ಕಾವ್ಯ ಸಂಗಾತಿ
ಡಾ. ತಯಬಅಲಿ. ಅ. ಹೊಂಬಳ
ಮಧುರ ಸವಿಗಾನ
ಹೃದಯ ಬರಿದಾಗಿತ್ತು ನಾ ಎಚ್ಚುತ್ತುಕೊಂಡಾಗ
ಮನಸ್ಸು ದಾಹದಿಂದ ಸೊರಗಿತ್ತು
ಹನಿ ನೀರಿಗಾಗಿ
ಹೃದಯ ಗೆದ್ದ ಮನಸ್ಸಿನ ಕನಸಿನವಳನ್ನು.
ಕರೆಯದೆ ಬರುವ ಆ ನನ್ನವಳನ್ನು
ನಾ ಹೇಂಗ ಕೂರಿಸಲೀ….
ಇಷ್ಟು ದಿನ ಬೆಳಗದ ಹೃದಯವನ್ನು
ಹೇಗೆ ಸುಂದರಗೊಳಿಸಲಿ.
ಅವಳ ಮನವರಿಕೆಯಾಗಿದೆ ಮನ
ಅವಳ ಹೃದಯ ಭಾಷೆ ನಾ ಹ್ಯಾಂಗ ಓದಲಿ
ಯಾಕೆಂದರ ನಾನಾಗಿರದ
ಮೊಳಕೆಯ ಚಿರಯುವಕ.
ಅದು ಹೇಗೂ ತಿಳಿದು ಹೋಯಿತು
ಅಂದು ನಾನು ಮತ್ತು ಅವಳು
ಹತ್ತಿರ ಕೂತಾಯಿತು, ದೇಹ ತಾನಾಯಿತು
ಕೈ ಮೇಲೆ ಕೈ ರಂಗೋಲಿ ಬಿಟ್ಟಾಯಿತು.
ಹೃದಯ ಪುಟಿದ್ದೆದ್ದ ಮಾತು
ನಾಲಿಗೆಯಲ್ಲಿ ತಡವರಿಸುತ್ತಾ
ಅಂದು ನಾ ಹೇಳಿಬಿಟ್ಟೆ
ನೀನೆ ನನ್ನ ಹೃದಯ ದೇವತೆ ಎಂದು ಬಿಟ್ಟೆ
ಆ ದಿನ ಆ ಕ್ಷಣ ಎರಡು ಮನಸ್ಸುಗಳು
ಮಾತೆ ಬೇರೆ ಆಟವೇ ಬೇರೆ
ನಿರ್ಮಲ ಮನಸ್ಸಿನ ಮಾತು
ಬಲು ಮಧುರ ಈ ಸವಿಗಾನ.
ನಮ್ಮ ಮಿಲನದ ಪ್ರೇಮ ಸೋಪಾನ.