ಮಕ್ಕಳ ಸಂಗಾತಿ
“ಎತ್ತರದ ಕನಸು ಕಾಣುವೆ” ಮಕ್ಕಳ ಕವಿತೆ
ಪ್ರಭುರಾಜ ಅರಣಕಲ್
ಅಮ್ಮ ಮಮ್ಮು ಉಂಡು ಉಂಡೂ
ನಾಲಗೆಯಲಿ ರುಚಿಯೇ ಇಲ್ಲ
ಮುಂದೆ ಬರುವುದು ಯಾವ ಹಬ್ಬವದು?
ನನಗಂತೂ ನೆನಪೇ ಇಲ್ಲ
ಹಬ್ಬದ ದಿನವೇ ಕುದ್ದ ಬೇಳೆಯಲಿ
ಬೆಲ್ಲ ಬಿದ್ದು ಕರಗುವುದಲ್ಲ…
ಅಂದೆಯೆ ನಾ ಹೋಳಿಗೆಯನು ತಿನ್ನಲು
ಹಬ್ಬಕಾಗಿ ಕಾಯುವೆನಲ್ಲ…
ಓದುವಮಕ್ಕಳು ಸಪ್ಪಗೆ ತಿಂದರೆ
ಓದು ತಲೆಗೆ ಹತ್ತುವುದಿಲ್ಲ
ನಾಲಗೆ ಚಪಲಕೆ ಒಲಿಯೆನು ನಾನು!
ಅಮ್ಮ ನಿನಗೆ ಇದು ಗೊತ್ತಲ್ಲ…
ಜಿಲೇಬಿ ಕುಂದಾ ಬೇಡೆನು ನಾನು
ಮನೆಯಲ್ಲಿರುವುದೆ – ಬಯಸುವೆನು
ಓದು ನನಗೆ ತುಂಬಾ ಕಲಿಸಿರುವುದು
‘ಎತ್ತರದ ಕನಸು ಕಾಣುವೆನು’…
ಚನ್ನಾಗಿದೆ ಸರ್
ಧನ್ಯವಾದಗಳು, ತಮ್ಮ ಮೆಚ್ಚುಗೆಗೆ.
— ಪ್ರಭುರಾಜ ಅರಣಕಲ್