ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ಪ್ರೀತಿ ಮಧುರ ಪ್ರೇಮ ಅಮರ

ಹೃದಯ ಬಡಿತ ಎಂಥ ಮಿಡಿತ
ಮಧುರ ಪ್ರೇಮ ಹರಿತ
ನಮ್ಮಿಬ್ಬರ ಮನದ ಹಿಡಿತ
ಮಾತು ಮಾತ್ರ ಕಣ್ಣಿನಿಂದ
ಮೌನ ತಂದ ಅಂದ ಚಂದು
ಪ್ರೇಮ ಕಡಲಲ್ಲಿ ಪ್ರೀತಿ ಮಿಂದು
ತೂಗು ಸೆಳೆತ ಭಾವ ಬೆರೆತ
ನಿಶಬ್ದದಲಿ ಮೂಕ ನಾಕ
ಹೇಳುವ ಪರಿ ಅದು
ಕೇಳಿ ತಿಳಿವ ಮೃದು
ಮಂದಹಾಸದ ಸ್ಪರ್ಷ
ಮನ ಕರಗಿ ಸೋತು ಹರ್ಷ

ಜೋಡಿ ಹಕ್ಕಿಯ
ಅದೆಂತ ನಗು ಭಾರಿ
ದೂರಕೆ ಹಾರಿ ಹಾರಿ
ಬಾನಿನಲ್ಲಿ ತೇಲಿ ನಲಿದು
ಈ ದಿನವು ನಮ್ಮದಿಂದು
ಸಾರಿ ಸಾರಿ ಹೇಳಿತಂದು
ಅಂದು ಕೈವಶವಾದ ಸಂತಸ
ಮನ ಹಗುರವಾದ ಭಾಸ
ನಮ್ಮ ಪ್ರೇಮ ಅಮರವೆಂದು
ರಚಿತವಾದ ಕವನ ಒಂದು
ಪ್ರೇಮಿಗಳ ಮನ ಒದಲೆಂದು
ಎಲ್ಲ ಭಾವನೆ ಹಂಚಿಕೊಂಡು
Good attempt