ಗಜಲ್
ಯಮುನಾ
ನಿನ್ನ ನೆನಪಿಸಿ ಧ್ಯಾನಿಸಿದ ಮನಸೀಗ ಮೊಂಡವಾಗಿದೆ
ನಿನ್ನ ಬಯಸಿ ತಪಗೈಸ್ದ ಜೀವವೀಗ ಕಲ್ಲಾಗಿ ಹೋಗಿದೆ.
ಕಾಲಕ್ಕಿಲ್ಲ ಕರುಣೆ ವೇಳೆಗಿಲ್ಲ ಅರಿವು
ಹೂವಿನ ಭಾಗ್ಯವೀಗ ಹರಿದು ಹಂಚಿಹೋಗಿದೆ.
ಹಾರುವ ಹಕ್ಕಿಯ ಮಗ್ಗುಲವೂವೀಗ ಕಾಲಿಯಾಗಿದೆ
ಯಾರದೂರಿದರೇನು ಫಲ ಬೆನ್ನಹಿಂದಿನ ಸಂಚು ವೀಗ ಬಯಲಾಗಿದೆ
ಎಡ ಬಲ ನೋಡಿಯೇ ಗೂಡಿಗೆ ಬೀಳುತ್ತಿವೆ ಕನ್ನಾ
ಬಲ ನಿರ್ಬಲವಾದಾಗ ಹಣೆಬರಹ ಬರೆವುದೀಗ ಪತ್ತೆಯಾಗಿದೆ.
ಕಾಲ ಚೋರ ಜಗತ್ತೀಗ ಬೆತ್ತಲಾಗಿದೆ
ಸ್ವಾರ್ಥಕಾಗಿ ಎಂತಹ ತೀರ್ಥವೂ ದರೋಡೆಯಾಗುವುದೀಗ ಖಾತ್ರಿಯಾಗಿದೆ.
———————————-