ಕಾವ್ಯ ಸಂಗಾತಿ
ಕಪ್ಪು ಹೆಣ್ಣು
ನೂರುಲ್ಲಾ ತ್ಯಾಮಗೊಂಡ್ಲು


ಕಪ್ಪು ಹೆಣ್ಣನು ಕೆಣಕ ಬೇಡ
ಮೋಜಿನ ಕಣ್ಣುಗಳಿಂದ ನೋಡ ಬೇಡ
ಭೂಮಿಯಷ್ಟು ಸಂಯಮಿ
ಇವಳಲ್ಲ
ನಿನ್ನ ಹಾದರಕೆ ಹೂವಾಗುವ
ವಸ್ತುವಲ್ಲ
ಲಾವದ ಭಾಷೆ
ನಿನ್ನ ಅರಿವಿಗೆ ಇದ್ದಿತೇ?
ಕರಗಿಹೋಗುವೆ
ಹೂವೆಂದು ತಿಳಿದರೆ ನನ್ನ
ಕಣ್ಣ ಭಾಷೆ ಚರ್ಮದಷ್ಟು ಕಪ್ಪು
ಒರಟು ಭಾಷೆಯಿಂದ ಬಣ್ಣಿಸಬೇಡ
ಗುಲಾಬಿಯ ಸುಂದರತೆಯನು
ಹೃದಯದ ಭಾಷೆಯೇ ತಿಳಿದಿಲ್ಲದವನಿಗೆ
ಕಾವ್ಯ ಮೋಹವೇ ?
ಕೆಕ್ಕರಿಸಿ ನೋಡಬೇಡ ಮತ್ತೆ ನೆಲದ ಕಪ್ಪು ಹೆಣ್ಣನು