ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಎಲ್ಲರಿಗೂ ಸಿಗದು

ಈ ದೂರವಿರುವ ಸುಖ

ಎಲ್ಲರಿಗೂ ಸಿಗದು ಈ ದೂರವಿರುವ ಸುಖ

ದರ್ದ್ ಜಮಾನೆ ಮೆ ಕಮ್ ನಹಿ ಮಿಲ್ತೆ

ಸಬ್ ಕೋ ಮೊಹಬ್ಬತ್ ಕೆ ಗಮ್ ನಹಿ ಮಿಲ್ತೆ

ಈ ಲೋಕವೆಲ್ಲ ನೋವೇ ತುಂಬಿರಬಹುದು. ಸಾವಿರ ಕಷ್ಟ, ನೂರು ಅಪಮಾನ, ಹತ್ತಾರು ಸೋಲು ಉಂಡು ಬೇಸತ್ತಿರಬಹುದು. ಆದರೂ ಈ ಪ್ರೀತಿ ಕೊಡುವ ನೋವಿನ ಸುಖವೇ ಬೇರೆ ಅಲ್ವ ಗೆಳೆಯಾ? ಇದು ಎಲ್ಲರಿಗೂ ಸಿಗದ ಸುಖ.

ಸದ್ದು ಮಾಡದೆ ನನ್ನ ಪ್ರಾಣ ಸೇರಿದೆ

ಸುದ್ದಿ ಇಲ್ಲದೆ ನನ್ನ ಪ್ರೀತಿ ಮಾಡಿದೆ

ನನ್ನಲ್ಲಿ ನೀನಾದೆ ನಿನ್ನಲ್ಲಿ ನಾನಾದೆ…

ಟೂಟ್ ನೆ ವಾಲೆ ದಿಲ್ ಹೋತೇ ಹೆ ಕುಛ್ ಖಾಸ್

ದೂರ್ ಸೆ ದಿಲ್ ಕಿ ಬುಝ್ತೀ ರಹೇ ಪ್ಯಾಸ್

ದೂರವಿದ್ದೇ ಹೃದಯದ ದಾಹ ತೀರಿಸಿಕೊಳ್ತಿರುವ ನಾವು ಕಮ್ಮಿಯೇನೋ? ಬಿಟ್ಟಿರಲಾರದೆ ಒದ್ದಾಡುತ್ತಿರುವ ನಮ್ಮಿಬ್ಬರ ಹೃದಯಗಳು ಅದೆಷ್ಟು ಅಮೂಲ್ಯವಲ್ಲವೇನೋ!!

ದೂರದಿಂದಲೇ ನಮ್ಮ ಸ್ನೇಹವಾಯಿತು

ದೂರದಿಂದಲೇ ನಮ್ಮ ಪ್ರೀತಿಯಾಯಿತು…

ರೆಹೆಗಯಿ ದುನಿಯಾಮೆ ನಾಮ್ ಕಿ ಖುಷಿಯಾ

ತೇರೆ ಮೇರೆ ಕಿಸ್ ಕಾಮ್ ಕಿ ಖುಷಿಯಾ

ತನ್ನದೇ ಒಂದು ಹೆಸರಿಗಾಗಿ, ಅಸ್ತಿತ್ವಕ್ಕಾಗಿ ಎಷ್ಟೆಲ್ಲ ಹಾತೊರೀತಾರಲ್ಲ ಈ ಜನ. ಆದರೆ ನಮಗೆ? ಆ ಖುಷಿಯಿಂದ ಆಗಬೇಕಾದ್ದಾದರೂ ಏನು? ಏನಿಲ್ಲ. ಖುಷಿಯೂ ಬೇಕಿಲ್ಲವಲ್ಲೋ ನಮಗೆ. ಕಾಯುತ್ತಿರುವುದಷ್ಟೇ ಸದ್ಯಕ್ಕಿರುವ‌ ಸುಖವಲ್ಲವೇ ಸಖನೇ.

ಕಾದಿರುವೆ ನಿನಗಾಗಿ

ಹೇಗಿರುವೆ ಮರೆಯಾಗಿ…

ಸಾರಿ ಉಮರ್ ಹಂಕೋ ರೆಹೆನಾಹೆ ಯೂ ಉದಾಸ್..

ಹೂಂ, ನಮಗೆ ಗೊತ್ತಿರೋದೇ ಅಲ್ವೇನೋ. ಈ ಹಣೆಬರಹದಲ್ಲಿರೋದು ಪರಸ್ಪರ ಸೇರಲಾಗದ ದುಃಖವಷ್ಟೇ, ಸಂಧಿಸಲಾರದ ನೋವಷ್ಟೇ ಎಂದು ಒಪ್ಪಿಕೊಂಡಾಗಿದೆಯಲ್ಲ.

ಸೇರೋದು ದೂರಾನೇ

ಬಾಳೋದು ದೂರಾನೇ

ಆ ಸಾವಿಗಿಂತಲೂ ನೀನೀಗ ದೂರಾನೇ

ಬದುಕಿದ್ದರೆ ಜೊತೆಯಲೆ ಬದುಕಿರುವ…

ಆ ಗಲೆ ಲಗ್ ಕೆ ಮರ್ ಜಾಯೆ

ಕ್ಯಾ ರಖ್ಖಾ ಹೆ ಜೀನೇಮೇ..

ಆದರೂ…

ದೂರದಿಂದಲಾದರೂ ಕದ್ದು ನೋಡುತ್ತಲಾದರೂ ಇದ್ದುಬಿಡಬಾರದಾ?ಹೃದಯದ ದಾಹವನ್ನು ನೀಗಿಸಿಕೊಳ್ಳಬಾರದಾ?

ಅಖಿಯೋಕೋ ರೆಹೆನೆ ದೆ

ಅಖಿಯೋಕೆ ಆಸ್ ಪಾಸ್..


      ಅಮೃತಾ ಮೆಹೆಂದಳೆ

2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯” ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ, ಪ್ರವಾಸದಲ್ಲಿ

Leave a Reply

Back To Top