ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಆಸಿಫಾ

ತಣ್ಣನೆಯ ಬೆಳದಿಂಗಳಲ್ಲಿ ಚಂದಿರ ವಿಹರಿಸುವಾಗ ನಿನ್ನನ್ನು ಕಾಣುತ್ತೇನೆ
ಹಸಿದ ಹಗಲಿನ ಹೊಟ್ಟೆಗೆ ಮೆಲ್ಲನೆ ರವಿ ಕಾಲಿರಿಸುವಾಗ ನಿನ್ನನ್ನು ಕಾಣುತ್ತೇನೆ

ನೆನ್ನೆಯ ಸಮಯ ಇಂದೇಕೆ ನೆನಪಾಗಿ ಕಾಡುವುದೋ ಕಾಣೇ
ಒಡಲ ತುಂಬಾ ಹೂಗಳು ನಗುತ ಕಂಪು ಪಸರಿಸುವಾಗ ನಿನ್ನನ್ನು ಕಾಣುತ್ತೇನೆ

ಕಳೆದುಹೋದ ದಿನಗಳ ನೆನಪಲ್ಲಿ ಜಗವ ಮರೆತು ಕಳೆದುಹೋಗುತ್ತೇನೆ
ತಂಗಾಳಿ ಮುಂಗುರುಳು ಸವರಿ ಸಾಗುವಾಗ ನಿನ್ನನ್ನು ಕಾಣುತ್ತೇನೆ

ಅನಾಥ ಮನಸಿಗೆ ಸೋತ ಕನಸುಗಳ ಕನವರಿಗಳೇ ಆಸರೆ
ಸಂಜೆಯ ಸೊಬಗು ಬಾನಿಗೆ ಹೊಂಬಣ್ಣ ಚೆಲ್ಲುವಾಗ ನಿನ್ನನ್ನು ಕಾಣುತ್ತೇನೆ

ನಿನ್ನ ಕಾಣುವ ಬಯಕೆ ಇನ್ನೂ ಇದೆ ಮುರಿದ ಹೃದಯದ ತುಣುಕುಗಳಲಿ
ಆಸೀಯ ಆಸೆಗಳು ಮೆಲ್ಲನೆ ರೆಕ್ಕೆ ಬಿಚ್ಚುವಾಗ ನಿನ್ನನ್ನು ಕಾಣುತ್ತೇನೆ


About The Author

3 thoughts on “ಆಸೀಫಾರವರ ಗಜಲ್”

  1. ರವಿ ದೇವರಡ್ಡಿ

    ಜೀವನ ಪ್ರೀತಿ ಮೆಲ್ಲಗೆ , ಜೀವ ನದಿಯಾಗಿ ಹರಿಯುವ ಲಕ್ಷಣ ತೋರುತಿದೆ.

Leave a Reply

You cannot copy content of this page

Scroll to Top