ವ್ಯಾಲಂಟೈನ್ ವಿಶೇಷ
ವಿಜಯಲಕ್ಷ್ಮಿ ಪುಟ್ಟಿ
ಮತ್ತೆ ಬರುವೆ
ಗೆಳೆಯ ನಿನ್ನ ಒಂದು ಕವನ
ನನ್ನ ಉಸಿರಿನ ಭಾವ ಕುದುರಿಸುತ್ತಿದೆ ಮೊನ್ನೆಯಷ್ಟೇ ಈಳಿದೆಯಲ್ಲ
ನನ್ನ ಮನೋಭೂಮಿಕೆಗೆ
ಇದೀಗ ಏನೋ ಕಳೆದುಕೊಂಡಂತೆ ಅಧೋವದನಳಾಗಿ
ಹುಡುಕಾಡುತ್ತಿರುವೆ
ಭಾವಗಳು ನಿನ್ನನ್ನು ಅರಸುತ್ತ ನಡುರಾತ್ರಿಯಲ್ಲಿಯೂ ಗಸ್ತು ತಿರುಗುತ್ತಿವೆ ಎಲ್ಲೋ
ಅಸ್ಪಷ್ಟ ಉಲುವು
ಪೊರೆ ಕಳಚುವ
ಭಾವದ ಉತ್ಕಂಠ
ಏನೋ ಕೇಳಬೇಕೆಂದಿದ್ದೆ
ಯಾರೋ ಬಂದಂತಾಯಿತು ಹೇಳಲಾರೆ ವಿಷಯ
ನಿನ್ನಲ್ಲಿ ಇರಲಿ ಗೆಳೆಯ
ಮತ್ತೆ ಬರುವೆ
ಭಾವಗಳ
ಗುಚ್ಛದೊಂದಿಗೆ..
.