ಅರುಣಾ ನರೇಂದ್ರ

ವ್ಯಾಲಂಟೈನ್ ವಿಶೇಷ

ಅರುಣಾ ನರೇಂದ್ರ

ಗಜಲ್

ಹೀಗೆ ಬರಸೆಳೆದು ಅಪ್ಪದಿರು ನಲ್ಲಾ
ಕನಸುಗಣ್ಣಿನ ಮೊಗ್ಗು ಎಚ್ಚರಾದಾವು

ಹೀಗೆ ತುಟಿಕಚ್ಚಿ ಜೇನು ಸವಿಯದಿರು
ಚುಕ್ಕಿನಾಚಿ ಮುಖ ಮುಚ್ಚಿಕೊಂಡಾವು

ಮುಂಗುರುಳು ಸವರಿ ಪಿಸುಗುಟ್ಟದಿರು
ಚಂದ್ರಮಗೆ ಪೂರ್ಣಿಮೆಯ ನೆನಪಾದಾವು

ನನ್ನೆಡೆಗೆ ಬಾಗುತ್ತಾ ಒಲವ ಬೇಡದಿರು
ಬಾನ ಕಣ್ಣಲಿ ವಿರಹ ಸಾಲು ಅಚ್ಚಾದಾವು

ನಶೆಯಲಿ ಅರುಣಾ ಎಂದು ಕರೆಯದಿರು
ಉನ್ಮತ್ತ ಪ್ರೇಮಿಗಳ ಕಿವಿ ಚುರುಕಾದಾವು


Leave a Reply

Back To Top