ಸುರೇಶ್ ತಂಗೋಡ

ವ್ಯಾಲಂಟೈನ್ ವಿಶೇಷ

ಸುರೇಶ್ ತಂಗೋಡ

ಅವಳಿಗಾಗಿ….

ಕಪ್ಪು ಕಾಡಿಗೆಯಾಗುವೆ
ಬಿಳಿ ಬಣ್ಣದ ಪೌಡರ್ ಸಹ
ಮೇಕಪ್ ಕಿಟ್ ಎಲ್ಲವೂ ಆಗುವೆ
ಅವಳು ಚಂದವಾಗಿ ಕಾಣಲು
ಇದೆಲ್ಲವೂ ಆಗುವೆ
ಅವಳಿಗಾಗಿ …..

ಉರಿಬಿಸಿಲಿನಲ್ಲಿ ತೆಂಬೆರಳಾಗುವೆ
ಹಸಿದ ಉದರಕ್ಕೆ ಮೃಷ್ಟಾನ್ನವಾಗಿ
ತೃಷೆಯ ಇಶೆ ಪಡೆಯುವೆ
ಅವಳು ನೆಮ್ಮದಿಯಾಗಿರಲು
ಇದೆಲ್ಲವೂ ಆಗುವೆ
ಅವಳಿಗಾಗಿ……

ಪ್ರತಿ ಹೆಜ್ಜೆಯ ನೆರಳಾಗಿ
ನೋವು ನಲಿವುಗಳಿಗೆ ನಯನವಾಗಿ
ನಿರಾಳವಾದ ಮುಕ್ತ ಜೀವನವಾಗಿ
ಸುಖದ ಜೀವನಕ್ಕೆ ಸಾಕ್ಷಿಯಾಗುವೆ
ಇದೆಲ್ಲವೂ ಆಗುವೆ
ಅವಳಿಗಾಗಿ……

ತಾಯಿಯಾಗುವೆ ಆಕೆಗೆ
ತಂದೆಯು ಆಗಿ ಸಲುಹುವೆ
ಗೆಳೆಯನಾಗುವೆ ಕೊನೆಯವರೆಗೂ
ಕೂಸಂತೆ ಕಾಣುವೆ
ಇದೆಲ್ಲವೂ ಆಗುವ
ಅವಳಿಗಾಗಿ….

ಎಲ್ಲ ವೇಷಗಳನ್ನು ತೊಡುವೆ
ಯಾವ ಕೆಲಸವಾದರೂ ಮಾಡುವೆ
ಮಾಡಿ ಮೆಚ್ಚಿಸುವೆ
ಎಲ್ಲವೂ ಅವಳಿಗಾಗಿ ಅವಳ ಸುಖ,ಶಾಂತಿಗಾಗಿ
ಅವಳಿಗಾಗಿ…ಅವಳೊಬ್ಬಳಿಗಾಗಿ.


Leave a Reply

Back To Top