ಅಕ್ಷತಾ ಕೃಷ್ಣಮೂರ್ತಿ

ವ್ಯಾಲಂಟೈನ್ ವಿಶೇಷ

ಅಕ್ಷತಾ ಕೃಷ್ಣಮೂರ್ತಿ

ಬರೆದಷ್ಟು ಮುಗಿಯದ ಒಲವು.

ನೀನಿಲ್ಲದ ಹೊತ್ತಲ್ಲಿ
ಇರುವುದೊಂದೆ ಏಕಾಂತ
ಅದರೊಳಗೊಂದು ನೆನಪು
ನಿನ್ನದು ಮಾತ್ರ
ನೀ ಬಂದದ್ದೆ ತಡ
ನೆನಪೆಲ್ಲ ಸತ್ತು
ಪ್ರೇಮಕೆ ಸವತಿಯಾದ ಹೊತ್ತು
ಈಗ ಉಳಿದದ್ದು
ಪ್ರೀತಿ ಅಮಲಿನ
ನಿನ್ನ ಗಮ್ಮತ್ತು

**

ಈ ನಡುವೆ

ನಿನ್ನ ನಾಲಿಗೆ
ನನ್ನ ಹೆಸರನು ಉಸುರಿ
ನನ್ನೆದೆಯಲಿ ಒಲವಿನ ಅಲೆಗಳು
ಉಕ್ಕೇರುತ್ತದೆ

ನಿನ್ನ ಸ್ಮೃತಿಯಲಿ ನನ್ನ ಹೆಸರು
ಒಂದು ಕ್ಷಣ ಹಾದುಹೋದರೆ
ನನ್ನ ಮನದಲಿ
ಗುಬ್ಬಿ ಮರಿ
ಗೂಡುಕಟ್ಟುತ್ತದೆ.

ನಿನ್ನ ನಗುವಲಿ ನನ್ನ ಹೆಸರು
ಚೂರು
ಹೊಳೆದರೆ
ನನ್ನ ಉದ್ದ ಮೂಗಿನಲಿ
ಹುದುಗಿದ ನತ್ತು
ಎದ್ದೆದ್ದು ನೋಡುತ್ತದೆ

ನಿನ್ನ ನೋಟದಲಿ ನನ್ನ ಹೆಸರು
ಚಿತ್ರವಾದರೆ
ನನ್ನ ಕಣ್ಣು ಅದ
ನೋಡಲು ಕಾತರಿಸುತ್ತದೆ

ನೀನು ನನಗಾಗಿ ತೆಗೆದಿರಿಸುವ
ಒಂದೊಂದು ಗಳಿಗೆಗಳು
ನನ್ನೆದೆಗೆ ನೀ ಕೊಟ್ಟ ಮುತ್ತುಗಳಾಗಿ ಕಾಡುತ್ತಲೆ ಇರುತ್ತವೆ

ನಿನ್ನ ಪುಟದಲಿ
ನನ್ನ ಹೆಸರಿನ ಅಕ್ಷರ ಕಂಡರೆ
ನನ್ನ ಕಣ್ಣು ಪದೆಪದೇ ಅದ ಓದಲು ಕಾತರಿಸುತ್ತಿದೆ

ಇಷ್ಟಾಗಿಯೂ

ಬಯಕೆ ಹಸಿವು ತಹತಹಿಕೆ
ಕಾತುರ ನೆನಪು
ಮುಗಿಯದ ದಾಹ
ಕಚಗುಳಿಯಿಟ್ಟು ಎಬ್ಬಿಸುವ
ಚಳಿ ನಿನ್ನ ಮೇಲೆ
ಯಾಕಿಷ್ಟು ಮೋಹ…!?



3 thoughts on “ಅಕ್ಷತಾ ಕೃಷ್ಣಮೂರ್ತಿ

Leave a Reply

Back To Top