ವ್ಯಾಲಂಟೈನ್ ವಿಶೇಷ
ಕಮಲಾ ರಾಜೇಶ್
ಹರೆಯದ ಪ್ರೀತಿ
ಹರೆಯದ ವಯಸ್ಸಿನಲಿ ಪ್ರೀತಿ ಬಲೆಯಲಿ ಸಿಲುಕಿ
ನೆರೆಮನೆಯ ಹುಡುಗನಿಗೆ ಮನವ ಸೋತು
ಕಿರುನಗುವ ಚೆಲ್ಲುತ್ತ ಸರ್ವಸ್ವ ಅರ್ಪಿಸಲು
ಕೊರಗುವರು ಕೊನೆಯಲ್ಲಿ ಕಮಲಾತ್ಮವೆ
ಸರಸರನೆ ನಡೆಯುವರು ಊರ ಹೊರಗಿನ ಬನಕೆ
ಹರುಷದಲಿ ನಲಿದು ಹೀರುವರು ಮಧುವ
ಸರಿಯುತಿರೆ ವರ್ಷಗಳು ಬುಡಮೇಲು ತಾನಾಗೆ
ನರಕವನು ಕಾಣುವರು ಕಮಲಾತ್ಮವೆ
ಜೊತೆಗೂಡಿ ನಲಿಯುತ್ತ ತಂದೆತಾಯಿಯ ಮರೆತು
ರತಿಸುಖವೆ ಮಿಗಿಲೆಂದು ಮೈಮರೆವರು
ಹಿತನುಡಿಯನಾಡುತ್ತ ಮರುಳುಮಾಡಲು ಹುಡುಗ
ನತದೃಷ್ಟ ಯಾರೇಳು ಕಮಲಾತ್ಮವೆ
ಹಿತನುಡಿಯನಾಡಿದರು ಹೆತ್ತವರ ಬಂಧುಗಳು
ಮತಿಗೇಡಿಯೆಂದು ನೆಂಟರನು ಜರೆವ
ಪತನವಾಗುವುದೆಂದು ಉಪದೇಶ ಮಾಡಿದರೆ
ಪಿತನ ನುಡಿ ಕೇಳಿಸದು ಕಮಲಾತ್ಮವೆ
ಒಡಲೊಳಗೆ ಉಕ್ಕುವುದು ಬಯಕೆಯಲ್ಲದ ಕಾಮ
ತಡೆಯಲಾಗದು ಎಂದು ಗೋಳಿಡುವರು
ದಡವನ್ನು ಸೇರದಲೆ ಮುಗ್ಗರಿಸಿ ಬಿದ್ದಾಗ
ದಡುಕು ಕೆಡುಕಿನ ಮೂಲ ಕಮಲಾತ್ಮವೆ
ಹರಸಾಹಸವ ಮಾಡಿ ಹಿರಿಯರನು ಒಪ್ಪಿಸುತ
ಗರಿಗೆದರಿ ಕುಣಿಯುವರು ಆದಿಯಲ್ಲಿ
ತಿರುಳಿರದ ದಾಂಪತ್ಯ ಹುಸಿಯೆಂದು ಅರಿತಾಗ
ನರಳಿದರೆ ಫಲವೇನು ಕಮಲಾತ್ಮವೆ
ಹಳೆ ಬೇರು, ಹೊಸ ಚಿಗುರು, ಕನಸದುವೆ ಮನಸ್ಸಲ್ಲ, ಸವಿದಿಲ್ಲ, ಸಿಹಿಯೆಲ್ಲ, ನೋಡಿ ಕಣ್ತುಂಬಿ ದಂತಿದೆ ಇದುವೆ ಮಹಾಮಂತ್ರ
Nicely written. Congrats