ಕಾವ್ಯ ಸಂಗಾತಿ
ಬಹು ಕಾಫಿಯಾ ಗಜಲ್
ನಯನ. ಜಿ. ಎಸ್.
ವಿರಹವನು ಕೊರೆದು ಭಾವಗಳನು ಕೊನರಿಸಿರುವೆ ನಿನ್ನದೇ ನೆನಪಿಗೆ
ನೆನಪುಗಳನು ಸೆಳೆದು ತಣಿವುಗಳನು ಉಸುರಿರುವೆ ನಿನ್ನದೇ ನಗುವಿಗೆ
ಅನುಪಮ ಭಾಷ್ಯವಿದು ಹೃತ್ಕಮಲದೊಳು ಸೂಸಿಹ ಪ್ರೇಮ ಸುರಭಿಗೆ
ಪದಗಳನು ಹೊಸೆದು ಕಾವ್ಯೋಜ್ವಲತೆಯನು ಹಚ್ಚಿರುವೆ ನಿನ್ನದೇ ದಿಟ್ಟಿಗೆ
ಮಾರುತನ ತಣ್ಪಿನಲಿ ಮುದಗೊಂಡಿದೆ ವಪು ಮೀಟುತ ಮೆಲ್ಲುಲಿಯನು
ಮೇಘಗಳನು ಕರೆದು ವರ್ಷಧಾರೆಯನು ಹಿಗ್ಗಿಸಿರುವೆ ನಿನ್ನದೇ ಹೆಜ್ಜೆಗೆ
ಪ್ರಶಸ್ತವಾಗಿದೆ ಪ್ರೇಮ ಸ್ವಾದಿಸುತ ಭಾವ ಭೃಂಗಾರದ ರಮ್ಯ ಛವಿಯನು
ಕಬ್ಬವನು ಕಡೆದು ಶಮವನು ಸಂಲಬ್ಧಿಸಿರುವೆ ನಿನ್ನದೇ ಮನಃಹೃಷ್ಟತೆಗೆ
ಚಕ್ಷುಗಳ ಮಿಲನದಿ ಸೇಚಿಸಿಹ ಅಭೀಷ್ಟಗಳಿಗೆ ಅಭಿಸಾರಿಕೆಯು ನಯನ
ಲಜ್ಜೆಯನು ತೊರೆದು ತನ್ಮೆಯನು ಶೃಂಗರಿಸಿರುವೆ ನಿನ್ನದೇ ಉಪಾಸನೆಗೆ
ಚನ್ನಾಗಿದೆ