ಹುಳಿಯಾರ್ ಷಬ್ಬೀರ್-ಗಜಲ್ ದ್ವಿಪದಿಗಳು

ಕಾವ್ಯ ಸಂಗಾತಿ

ಗಜಲ್ ದ್ವಿಪದಿಗಳು

ಹುಳಿಯಾರ್ ಷಬ್ಬೀರ್

ಗೆಳತಿ ನಿನ್ನ ಕಣ್ಣೋಟದ ಮಿಂಚು ಸಾಕಾಗುವುದಿಲ್ಲ
ಪದೇ ಪದೇ ಸೋಲುವ ಹಪಾ ಹಪಿಯು ತಪ್ಪುವುದಿಲ್ಲ.

ಮೊದಲ ಮಳೆಯಂತೆ ಧರೆಗೆ ಮುತ್ತಿಕ್ಕಿದೆ ಗಾಲಿಬ್
ಚುಂಬನದ ಸ್ಪರ್ಶಕ್ಕೆ ಧರೆಗೆ ಧರೆಯೇ ಹಸಿರುಕ್ಕಿದೆ ಗಾಲಿಬ್.

ನಿನ್ನ ನಗು ಗುಲಾಬಿಯ ಪಕಳೆಯಂತೆ ಸಾಕಿ
ನಾ ಅದರ ಮೇಲೆ ಬಿದ್ದ ಇಬ್ಬನಿಂತೆ ಸಾಕಿ.

ಅವಳು ಮನಸ್ಸಿನ ಸದಾ ಹಾಜರಿ ಗಾಲಿಬ್
ಅಲ್ಲೆಲ್ಲಾ ನನ್ನದೇ ಉಸಾಬರಿ ಗಾಲಿಬ್.

ನನ್ನೊಲವಿನ ಅರಗಿಣಿ ನೀನು ಸಾಕಿ
ನಿನ್ನೊಲವಿನ ದೊರೆಯಾದೆ ನಾನು ಸಾಕಿ.

ಜಗತ್ತು ವಾಸ್ತವದ ತೆಕ್ಕೆಯಲ್ಲಿದ್ದರೂ ನನ್ನದು ಗಾಲಿಬನ ನಾದ
ಶಾಯರ್ ಮತ್ತು ಶಾಯರಿ ಪದೇಪದೇ ಮುಖಾಮುಖಿಯಾದರು ಅದು ಗಾಲಿಬನ ನಿನಾದ.


Leave a Reply

Back To Top