ಅನುವಾದ ಸಂಗಾತಿ
ಇಂಗ್ಲಿಷ್ ಮೂಲ ಮೊನಿಕ ಮತಾಯಸ್ ಡಬ್ಲಿನ್
ಕನ್ನಡಕ್ಕೆ:ಕೃಷ್ಣಮೂರ್ತಿ ಬಾಗೇಪಲ್ಲಿ



ಪ್ರೀತಿ
ಎಳೆ ಕಂದನ ಅಳುವ ನಿಲ್ಲಿಸಬಲ್ಲ ಅಮ್ಮನ ಕೈ ಸ್ಪರ್ಶವೇ ಪ್ರೀತಿ
ಯೌವ್ವನದಿ ಬರುವ ಸುಡುಗೋಪವ ಸಹಿಸುವ ಸೈರಣೆಯೇ ಪ್ರೀತಿ
ಮಂಜು ಬೆಳಗಿನಲಿ ಪ್ರೇಯಸಿಯ ಕೆಲಸಕ್ಕೆ ತಲುಪಿಸಿ ಏಕಾಂಗಿಯಾಗಿ ಮನೆಕಡೆ ತೆರಳುವುದೇ ಪ್ರೀತಿ
ಮೊದಲ ರಾತ್ರಿ ಹೂ ಹಾಸಿಗೆಯಲ್ಲಿ ಮನ ಬಿಚ್ಚಿ ಹಂಚಿ ಕೊಳ್ಳುವ ಕ್ಷಣಗಳೇ ಪ್ರೀತಿ
ಗಂಡ ಹೆಂಡಿರ ಜಗಳದ ಅಂತ್ಯದಲಿ ಬಿಗಿದಪ್ಪಿ ನೀಡುವ ಕ್ಷಮೆಯೆ ಪ್ರೀತಿ.
ಪ್ರೇಯಸಿಯ ನಯನಂಗಳದಲ್ಲಿರುವ ಭಾವನೆಗಳ ಅರ್ಥಮಾಡಿಕೊಳ್ಳುವ ಶಕ್ತಿಯೇ ಪ್ರೀತಿ
ದಂಪತಿಗಳು ಒಬ್ಬರಿಗೊಬ್ಬರು ಚಳಿಗಾಲದ ಕಂಬಳಿಯಂತೆ ಆಲಿಂಗಿಸಿ ಮುಪ್ಪನಪ್ಪುವುದೇ ಪ್ರೀತಿ

ಹಸುನಗುವಿನಲಿ ಹ್ರದಯದಾಳದ ದು:ಖವನು ಅಡಗಿಸುವುದೇ ಪ್ರೀತಿ
ಪ್ರೇಮಿಗಳ ದಿನದಂದು ಕೆಂಪು ಗುಲಾಬಿಯ ನಿರೀಕ್ಷೆಯಲ್ಲಿ ಪ್ರೀತಿ
ನಿಮ್ಮ ಹಾದಿಯಲಿ ಸಿಕ್ಕಿದ ವೈರಿಗೆ ನೀಡುವ ಮುಗುಳ್ನಗೆಯೇ ಪ್ರೀತಿ
ಮೊನಿಕ ಮತಾಯಸ್, ಡಬ್ಲಿನ್.
ಚೆನ್ನಾಗಿದೆ ಸರ್, ಅರ್ಥಗರ್ಭಿತ ಸೊಗಸಾದ ಪದಗಳ ಸಾಲುಗಳಿಂದ ತುಂಬಿದ ಅನುವಾದ
ಅಧ್ಬುತ ಬಹಳ ಇಷ್ಟವಾಯಿತು