ವ್ಯಾಲಂಟೈನ್ ವಿಶೇಷ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಪ್ರೇಮದ ಚೂರುಗಳು..
ಪ್ರೇಮವೆಂದರೇ..
ಮತ್ತೇನು ಅಲ್ಲ
ಅವಳ ಮತ್ತು ನನ್ನ
ಕಣ್ಣುಗಳ ಯುದ್ಧ..!!
ಕೆಂಡದುಂಡೆಗಳಂತಹ
ಅವಳ ಕಣ್ಣುಗಳ ನೋಟಕ್ಕೆ
ನಾನು ಹೂವಾಗಿದ್ದು
ಪ್ರೇಮವಲ್ಲವೇನು..?
ಹಸಿದೊಡಲಿಗೆ ವಿರಹವಿಟ್ಟ
ಅವಳ ಕಣ್ಣುಗಳಿಗೆ
ಧಿಕ್ಕಾರ…
ಯಾಕೆಂದರೆ..
ಅವಳ ಪಡೆಯುವ
ಹಠ ಮಾಡಿವೆ
ಎನ್ನ ಕಣ್ಣುಗಳ ಚಿತ್ಕಾರ.
ಕಡಲೊಡಲಿಗೆ ಕಣ್ಣು
ಹಾಯಿಸಿದೆ
ಕಡಲೂದ್ದಕ್ಕೂ ಅವಳ
ಚಿತ್ತಾರದಲೆಗಳದೆ ಕಾಟ..!
ನಡೆಯಲಿಲ್ಲ
ನನ್ನ ಕಣ್ಣುಗಳಾಟ.
ಸಮುದ್ರದ ಮುತ್ತುಗಳು
ನಾಚಿದವು
ಅವಳು ನನ್ನ ಕೆನ್ನೆಗೆ
ಕೊಟ್ಟ ಮುತ್ತುಗಳ
ಕಂಡು..!!