ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು ಬರೆಯುತ್ತಿದ್ದಾರೆ

ಸಮುದಾಯದ ಸಹಭಾಗಿತ್ವ

(ನಮ್ಮ ನಡೆ – ಸಮುದಾಯದ ಕಡೆ)

ಪೀಠಿಕೆ

ಶಾಲೆಯ ಎಲ್ಲ ಚಟುವಟಿಕೆಯಲ್ಲಿ ಸಮುದಾಯದ ಭಾಗವಹಿಸುವಿಕೆಯ ಬಗ್ಗೆ ಇತ್ತೀಚಿಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದು ನಮ್ಮೆಲ್ಲರಿಗೂ ತಿಳಿದ ವಿಷಯವಾಗಿದೆ. ಈ ಭಾಗವಹಿಸುವಿಕೆಯ ಬಗ್ಗೆ ಆಲೋಚಿಸಿದಾಗ, ಶಾಲೆಗಾಗಿ ಸಮುದಾಯವೋ ಅಥವಾ ಸಮುದಾಕ್ಕಾಗಿ ಶಾಲೆಯೊ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಅಲ್ಲದೇ ಸಮುದಾಯ ಏಕೆ ಭಾಗವಹಿಸಬೇಕು? ಹೇಗೆ ಭಾಗವಹಿಸಬೇಕು? ಸಮಾಜಕ್ಕೂ, ಸಮುದಾಯಕ್ಕೂ ಹಾಗೂ ಸಂಸ್ಥೆಗೂ ಏನು ಸಂಬAಧ ? ಸಂವಿಧಾನದ ಮೌಲ್ಯಗಳಿಗೂ, ಶಾಲೆಗೂ ಹಾಗೂ ಸಮುದಾಯದ ಭಾಗವಹಿಸುವಿಕೆಗೆ ಇರುವ ಸಂಬಂಧವನ್ನು ಅರ್ಥೈಸಿಕೊಳ್ಳುವುದು ಅತ್ಯಗತ್ಯ.

ದೇಶದಲ್ಲಿ ನಡೆಯುವ ಯಾವುದೇ ಅಭಿವೃದ್ಧಿ ಚಟುವಟಿಕೆಗಳಲ್ಲಿ ಸ್ಥಳೀಯ ಸಮುದಾಯ ಸಕ್ರೀಯವಾಗಿ ಪಾಲ್ಗೊಳ್ಳದಿದ್ದರೆ ಹಾಗೂ ಜವಾಬ್ದಾರಿಯನ್ನು ವಹಿಸದಿದ್ದರೆ ಅಲ್ಲಿನ ಅಭಿವೃದ್ಧಿ ಚಟುವಟಿಕೆಗಳು ಯಶಸ್ವಿಯಾಗಲಾರವು ಎನ್ನುವ ಅಂಶಗಳು ಎರಡನೇಯ ಪಂಚವಾರ್ಷಿಕ ಯೋಜನೆಯ ಸಂದರ್ಭದಲ್ಲಿ ಮನಗಾಣಲಾಗಿದೆ. ಅಂತೆಯೇ ಸರಕಾರಿ ಶಾಲೆಗಳ ಅಭಿವೃದ್ಧಿಯು ಸಮುದಾಯದ ಎಲ್ಲಾ ಭಾಗೀದಾರರು ಭಾಗವಹಿಸಿದಾಗ ಮಾತ್ರ ಸಾಧ್ಯವಾಗುತ್ತದೆ. ಭಾಗೀದಾರ ಎಂದರೆ ಕೇವಲ ಎಸ್ ಡಿ ಎಂ ಸಿ ಅಲ್ಲ. ಬದಲಾಗಿ ಪಾಲಕರು/ಪೋಷಕರು ಹಳೆ ವಿದ್ಯಾರ್ಥಿಗಳು, ಸಮುದಾಯಾಧಾರಿತ ಸಂಘ ಸಂಸ್ಥೆಗಳು, ಜನಪದ ಜ್ಞಾನ, ಸಮುದಾಯದ ಸದಸ್ಯರು (ಕುಂಬಾರರು,ಚಮ್ಮಾರರು,ಬುಟ್ಟಿ ಹೆಣೆಯುವವರು ಇತ್ಯಾದಿ) ಗ್ರಾಮಪಂಚಾಯತಿ, ಅಂಗನವಾಡಿ, ಎಸ್ ಡಿ ಎಂ ಸಿ  ಸಂಘದ ಸದಸ್ಯರು, ಪ್ರಾಥಮಿಕ  ಆರೋಗ್ಯ ಕೆಂದ್ರ , ಆಶಾ ಕಾರ್ಯಕರ್ತೆಯರು, ವಿವಿಧ ಎನ್ ಜಿ ಓ ಗಳು ಹಾಗೂ ಊರಿನ ಎಲ್ಲಾ ಸಾಮಾನ್ಯ ಜನರು. ಸದ್ಯದ ಪರಿಸ್ಥಿತಿಯಲ್ಲಿ ಶಾಲೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಎಂದರೆ ಶಾಲೆಯಲ್ಲಿ ಎಸ್ ಡಿ ಎಂ ಸಿ ರಚನೆ, ಎಸ್ ಡಿ ಎಂ ಸಿ ಸಭೆಯಲ್ಲಿ ಭಾಗವಹಿಸುವುದು ಹಾಗೂ ವಿಶೇಷ ಸಂದರ್ಭದಲ್ಲಿ (ರಾಷ್ಟ್ರೀಯ ಹಬ್ಬ,ಶಾಲಾ ವಾರ್ಷಿಕೋತ್ಸವ) ಎಸ್ ಡಿ ಎಂ ಸಿ ಹಾಗೂ ಜನರು   ಭಾಗವಹಿಸುವದು  ಎನ್ನುವ ಅರ್ಥವಿದೆ. ಆದರೆ ಕೇವಲ ಎಸ್  ಡಿ ಎಂ ಸಿ ಸಕ್ರೀಯವಾಗಿದ್ದರೆ ಅದು ಶಾಲೆಯ ಭೌತಿಕ ಅಭಿವೃದ್ಧಿಗೆ ಸಹಕರಿಸಲು ಸಾಧ್ಯವಿದೆಯೇ ವಿನಹ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಇತರ ಎಲ್ಲಾ ಭಾಗೀದಾರರ ಭಾಗವಹಿಸುವಿಕೆ ಅತೀ  ಮುಖ್ಯ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ೨೦೦೫ ರ ಮಾರ್ಗದರ್ಶಿ ತತ್ವಗಳು ಹಾಗೂ ಶಿಕ್ಷಣದ ಧ್ಯೇಯೋದ್ದೇಶಗಳ ವಿವರಣೆಯಲ್ಲಿ ಸಮುದಾಯದ ಜನಪದಜ್ಞಾನವÀನ್ನು ಶ್ರೇಷ್ಠ ಜ್ಞಾನ ಎಂದು ಒಪ್ಪಿಕೊಂಡಿದೆ . ಆದ್ದರಿಂದ  ಶಿಕ್ಷಕರು ಪಠ್ಯಪುಸ್ತಕದಾಚೆಗಿನ  ಸಮುದಾಯದ ಜ್ಞಾನವನ್ನು, ಮಕ್ಕಳ ಜ್ಞಾನ ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ಸಮ್ಮಿಳಿತಗೊಳಿಸುವುದಕ್ಕೆ ಪ್ರಾಮುಖ್ಯತೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಶಾಲಾ ಚಟುವಟಿಕೆಗಳಲ್ಲಿ  ಭಾಗವಹಿಸುವುದು ಅತ್ಯಂತ ಅವಶ್ಯಕವಾಗಿದೆ

ಹಾಗಾದರೆ, ಸಮುದಾಯ ಎಂದರೇನು? ಸಮುದಾಯದ ಭಾಗವಹಿಸುವಿಕೆಯ ಅಗತ್ಯತೆಯಾದರೂ ಏಕೆ? ಶಾಲೆ ಸಮುದಾಯಕ್ಕಾಗಿಯೋ ಅಥವಾ ಸಮುದಾಯ ಶಾಲೆಗಾಗಿಯೋ ಎಂಬ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊAಡರೆ ಮಾತ್ರ ಸಮುದಾಯದ ಭಾಗವಹಿಸುವಿಕೆಯ ನೈಜತೆ, ಅವಶ್ಯಕತೆಯನ್ನು ಮನದಟ್ಟಾಗಿಸಿಕೊಳ್ಳವುದು ಸುಲಭ

ಸಮುದಾಯ ಮತ್ತು ಸಮಾಜ

ಸಮುದಾಯವೆಂಬುದು ಮಾನವನು ವಾಸಿಸುವ ಒಂದು ಸಾಮಾಜಿಕ ಘಟಕ. ಇತಿಹಾಸದ ಆರಂಭದಿAದಲೂ ಮಾನವನು ಒಂದಲ್ಲ ಒಂದು ಬಗೆಯ ಸಮುದಾಯದಲ್ಲಿ ವಾಸಿಸುತ್ತಾ ಬಂದಿದ್ದಾನೆ. ಉದಾ: ಅಲೆಮಾರಿ ಸಮುದಾಯ, ಬೃಹತ್ ನಗರ ಸಮುದಾಯ ಇತ್ಯಾದಿ. ಸಮಾಜ ಜೀವಿಯಾಗಿರುವ ಮಾನವನು ಸಮುದಾಯದ ಜೀವಿಯೂ ಹೌದು. ಆದ್ದರಿಂದ ಇಂದಿಗೂ ಸಹ ಸಮುದಾಯಿಕ ಜೀವನವು ಮಾನವನ ಜೀವನದ ಒಂದು ಅವಿಭಾಜ್ಯ ಅಂಶವಾಗಿದೆ. ಮಾನವ ಸತತವಾಗಿ ಸಾಮೂಹಿಕ ಜೀವನ ನಡೆಸಿಕೊಂಡು ಬಂದಿದ್ದರ ಪರಿಣಾಮವಾಗಿ ಸ್ಥಿರ ರೂಪದ ಸಮುದಾಯಗಳು ಸ್ಥಾಪಿತವಾಗಿವೆ. ತಾವು ವಾಸ ಮಾಡುವ ಭೌತಿಕ ತಾಣದೊಂದಿಗೆ ಸತತವಾದ ಸಂಬAಧದಿAದಾಗಿ ಜನರ ಮನಸ್ಸಿನಲ್ಲಿ ಅರಿವಿಲ್ಲದೆಯೇ ಒಂದು ಬಗೆಯ ಭಾವನಾತ್ಮÀಕತೆ ಮೂಡಿ ಬಂದು ಅವರನ್ನು ತಮ್ಮ ಸಮೂಹದೊಂದಿಗೆ ಮತ್ತು ಭೌತಿಕ ತಾಣದೊಂದಿಗೆ ಬೆಸೆಯುವುದು .ಅಂತಹ ಸ್ಥಿತಿಯಲ್ಲಿರುವ ಮಾನವ ಸಮೂಹವನ್ನೇ ನಾವು ಸಮುದಾಯ ಎಂದು ಕರೆಯುವೆವು. ಸಮುದಾಯ ಮತ್ತು ವ್ಯಕ್ತಿಗಳ ನಡುವೆ ಅನೋನ್ಯ ಸಂಬಂಧವಿದೆ. ಸಮುದಾಯದಲ್ಲಿ ಮಾನವನ ಸಾಮಾನ್ಯ ಹಾಗೂ ಸಮಗ್ರ ಜೀವನ ವ್ಯವಸ್ಥೆ ಕಂಡುಬರುತ್ತದೆ. ಸಮುದಾಯವು ಒಂದು ನಿರ್ದಿಷ್ಟ ಭೂಭಾಗದ ಸಂಘಟಿತ ಸಮೂಹ ಜೀವನವನ್ನು ಪ್ರತಿನಿಧಿಸುತ್ತದೆ. ವ್ಯಕ್ತಿಯ ಎಲ್ಲಾ ಆಶೆ ಆಕಾಂಕ್ಷೆಗಳು ಈಡೇರಲು ಸಾಧ್ಯವಾಗುವಂತಹ ಒಂದು ಸಾಮಾಜಿಕ ಜೀವನದ ಆವರಣವೇ ಸಮುದಾಯ.

ಸಮಾಜ ಹಾಗೂ ಸಮುದಾಯ ಎಂಬ ಪದಗಳನ್ನು ಯಾವುದೇ ವ್ಯತ್ಯಾಸವನ್ನೂ ಮಾಡದೇ ಬಳಸುವುದುಂಟು, ಆದರೆ ಸಮಾಜಶಾಸ್ತ್ರೀಯ ದೃಷ್ಟಿಕೋನದಲ್ಲಿ ಸಮಾಜ ಎಂಬ ಪದವು ಸಮುದಾಯವನ್ನು ಸೂಚಿಸುವುದಿಲ್ಲ, ಅದು ಜನರ ಮಧ್ಯೆ ಮತ್ತು ಅವರ ನಡುವೆ ಏರ್ಪಡಬಹುದಾದ ಅಂತಃಕ್ರಿಯೆಗಳ ಸಂಕೀರ್ಣ ಮಾದರಿಯನ್ನು ಪ್ರತಿನಿಧಿಸುವುದು ಎಂದು ಸಮಾಜಶಾಸ್ತçಜ್ಞ ಲ್ಯಾಪಿಯರ್ ಅಭಿಪ್ರಾಯಪಡುತ್ತಾರೆ. ಸಮುದಾಯವು ಸಮಾಜದಷ್ಟು ಗಾತ್ರವನ್ನು ಹೊಂದಿರುವುದಿಲ್ಲ. ಸಮಾಜವು ಸಮೂಹಗಳ ಸಮೂಹವಾಗಿದೆ. ಸಮಾಜವು ವಿಸ್ತಾರವಾದುದು. ಸಮಾಜವೊಂದರ ಅಳವಿನಲ್ಲಿ ಅನೇಕ ಸಮುದಾಯಗಳಿರಬಹುದಾದ ಸಾಧ್ಯತೆಯೂ ಇದೆ.

            ಸಮುದಾಯವು ಬಹಳ ವಿಶಾಲಾರ್ಥದ ಮತ್ತು ಸರ್ವಸಮಾವೇಶಕ (ಂಟಟ iಟಿಛಿಟusive) ಕಲ್ಪನೆಯಾಗಿದೆ ಎಂಬ ಅಂಶವು ಸ್ಪಷ್ಟವಾಗುತ್ತದೆ. ಅದು ತನ್ನ ವ್ಯಾಪ್ತಿಯಲ್ಲಿ ಅನೇಕ ಸಂಘಗಳನ್ನು, ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಹಾಗಾದರೆ ಸಮುದಾಯದ ವ್ಯಾಪ್ತಿಯಲ್ಲಿ ಸಂಘ ಹಾಗೂ ಸಂಸ್ಥೆಗಳು ಇವೆ ಎಂದಾದರೆ, ಸಂಘ ಮತ್ತು ಸಂಸ್ಥೆಗಳು ಎಂದರೇನು ಎಂಬುದನ್ನು ಅರಿಯುವುದು ಅಗತ್ಯ.

ಸಂಘ : ನಿರ್ದಿಷ್ಟ ಉದ್ದೇಶಗಳ ಈಡೇರಿಕೆಗಾಗಿ ಸಂಘಟಿತವಾಗಿರುವ ಜನಸಮೂಹವೇ ಸಂಘ ಉದಾ: ಕಾರ್ಮಿಕ ಸಂಘಗಳು,ರಾಜಕೀಯ ಪಕ್ಷಗಳು.

ಸಂಸ್ಥೆ : ತಮ್ಮ ಅಗತ್ಯಗಳ ಪೂರೈಕೆಗೆ ಜನರು ಅನುಸರಿಸುವ ಸಮಾಜಸ್ಥಾಪಿತ ವಿಶಿಷ್ಟ ಕಾರ್ಯ ವಿಧಾನಗಳೇ ಸಂಸ್ಥೆ.

ಸಾಮಾಜಿಕ ಸಂಸ್ಥೆಯಾಗಿ ಶಾಲೆ

                        ಸಂಸ್ಥೆ ಎಂಬುದು ನಮ್ಮ ಸಾಮಾಜಿಕ ಜೀವನದ ಅವಿಚ್ಛಿನ್ನ ಭಾಗವಾಗಿದೆ. ಯಾವುದೇ ಸಮಾಜವಾದರೂ ಬದುಕುಳಿಯಬೇಕಾದರೆ ಹಾಗೂ ತನ್ನ ಸದಸ್ಯರುಗಳಿಗೆ ತೃಪ್ತಿದಾಯಕ ಜೀವನವನ್ನು ನೀಡಬೇಕಾದರೆ ಅದು ತನ್ನ ಮೂಲ ಅಗತ್ಯತೆಗಳನ್ನು ಪೂರೈಸಿಕೊಡುವುದು ಅನಿವಾರ್ಯ. ಇಂತಹ ಮೂಲಭೂತ ಅಗತ್ಯತೆಗಳನ್ನು ಈಡೇರಿಸಲು ಪ್ರತಿಯೊಂದು ಸಮಾಜವೂ ಸೃಷ್ಟಿಸಿಕೊಳ್ಳುವ ಒಂದು ವಿಶಿಷ್ಟ ವ್ಯವಸ್ಥೆಯೇ ಸಂಸ್ಥೆ. ಅಂದರೆ ಮಾನವನ ಅಗತ್ಯಗಳ ಪೂರೈಕೆಗಾಗಿಯೇ ಸಂಸ್ಥೆಗಳಿವೆ. ಒಟ್ಟಾರೆ ಸಾಮಾಜಿಕ ಅಗತ್ಯತೆಯ ಸುತ್ತ ಹಮ್ಮಿಕೊಂಡಿರುವ ನೈತಿಕ ನಿಯಮಗಳ, ಮೌಲ್ಯಗಳ, ಅಂತಸ್ತುಗಳ ಹಾಗೂ ಪಾತ್ರಗಳ ಸುಭದ್ರವಾದ್ರ ಸಮಷ್ಟಿಯನ್ನು ಸಂಸ್ಥೆ ಎಂದೆನ್ನಬಹುದು.

 ಉದಾಹರಣೆಗಳು – ಕುಟುಂಬ, ಶಿಕ್ಷಣ, ವಿವಾಹ ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಇತ್ಯಾದಿ

            ಈ ಹಿನ್ನೆಲೆಯಲ್ಲಿ ಶಾಲೆ ಎಂಬ ಸಂಸ್ಥೆಯು ಎಳೆಯರಿಗೆ ತಮ್ಮ ಭವಿಷ್ಯದಲ್ಲಿ ಅಗತ್ಯವಾದ ನಾನಾ ತೆರನಾದ ಪರಿಣತಿಯನ್ನು ಪಡೆಯಲು ಔಪಚಾರಿಕ ತರಬೇತಿಯನ್ನು ನೀಡಲು ಸ್ಥಾಪಿತವಾಗಿದೆ.ಸಂಸ್ಥೆಗಳು ಸಾಮಾಜಿಕ ಸ್ವರೂಪದವು. ಅವು ನಮ್ಮ ಸಮೂಹ ಜೀವನದ ಆಯೋಜಿತ ಫಲಶ್ರುತಿಗಳೆಂಬಂತೆ ಹುಟ್ಟಿಕೊಳ್ಳುವವು. ಆದ್ದರಿಂದ ಶಾಲೆಯು ಸಾಮಾಜಿಕ ಸಂಸ್ಥೆ ಹಾಗೂ ಸಮಾಜ ಮತ್ತು ಸಮುದಾಯದ ಅಗತ್ಯತೆಯನ್ನು ಪೂರೈಸಲು ಉಗಮವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಶಾಲೆ ಸಮುದಾಯದ, ಸಂಸ್ಥೆ ಎಂದಾದರೆ, ಶಾಲೆ ಎಂಬ ಸಂಸ್ಥೆಯ ಗುರಿಯನ್ನು ಯಾರು ನಿರ್ಧರಿಸುತ್ತಾರೆ ? ಅದಕ್ಕೆ ಮಾನದಂಡಗಳೇನು ? ನಮ್ಮ ಸಂವಿಧಾನಕ್ಕೂ, ಪ್ರಜಾಪ್ರಭುತ್ವ ವ್ಯವಸ್ಥೆಗೂ ಹಾಗೂಶಾಲೆಯ ಗುರಿಗಳಿಗೂ ಏನಾದರೂ ಸಹಸಂಬAಧವಿದೆಯೇ?ಎAಬುದನ್ನು ತಿಳಿದುಕೊಂಡರೆ ಮಾತ್ರ ಮಕ್ಕಳ ಪರಿಣಾಮಕಾರಿ ಕಲಿಕೆಗಾಗಿ ಸಮುದಾಯದ ಭಾಗವಹಿಸುವಿಕೆಯ ಅಗತ್ಯತೆ ಅರಿಯಲು ಸಾಧ್ಯ

        ಇಂದು ಜಗತ್ತಿನ ಬಹುತೇಕ ರಾಷ್ಟçಗಳಲ್ಲಿ ಸಂವಿಧಾನ ಇದೆ. ಪ್ರಜಾಪ್ರಭುತ್ವ ದೇಶಗಳಲ್ಲಂತೂ ಇದನ್ನು ಅವಶ್ಯಕವಾಗಿ ಕಾಣುತ್ತೇವೆ. ಯಾವುದೇ ಪ್ರಜಾಪ್ರಭುತ್ವ ರಾಷ್ಟç ಸಂವಿಧಾನವಿಲ್ಲದೇ ಕಾರ್ಯ ನಿರ್ವಹಿಸಲಾರದು.ಆದರೆ ಸಂವಿಧಾನ ಹೊಂದಿರುವ ರಾಷ್ಟçಗಳೆಲ್ಲವೂ ಪ್ರಜಾಪ್ರಭುತ್ವವಾದಿ ಎಂಬರ್ಥವಲ್ಲ. ಜನರ ನಡುವೆ ಸಾಮರಸ್ಯವನ್ನುಂಟು ಮಾಡಲು ಕೆಲವು ಮಹತ್ವದ ನಿಯಮಗಳನ್ನು ರಚಿಸಿ, ಅವುಗಳ ಮೂಲಕ ಸಮನ್ವಯತೆ ಸಾಧಿಸಲು ಇದು ಅತ್ಯಂತ ಅವಶ್ಯಕವಾಗಿದೆ. ಈ ರೀತಿಯಾದ ನಿಯಮಗಳು ಆಯಾ ದೇಶದ ಆದರ್ಶಗಳು ಯಾವುವು ಎಂಬುದನ್ನು ಸ್ಪಷ್ಟಪಡಿಸುತ್ತವೆ. ಅವುಗಳ ಆಧಾರದ ಮೇಲೆ ಆ ದೇಶದ ನಾಗರಿಕರು ತಮ್ಮ ಸಮಾಜದ ಮೂಲಭೂತ ಸ್ವರೂಪವನ್ನು ರಚಿಸಿಕೊಳ್ಳುತ್ತಾರೆ, ಅಂದರೆ ಸಂವಿಧಾನವು ನಮ್ಮ ಸಮಾಜದ ಮೂಲಭೂತ ಸ್ವರೂಪದ ರಚನೆಯಲ್ಲಿ ಮಹತ್ವಪೂರ್ಣವಾದ ಪಾತ್ರ ನಿರ್ವಹಿಸುತ್ತದೆ.

                     ಉದಾಹರಣೆಯಾಗಿ ಭಾರತೀಯ ಸಮಾಜದ ಅವಶ್ಯಕತೆ ಹಾಗೂ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಜಾಪ್ರಭುತ್ವ, ಸಮಾನತೆ, ಸ್ವಾತಂತ್ರö್ಯ, ಜಾತ್ಯಾತೀತತೆ, ಸಹೋದರತೆ, ನ್ಯಾಯ, ವ್ಯಕ್ತಿಗೌರವ, ಏಕತೆ, ಅಖಂಡತೆ ಮುಂತಾದವುಗಳನ್ನು ಭಾರತೀಯ ಸಂವಿಧಾನದ ಮೂಲ ಮೌಲ್ಯಗಳು ಎಂದು ನಂಬಲಾಗಿದೆ. ಅನೇಕ ವಿಭಿನ್ನತೆಗಳ ನಡುವೆಯೂ ನಾವು ಏಕತೆಯಿಂದ ಇರಬೇಕಾದರೆ ಕೆಲವು ಮೂಲಭೂತ ನಿಯಮಗಳಲ್ಲಿ ಸಹಮತ ಇರಬೇಕು. ಸಂವಿಧಾನ ಇರುವ ಕಾರಣದಿಂದ ಜನರು ತಾವು ಗೌರವಿಸುವ ಮೂಲಭೂತ ನಿಯಮಗಳ ಪಾಲನೆಯನ್ನು ಎಲ್ಲ ಸಮುದಾಯದ ಜನರೂ ಅನುಸರಿಸುವರೆಂಬ ವಿಶ್ವಾಸ ಹೊಂದಿರುವರು.ಈ ವಿಶ್ವಾಸವೇ ಜನರಲ್ಲಿ ಸುರಕ್ಷತೆಯ ಭಾವನೆ ಉಂಟುಮಾಡುತ್ತದೆ.ಏಕೆAದರೆ ಯಾವುದೇ ಸಮುದಾಯವು ಸಂವಿಧಾನದ ನಿಯಮಗಳನ್ನು ಪಾಲಿಸದಿದ್ದರೆ, ಸಂವಿಧಾನದಲ್ಲಿ ನೀಡಿರುವ ನ್ಯಾಯದ ಪ್ರಕ್ರಿಯೆಯಿಂದ ಇಂತಹ ಜನರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದು ನಂಬಿರುತ್ತಾರೆ.

ಈ ರೀತಿ ಸಂವಿಧಾನವು ಮೂಲ ನಿಯಮಗಳ ಒಂದು ವ್ಯವಸ್ಥಿತ ಸಂಕಲನವಾಗಿದೆ (ಸಂಗ್ರಹವಾಗಿದೆ). ಅದನ್ನು ದೇಶದ ಎಲ್ಲಾ ನಾಗರಿಕರು ತಮ್ಮ ದೇಶವನ್ನು ಮುನ್ನಡೆಸುವ ವ್ಯವಸ್ಥೆಯ ರೂಪದಲ್ಲಿ ಸ್ವೀಕರಿಸಿದ್ದಾರೆ.

ಪ್ರಜಾಪ್ರಭುತ್ವ ದೇಶಗಳಲ್ಲಿ ಸಂವಿಧಾನವು ಅನೇಕ ಉದ್ದೇಶಗಳನ್ನು ಈಡೇರಿಸುತ್ತದೆ. ಅಂದರೆ ಅದು ಆ ದೇಶದ ಸಾಮೂಹಿಕ ಇಚ್ಛೆಗಳನ್ನು ಪ್ರತಿನಿಧಿಸುತ್ತದೆÀ . ಆ ದೇಶದ ಜನರು ಯಾವ ರೀತಿಯ ಆಡಳಿತ ಬಯಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪ್ರಜಾಪ್ರಭುತ್ವದಂತಹ ದೇಶಗಳಲ್ಲಿ ಅನೇಕ ಸಮುದಾಯದ ಜನರು ಇರುತ್ತಾರೆ. ಅವರ ಆಚರಣೆಗಳು ವಿಭಿನ್ನವಾಗಿವೆ, ಅವರ ಅವಶ್ಯಕತೆಗಳು ವಿಭಿನ್ನವಾಗಿವೆ. ಧಾರ್ಮಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗಳು ವಿಭಿನ್ನವಾಗಿದ್ದರೂ ಅವರೆಲ್ಲರೂ ಒಂದೇ ದೇಶದ ವಾಸಿಗಳಾಗಿರುತ್ತಾರೆ.      ಪ್ರತಿಯೊಂದು ದೇಶಕ್ಕೂ ಅದರದೇ ಆದ ಉತ್ತಮ ಸಮಾಜದ ಪರಿಕಲ್ಪನೆ ಇದ್ದೇ ಇದೆ. ನಾವು ಇದನ್ನು ಈಡೇರಿಸಲು “ಶಿಕ್ಷಣ ಕ್ಷೇತ್ರವನ್ನು” ಪ್ರಧಾನ ಮಾರ್ಗವನ್ನಾಗಿ ಆಯ್ಕೆ ಮಾಡಿಕೊಂಡಿದ್ದೇವೆ. ಅಂದರೆ ಶಿಕ್ಷಣದ ಮೂಲಕವೇ ನಾವು ಸಂವಿಧಾನದ ಆಶಯವನ್ನು ಈಡೇರಿಸುತ್ತೇವೆಂದು ನಿರ್ಧರಿಸಿದ್ದೇವೆ.

ಪ್ರಜಾಪ್ರಭುತ್ವ ಹಾಗೂ ಭಾಗವಹಿಸುವಿಕೆ

ರಾಧಾಕೃಷ್ಣನ್ನರವರು ತಮ್ಮ ವರದಿಯಲ್ಲಿ ‘ಪ್ರಜಾಪ್ರಭುತ್ವವು ಒಂದು ಜೀವನದ ವಿಧಾನ. ಇದೊಂದು ರಾಜಕೀಯ ಒಪ್ಪಂದ ಮಾತ್ರವಲ್ಲ, ಇದು ಸ್ವಾತಂತ್ರ್ಯ ಮತ್ತು ಹಕ್ಕನ್ನು ಜಾತಿ, ಲಿಂಗ, ವೃತ್ತಿ ಮತ್ತು ಆರ್ಥಿಕ ಸ್ಥಾನಮಾನವನ್ನು ನೋಡದೇ ಎಲ್ಲ ಸದಸ್ಯರಿಗೂ ಸರಿಸಮನಾಗಿ ನೀಡುವುದು’ ಎಂದಿದ್ದಾರೆ. ಹೀಗೆ ಪ್ರಜಾಪ್ರಭುತ್ವ ಜೀವನ ವಿಧಾನವು ಕೆಲವೊಂದು ಆದರ್ಶ ಹಾಗೂ ಗುಣಮಟ್ಟವನ್ನು ಜನರಿಂದ ನಿರೀಕ್ಷಿಸುತ್ತದೆ. (ಎನ್ ಎನ್ ಸಭಾಹಿತ, ಶಿಕ್ಷಣದ ತತ್ವಗಳು, ಗಣೇಶ ಪ್ರಕಾಶನ,ಹಳದೀಪುರ,ಹೊನ್ನಾವರ ೧೯೯೦)

ಈ ನಿರೀಕ್ಷೆಗಳು ಸಫಲವಾಗಬೇಕಾದರೆ ಜನರ ಭಾಗವಹಿಸುವಿಕೆ ಸಕ್ರಿಯವಾಗಿ ಸಾಗಬೇಕು.ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಸಮುದಾಯದ ಭಾಗವಹಿಸುವಿಕೆ ಇಲ್ಲದಿದ್ದರೆ ಪ್ರಜಾಪ್ರಭುತ್ವ ಸೋಲುತ್ತದೆ. ಆದ್ದರಿಂದ ಶಿಕ್ಷಣದ ಗುರಿಯು ಶಿಕ್ಷಣವನ್ನು ಸಮುದಾಯದ ಎಲ್ಲಾ ಚಟುವಟಿಕೆಗಳಲ್ಲೂ ಹಾಗೂ ದಿನನಿತ್ಯದ ಜೀವನದ ಸಮಸ್ಯೆಗಳನ್ನು ಪರಿಹರಿಸುವಲ್ಲೂ ಅಳವಡಿಸುವುದೇ ಆಗಿದೆ.

ಸಮಾಜ ಮತ್ತು ಸಮುದಾಯದ ಇಂದಿನ ಅಗತ್ಯತೆಗಳು:

ಸಮಾಜದ ಅಗತ್ಯತೆಗಳು ಕಾಲಕಾಲಕ್ಕೆ ಬದಲಾಗುತ್ತಲೇ ಬರುತ್ತವೆ ಅದರ ಬದಲಾವಣೆಗೆ ಹೊಂದಿಕೊಳ್ಳಲು ಸಮಾಜದ ಜನರಾದ ನಾವೆಲ್ಲರೂ ಬದಲಾವಣೆಯ ಪ್ರಕ್ರಿಯೆಗೆ ಒಳಗೊಳ್ಳಬೇಕಾಗಿತ್ತದೆ. ಈ ಹಿಂದಿನ ಸಮಾಜವನ್ನು ಗಮನಿಸಿದರೆ, ಹೆಚ್ಚುಪಾಲು ಕೃಷಿ ಆಧಾರಿತ ಚಟುವಟುಕೆಗಳೇ ಇರುತ್ತಿದ್ದವು. ಬಹು ಹೆಚ್ಚು ಪಾಲಿನ ಜನರು ಕುಂಬಾರಿಕೆ, ಚಮ್ಮಾರಿಕೆ, ಹೀಗೆ ಬೇರೆ ಬೇರೆ ರೀತಿಯ ಕೆಲಸಗಳಿಂದ ಇತರರ ಅಗತ್ಯಗಳನ್ನು ಪೂರೈಸುವ ಮತ್ತು ಆ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದರು. ಆ ಸಂದರ್ಭದ ಶಿಕ್ಷಣದ ಬಹು ಡೊಡ್ಡ ಉದ್ದೇಶವು ಮಕ್ಕಳಿಗೆ ಆ ಕೆಲಸಗಳಿಗೆ ತೊಡಗಿಕೊಳ್ಳಲು ಬೇಕಾದ ಕೌಶಲಗಳನ್ನು ಒದಗಿಸಿಕೊಡುವುದಾಗಿರುತ್ತಿತ್ತು. ಅಂದರೆ ಕೃಷಿ ಕೆಲಸ ಮಾಡಲು ಬೇಕಾಗುವ ಸಲಕರಣೆಗಳು, ಅವುಗಳನ್ನು ಬಳಸುವ ಪರಿ,ಸಂದರ್ಭ ಇವೇ ಮೊದಲಾದವುಗಳಾಗಿರುತ್ತಿದ್ದವು. ಅಲ್ಲಿ ಈಗ ನಾವು ನೋಡುವ ಶಾಲೆಗಳಿರಲಿಕ್ಕಿಲ್ಲ, ಬದಲಾಗಿ ಕುಟುಂಬ, ಹಿರಿಯರು ಹಾಗೂ ಸಮಾಜವೇ ಈ ರೀತಿಯ ಶಿಕ್ಷಣವನ್ನು ಕಿರಿಯರಿಗೆ ನೀಡುತ್ತಿದ್ದವು.ಅಂದರೆ ಅಂದಿನ ಸಮಾಜದ ಅಗತ್ಯತೆಗಳಿಗೆ ಅನುಗುಣವಾಗಿ ಅಂದಿನ ಶಿಕ್ಷಣ ಅದನ್ನು ಪೂರೈಸುತ್ತಿತ್ತು.ಈಗಿನ ೨೧ನೇ ಶತಮಾನದ ಸಮಾಜವನ್ನು ನಾವು ಗಮನಿಸಿದರೆ. ಮೂಲ ಶಿಕ್ಷಣದ ಜೊತೆಗೆ ಮಕ್ಕಳು ಇಂದಿನ ಅಗತ್ಯತೆಗಳಿಗೆ ಹೊಂದಿಕೊಳ್ಳಲು ಬೇಕಾದ ಜ್ಞಾನ ಹಾಗೂ ಕೌಶಲಗಳನ್ನು ತುಂಬಬೇಕಾಗುತ್ತದೆ. ಇಂದು ಕಂಪ್ಯೂಟರ್ ಯುಗ. ಯಾವುದೇ ರೀತಿಯ ಕಾರ್ಖಾನೆ ಹಾಗೂ ಕೈಗಾರಿಕೆಗಳು ಯಂತ್ರಗಳ ಮೂಲಕ ಚಾಲನೆಯಾಗುತ್ತಿವೆ. ಹಾಗಾಗಿ ‘ಕಂಪ್ಯೂಟರ್ ಕಲಿಕೆಯು ಒಂದು ಮುಖ್ಯವಾದ ಅಗತ್ಯತೆಯಾಗಿದೆ. ಜೊತೆಗೆ ಕೆಲಸ ಕಾರ್ಯಗಳು ಪ್ರಾಂತವನ್ನು ಬಿಟ್ಟು ಮುನ್ನಡೆದಿವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಬರುತ್ತಿರುವ ಹೊಸಬಗೆಯ ಜ್ಞಾನವನ್ನು ತಿಳಿಯಲು, ವ್ಯವಹರಿಸಲು “ಇಂಗ್ಲೀಷ್” ಭಾಷೆಯ ಕಲಿಕೆ ಹಾಗೂ ಉಪಯೋಗ ಅವಶ್ಯಕ ಮತ್ತು ಅನಿವಾರ್ಯವಾಗುತ್ತಿದೆ. ಹೀಗೆ ಸಮಾಜ ಹಾಗೂ ಸಮುದಾಯ ಮುಂದುವರೆದAತೆ ಅದರ ವೇಗಕ್ಕೆ ಮಕ್ಕಳು ಹೊಂದಿಕೊಳ್ಳುವಂತಾಗಲು ಶಿಕ್ಷಣದಲ್ಲಿ ಈ ರೀತಿಯಲ್ಲಿ ಮಕ್ಕಳನ್ನು ಅಣಿಗೊಳಿಸುವ ಕಾರ್ಯಗಳು ನಡೆಯಬೇಕಾಗುತ್ತದೆ. ಅಲ್ಲದೇ ಪ್ರಸ್ತುತ ಸಮಾಜ ಹಾಗೂ ಸಮುದಾಯಗಳ  ಮೌಲ್ಯಗಳನ್ನು  ಶಿಕ್ಷಣದಲ್ಲಿ ಬಿತ್ತುವ ಮೂಲಕ ಇವುಗಳ ಆಶಯಗಳನ್ನು ಈಡೇರಿಸಬೇಕಾಗುತ್ತದೆ.

ಸಮಾಜದ ಮತ್ತು ಸಮುದಾಯದ ಮೌಲ್ಯಗಳು

 ಮಾನವರಾದ ನಾವು ಸುಖ, ಶಾಂತಿ,ಸಹಕಾರ  ಹಾಗೂ ನೆಮ್ಮದಿಯಿಂದ ಬದುಕಲು ಕೆಲವು ವಿಚಾರಗಳನ್ನು ನಾವು ಮೌಲ್ಯಗಳೆಂದು ನಂಬಿಕೊಂಡುಬಂದಿದ್ದೇವೆ. ಈ ಮೌಲ್ಯಗಳು ಮಾನವರಾದ ನಮಗೆ ತಿಳುವಳಿಕೆ ಬಂದಾಗಿನಿAದ ಪ್ರಾರಂಭಿಸಿದ್ದು, ಅದರಿಂದ ಒಳಿತು ಆಗುತ್ತಿರುವುದರಿಂದ ತಲೆತಲಾಂತರದ ವರೆಗೆ ಅವುಗಳನ್ನು ಮುಂದುವರೆಸಿಕೊAಡು ಬರುತ್ತಿದ್ದೇವೆ. ಕೆಲವು ಮೌಲ್ಯಗಳು ವೈಯಕ್ತಿಕವಾದ ಮೌಲ್ಯಗಳು ಉದಾಹರಣೆಗೆ: ಸತ್ಯವನ್ನು ನುಡಿಯಬೇಕು. ಇದರಿಂದ ವೈಯಕ್ತಿಕವಾಗಿ ಹಾಗೂ ಸಮಾಜಕ್ಕೆ ಒಳಿತು ಸಂಭವಿಸುತ್ತದೆ.ಇತತರಿಗೆ ಮೋಸವನ್ನು ಮಾಡಬಾರದು.ಹೀಗೆ ಸತ್ಯ, ಶಾಂತಿ ಅಹಿಂಸೆ ಸೇರಿದಂತೆ ಅನೇಕ ಮೌಲ್ಯಗಳನ್ನು ನಾನು ನಂಬಿಕೊಂಡು ಅನುಸರಿಸಿಕೊಂಡು ಬಂದಿದ್ದೇವೆ. ಇಲ್ಲಿ “ದೀರ್ಘಕಾಲಿಕ ಮೌಲ್ಯಗಳೆಂದರೆ” ಆ ಮೌಲ್ಯ ಇವತ್ತು ಮತ್ತು ಯಾವತ್ತೂ ಮೌಲ್ಯವಾಗಿಯೇ ಇರುತ್ತದೆ.ಅಂದರೆ ಇತತರಿಗೆ ಗೌರವವನ್ನು ನೀಡುವುದು ಇವತ್ತೂ ಮುಖ್ಯ ಮತ್ತು ಮುಂದಿನ ನೂರು ವರ್ಷಗಳ ನಂತರವೂ ಇತರÀರಿಗೆ ಗೌರವ ಬೇಕೇಬೇಕಾಗುತ್ತದೆ. ಅದಕ್ಕೆ ನಾವೂ ದೀರ್ಘಕಾಲಿಕ ಮೌಲ್ಯಗಳು ಎಂದು ಕರೆಯುತ್ತೇವೆ. ಒಂದುವೇಳೆ ಯಾವುದಾದರೂ ಸದ್ಯಕ್ಕೆ ಅವಶ್ಯಕವಿದ್ದು ಮುಂದಿನ ಕೆಲವು ದಿನಗಳಿಗೆ ಅವಶ್ಯಕವಿಲ್ಲವೆನಿಸಿದರೆ ಅದು ಮೌಲ್ಯವೆನಿಸುವುದಿಲ್ಲ. ಇಲ್ಲ ನಾವು ಧೀರ್ಘಕಾಲಿಕ ಮೌಲ್ಯಗಳಲ್ಲಿ ಸೋದರತೆ, ಇತರರರಿಗೆ ಗೌರವ, ಇತತರನ್ನು ಪ್ರೀತಿಸುವುದು, ಶಾಂತಿ ಹೀಗೆ ಧೀರ್ಘಕಾಲಿಕ ಮೌಲ್ಯಗಳಾಗುತ್ತವೆ.ಸಮಾಜದ ಮತ್ತು ಸಮುದಾಯದಲ್ಲಿ ಹಿಂದಿನಿAದಲೂ ಬಂದ ಮೌಲ್ಯಗಳನ್ನು ನಮ್ಮ ಸಂವಿಧಾನದ ಪೂರ್ವ ಪೀಠಿಕೆಯಲ್ಲಿ ಸಹ ಕಾಣುತ್ತೇವೆ. ಆ ಸಂವಿಧಾನದ ಆಶಯಗಳನ್ನು ಪ್ರಜಾಪ್ರಭುತ್ವ ಜೀವನ ಶೈಲಿ ಮೂಲಕ ಅಲ್ಲಿಯ ಮೌಲ್ಯಗಳನ್ನು ಈಡೇರಿಸಲು ಶಾಲೆಗಳು ಕೆಲಸ ಮಾಡಬೇಕು ಎಂಬುದು ಶಿಕ್ಷಣದ ಉದ್ದೇಶಗಳ ಆಶಯ.

ಮೇಲಿನ ಎಲ್ಲ ಚರ್ಚೆಗಳನ್ನು ನೋಡಿದಾಗ ಸಮುದಾಯವು ಒಂದು ಸಾಮಾಜಿಕ ಘಟಕ. ಅನೇಕ ಸಮುದಾಯಗಳು ಒಂದು ಸಮಾಜದಲ್ಲಿ ಇರುತ್ತವೆ. ಸಮಾಜವು ತನ್ನದೇ ಆದ ಮೌಲ್ಯಗಳನ್ನು ಆಶಯಗಳನ್ನು ನಿರೀಕ್ಷೆಗಳನ್ನು ಹಾಗೂ ಆಡಳಿತವನ್ನು ಸುಗಮವಾಗಿ ಸಾಗುವಂತೆ ಮಾಡಲು ನಿಯಮಗಳ ಚೌಕಟ್ಟನ್ನು ರಚಿಸಿಕೊಂಡಿರುತ್ತದೆ ಅವುಗಳಿಗೆ ಸಂವಿಧಾನ ಎನ್ನುತ್ತಾರೆ. ಸಂವಿಧಾನದ ಆಶಯಗಳನ್ನು ಪೂರೈಸಲು ನಮ್ಮ ಶಿಕ್ಷಣದ ಗುರಿ ರೂಪಿತವಾಗಿರುತ್ತದೆ. ಶಿಕ್ಷಣದ ಗುರಿಯನ್ನು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಪೂರೈಸುತ್ತಿರುತ್ತವೆ. ಇಲ್ಲಿ ಶಾಲೆಯು ಸಮುದಾಯ ಹಾಗೂ ಸಮಾಜದ ಆಶಯಗಳನ್ನು ಈಡೇರಿಸಲು ರೂಪುÀಗೊಂಡಿದ್ದರಿAದ ಸಮುದಾಯದ ಭಾಗವಹಿಸುವಿಕೆ ಅಗತ್ಯ ಹಾಗೂ ಅನಿವಾರ್ಯ. ಅಲ್ಲದೇ ಶಾಲೆಗಳೂ ಸಹ ಸಮುದಾಯ ಹಾಗೂ ಸಮಾಜದ ಉದ್ದೇಶಗಳು, ನಿರೀಕ್ಷೆಗಳು ಹಾಗೂ ಆಶಯಗಳನ್ನು ಈಡೇರಿಸಲು ಕಾರ್ಯ ಮಾಡಬೇಕು. ಅದಕ್ಕಾಗಿ ಸಮುದಾಯದ ಸಕ್ರೀಯ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಬೇಕು. ಈ ಹಿನ್ನೆಲೆಯಲ್ಲಿ ಶಾಲೆಯು ಸಮುದಾಯಕ್ಕಾಗಿ ಇರುವುದನ್ನು ಮನಗಾಣಬೇಕು.

ಹಾಗಾದರೆ ಸಮುದಾಯದ ಭಾಗವಹಿಸುವಿಕೆ ಎಂದರೇನು ?

ಸಮುದಾಯದ ಪಾಲ್ಗೊಳ್ಳುವಿಕೆಯ ಕಲ್ಪನೆಯು, ಸ್ಥಳೀಯ ಜನರನ್ನು ನಿರ್ಣಯ ಮಾಡುವ ಪ್ರಕ್ರಿಯೆಗಳಲ್ಲಿ ಮತ್ತು ಅಭಿವೃದ್ಧಿಯ ಯೋಜನೆಗಳ ಮೌಲ್ಯಮಾಪನ ಮತ್ತು ಅಭಿವೃದ್ಧಿಯ ಯೋಜನೆಗಳಲ್ಲಿ ಅನುಷ್ಠಾನಕ್ಕೆ ಸಂಬAಧಿಸಿದAತೆ ಸಾಮಾನ್ಯವಾಗಿ ಉಲ್ಲೇಖಿಸಲ್ಪಡುತ್ತದೆ. ಸಮುದಾಯದ ಭಾಗವಹಿಸುವಿಕೆ ಎನ್ನುವುದು ಸಬಲೀಕರಣದೊಂದಿಗೆ ಸಂಬAಧಿಸಿದೆ ಮತ್ತು ಸ್ಥಳೀಯ ಜ್ಞಾನದ ಗೌರವ ಮತ್ತು ಬಳಕೆ. ಸಬಲೀಕರಣ ಎಂಬ ಪದದ ಮೂಲಕ ಜನರ ಅಧಿಕಾರಕ್ಕೆ ಬರುವುದು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಎಂದು ನಾವು ಅರ್ಥೈಸುತ್ತೇವೆ. ಬಾಹ್ಯ ಏಜೆನ್ಸಿಗಳು / ಸರ್ಕಾರ ಜನರು ತಮ್ಮ ಗುರಿಗಳನ್ನು / ಉದ್ದೇಶಗಳನ್ನು ತಲುಪಲು ಸಹಾಯ ಮಾಡುತ್ತವೆ. ಆದರೆ, ಅವುಗಳನ್ನು ಹೇರಿಕೆ ಅಥವಾ ಒತ್ತಾಯ ಮಾಡುವುದಿಲ್ಲ . ಸ್ಥಳೀಯ ಜ್ಞಾನವನ್ನು ಬಳಸಿಕೊಳ್ಳುವ ಪರಿಕಲ್ಪನೆಯ ಮೂಲಕ, ಸ್ಥಳೀಯ ಜನರಿಗೆ ಅವುಗಳ ಜ್ಞಾನÀ ಮತ್ತು ಅನುಭವಗಳು ತಮ್ಮ ಅಭಿವೃದ್ಧಿಗೆ ಧನಾತ್ಮಕ ಕೊಡುಗೆ ನೀಡುವ ಮೂಲಕ ಬಳಸಿಕೊಂಡಿದೆ ಎಂದು ನಾವು ಅರ್ಥೈಸಬಹುದು.

ಒಟ್ಟಾರೆ ಭಾಗವಹಿಸುವಿಕೆ ಅಥವಾ ಪಾಲ್ಗೋಳ್ಳುವಿಕೆ ಎಂದರೆ, ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಜನರನ್ನು ಅಧಿಕಾರ ಮಾಡುವ ಪ್ರಮುಖ ಸಾಧನವಾಗಿ ಕಾಣುತ್ತವೆ. ಸರಳ ರೀತಿಯಲ್ಲಿ ಭಾಗವಹಿಸುವಿಕೆ ಜನರಿಗೆ ಶಕ್ತಿಯನ್ನು ನೀಡುತ್ತದೆ ಆದಾಗ್ಯೂ, ಭಾಗವಹಿಸುವಿಕೆಯು ಅರ್ಥಪೂರ್ಣವಾಗುವುದಕ್ಕಾಗಿ ಕ್ರಿಯೆಯು ಸ್ವಯಂಪ್ರೇರಿತವಾಗಿರಬೇಕು ಮತ್ತು ಬಾಹ್ಯದಿಂದ ಬಲವಂತವಾಗಿರಬಾರದು. ಜನರು ಪರಿಣಾಮಕಾರಿಯಾಗಿ ಭಾಗವಹಿಸುವ ಸಲುವಾಗಿ, ಪ್ರಭಾವಪೂರ್ಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವರು ಸ್ವಇಚ್ಛೆಯಿಂದ ಇರಬೇಕು, ಶಿಕ್ಷಣ ಮತ್ತು ಸಮುದಾಯದ ಭಾಗವಹಿಸುವಿಕೆಯ ಬಗ್ಗೆ ಜಾಗೃತಿ ಅಗತ್ಯವಾಗಿದೆ.

“ಪಾಲ್ಗೊಳ್ಳುವಿಕೆ” ಎಂಬ ಪದವನ್ನು ಸನ್ನಿವೇಶದ ಆಧಾರದ ಮೇಲೆ ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಬಹುದು ಷೇಫರ್ (೧೯೯೪)ಅವರು  ವಿವಿಧ ಆಯಾಮಗಳಲ್ಲಿ ಪಾಲ್ಗೊಳ್ಳುವಿಕೆಯ ಮಟ್ಟವನ್ನು ಸ್ಪಷ್ಟಪಡಿಸುತ್ತಾರೆ. ಅವರು ಈ ಪದದ ಏಳು ಸಂಭವನೀಯ ವ್ಯಾಖ್ಯಾನಗಳನ್ನು ಈ ರೀತಿ ವಿವರಿಸುತ್ತಾರೆ.

೧. ಸೇವೆಯ ಬಳಕೆಯ ಮೂಲಕ ತೊಡಗಿಸಿಕೊಳ್ಳುವುದು.( ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವುದು ಅಥವಾ ಪ್ರಾಥಮಿಕ ಆರೋಗ್ಯ ಸೌಲಭ್ಯವನ್ನು ಬಳಸುವುದು)

೨. ಕೊಡುಗೆ ಮೂಲಕ ತೊಡಗಿಸಿಕೊಳ್ಳುವುದು.( ಅಥವಾ ಹೊರತೆಗೆಯುವಿಕೆ) ಹಣ,ವಸ್ತುಗಳು,ಮತ್ತು ಕಾರ್ಮಿಕರ.

೩. ಹಾಜರಾತಿಮೂಲಕ ಒಳಗೊಳ್ಳುವಿಕೆ – ಉದಾ. ಶಾಲೆಯಲ್ಲಿ ಪೋಷಕರ ಸಭೆಗಳಲ್ಲಿ .

೪. ನಿರ್ದಿಷ್ಟ ವಿಷಯದ ಬಗ್ಗೆ ಸಮಾಲೋಚನೆಯ ಮೂಲಕ ತೊಡಗಿಸಿಕೊಳ್ಳುವುದು.

೫. ಸೇವೆಯ ವಿತರಣೆಯಲ್ಲಿ ಪಾಲ್ಗೊಳ್ಳುವಿಕೆ,ಇತರರೊಂದಿಗೆ ಪಾಲುದಾರನಾಗಿ.

೬. ನಿಯೋಜಿತ ಅಧಿಕಾರಗಳ ಅಳವಡಿಸಿಕೊಳ್ಳುತ್ತ  ಭಾಗವಹಿಸುವುದು.

೭. “ಪ್ರತಿ ಹಂತದಲ್ಲಿ ನಿಜವಾದ ನಿರ್ಧಾರ ತೆಗೆದುಕೊಳ್ಳುವಲ್ಲಿ” ಭಾಗವಹಿಸುವಿಕೆ –  ಸಮಸ್ಯೆಗಳ ಗುರುತಿಸುವಿಕೆ, ಕಾರ್ಯಸಾಧ್ಯತೆ, ಯೋಜನೆ, ಅನುಷ್ಠಾನ ಮತ್ತು ಮೌಲ್ಯಮಾಪನದ ಅಧ್ಯಯನ.

ಒಟ್ಟಾರೆಯಾಗಿ ಸಮುದಾಯದ ಪಾಲ್ಗೊಳ್ಳುವಿಕೆ ಎಂಬುದು ಸಮುದಾಯದ ಜನರು ಜವಾಬ್ದಾರಿಯಿಂದ ಸಕ್ರೀಯವಾಗಿ ಭಾಗವಹಿಸುವ ಮೂಲಕ ತಮ್ಮ ಅಭಿವೃದ್ಧಿಯಲ್ಲಿ ತಾವೇ ಪಾಲ್ಗೋಳ್ಳುವುದು ಎಂದರ್ಥ.

ಸಮುದಾಯದ ಸಹಭಾಗಿತ್ವ (ಮಹತ್ವ ಮತ್ತು ಅಗತ್ಯತೆ)

ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಸಮುದಾಯದ ಸಹಭಾಗಿತ್ವ ಅಗತ್ಯವಾಗಿದೆ.  ಪಾಲಕರು,ಸಮುದಾಯ ಒಟ್ಟಾಗಿ ಮಕ್ಕಳ ಕಲಿಕೆಗೆ ಬೆನ್ನೆಲುಬಾಗಿ ನಿಂತರೆ, ನಾವು ಗುಣಮಟ್ಟದ ಶಿಕ್ಷಣದ ಪ್ರಮುಖ ಆಶಯಗಳಾದ-ಉತ್ತಮ ಹಾಜರಾತಿ,ಶಾಲಾ ಪ್ರಕ್ರಿಯೆಗಳಲ್ಲಿ ಉತ್ತಮ ಭಾಗವಹಿಸುವಿಕೆ, ಉತ್ತಮ ಅಂಕಗಳಿಕೆ, ಸಮಾಜದ ನಿರೀಕ್ಷೆಗಳಿಗೆ ಸ್ಪಂದನೆ,ಶಾಲಾ ಸಂಪನ್ಮೂಲಗಳ ಅಭಿವೃದ್ಧಿ, ಸಾಮಾಜಿಕ ಸಂಸ್ಥೆಯಾಗಿ ಶಾಲೆಯ ಬೆಳವಣಿಗೆ ಇತ್ಯಾದಿಗಳನ್ನು ಈಡೇರಿಸಬಹುದು.

ಸಮುದಾಯದ ಭಾಗವಹಿಸುವಿಕೆಯು ಪ್ರತಿಯೊಬ್ಬ ಮುಖಂಡರಿಗೂ ಶಾಲೆಯ ಬಗ್ಗೆ ತಾವು ಹೊಂದಿರುವ ಪರಮ ಗುರಿಯತ್ತ ಶಾಲೆಯನ್ನು ಮುನ್ನಡೆಸಲು ನೆರವಾಗುವದು; ಮತ್ತು ಶೈಕ್ಷಣಿಕ ನಾಯಕತ್ವ, ನಿರ್ವಹಣೆಯ ಕ್ಷೇತ್ರದಲ್ಲಿ ಪ್ರಗತಿ ಕಾಣುವ ಧ್ಯೇಯೋದ್ದೇಶವನ್ನು ಹೊಂದಿದೆ.

            ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಸಾಧ್ಯವಿಲ್ಲವೆಂಬ ಸಾರ್ವತ್ರಿಕ ಸತ್ಯವನ್ನು  ಗುಣಾತ್ಮಕ ಶಿಕ್ಷಣಕ್ಕೆ ಕಟಿಬದ್ಧರಾಗಿರುವ ಎಲ್ಲರೂ ಒಪ್ಪುತ್ತಾರೆ.

ಗುಣಾತ್ಮಕ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಶಾಲಾ ಹಂತಕ್ಕೆ ಸ್ಪಂದಿಸುವ ಉಸ್ತುವಾರಿ ಹಾಗೂ ಮೇಲ್ವಿಚಾರಣೆಯ ಅಗತ್ಯವಿದೆ. ಉತ್ತಮಾಂಶಗಳ ವರ್ಧನೆಗೆ ಹಾಗೂ ತೊಡಕುಗಳ ನಿವಾರಣೆಗೆ ಇದು ಸಹಾಯP.À ಶಾಲೆಗೆ ಸಮುದಾಯ ನೈತಿಕ ಬೆಂಬಲ ನೀಡಿ ಪರಿಣಾಮಕಾರಿ ಬದಲಾವಣೆಗೆ ಸಾಕ್ಷಿಯಾದಾಗ ಮಾತ್ರ, ಭೌತಿಕ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ಸಾಧ್ಯ. ಼

ಈ ಸತ್ಯವನ್ನು ಮನಗಂಡ ಸರ್ಕಾರಗಳು ಸ್ವಾತಂತ್ರö್ಯ ನಂತರ ಶಾಲಾ ಶಿಕ್ಷಣದ ಸಾರ್ವತ್ರೀಕರಣದಲ್ಲಿ ಸಮುದಾಯವನ್ನು ಬಳಸಿಕೊಳ್ಳಲು ಹಲವು ಯೋಜನೆಗಳನ್ನು ಜಾರಿಗೊಳಿಸಿದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಜಿಲ್ಲಾ ಪ್ರಾಥಮಿಕ ಶಿಕ್ಷಣ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ರಾಷ್ಟಿçÃಯ ಮಾಧ್ಯಮಿಕ ಶಿಕ್ಷಣ ಯೋಜನೆಗಳು ನಮ್ಮ ರಾಜ್ಯದಲ್ಲಿ ಸಮುದಾಯದ ಮಾಲಿಕತ್ವ ಹಾಗೂ ಪಾಲ್ಗೊಳ್ಳುವಿಕೆಗೆ ದೇಶವೇ ಅನುಕರಣೆ ಮಾಡಬಹುದಾದ ಹಲವು ಪ್ರಯೋಗವನ್ನು ರಾಜ್ಯ ಸರ್ಕಾರವು ನಡೆಸುತ್ತ ಬಂದಿದೆ. ೧೯೮೬ರ ರಾಷ್ಟಿçÃಯ ಶಿಕ್ಷಣ ನೀತಿಯ ಆಶಯದಂತೆ ಗ್ರಾಮ ಶಿಕ್ಷಣ ಸಮಿತಿಗಳನ್ನು ರಚಿಸುವುದರ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆ ಉತ್ತಮಗೊಳಿಸಲು ಪ್ರಯತ್ನಿಸಲಾಯಿತು. ಅದು ತಕ್ಕಮಟ್ಟಿನ ಪ್ರತಿಫಲಗಳನ್ನು ಕೊಡಲಾರಂಭಿಸಿದರೂ ಸಹ ಸಾಧಿಸಬೇಕಾದ್ದು ಇನ್ನೂ ತುಂಬಾ ಇದೆ ಎಂಬುದನ್ನು ಕಂಡುಕೊಳ್ಳಲಾಗಿದೆ.

ಸಮುದಾಯದ ಪಾಲ್ಗೊಳ್ಳುವಿಕೆಯಿಂದ ಆಗುವ ಪ್ರಯೋಜನಗಳು

೧.        ಶಿಕ್ಷಣ ಕ್ಷೇತ್ರದಲ್ಲಿ ಭಾಗೀದಾರರು ಭಾಗವಹಿಸುವುದುÀ ಸಂವಿಧಾನಾತ್ಮಕ ಮತ್ತು ಕಾನೂನು ಬದ್ಧವಾಗಿದೆ.

೨.        ಶಾಲೆಯು ಸರಕಾರದ್ದು ಎಂಬ ಭಾವನೆ ದೂರವಾಗಿ, ನಮ್ಮದು ಎಂಬ ಭಾವನೆ ಮೂಡುವಂತೆ ಮಾಡುವುದು.

೩.        ಶಾಲಾ ವ್ಯವಸ್ಥೆಯ ಪರಿಣಾಮವನ್ನು ಹೆಚ್ಚಿಸಲು ಮತ್ತು ಭಾಗೀದಾರರಲ್ಲಿ ಉತ್ತಮ ನಾಯಕತ್ವ ಬೆಳೆಸುವುದು.

೪.        ಶಾಲೆಯ ಎಲ್ಲ ಚಟುಚಟಿಕೆಗಳಲ್ಲಿ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಹಂಚಿಕೊಳ್ಳುವದು.

೫.        ಶಾಲೆಯ ಶೈಕ್ಷಣಿಕ ವ್ಯವಸ್ಥೆಯ ಸಬಲೀಕರಣಕ್ಕೆ ಹೆಚ್ಚು ಸಂಪನ್ಮೂಲ ಸಂಗ್ರಹಣೆ ಮಾಡುವುದು.

೬.        ಭಾಗೀದಾರರ ಭಾಗವಹಿಸುವಿಕೆಯಲ್ಲಿ ಮತ್ತು  ಶೈಕ್ಷಣಿಕ ವ್ಯವಸ್ಥೆಯಲ್ಲಿ ತಾವು ಹೊಂದಿರುವ ನಿರೀಕ್ಷೆಗಳು, ಗುರಿ ಉದ್ದೇಶಗಳು ಈಡೇರಿಸಲುೆ ಪ್ರೇರೇಪಣೆ ನೀಡುವುದು.

೭.        ಶಾಲಾ ಅಭಿವೃದ್ಧಿಗಾಗಿ ಸಮುದಾಯದ ಶಕ್ತಿ ಮತ್ತು ಧನಾತ್ಮಕ ಅಂಶಗಳ ಪ್ರಯೋಜನ ಪಡೆಯುವುದು.

೮.        ಶಾಲಾ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಹೊಸಬಗೆಯ ಮತ್ತು ಸಮರ್ಪಕವಾದ  ಪರಿಹಾರಗಳನ್ನು ಕಂಡುಕೊಳ್ಳುವುದು.

೯.ಶಾಲೆಯಲ್ಲಿ ಕರ್ತವ್ಯ ನಿರತರನ್ನು ಉತ್ತೇಜಿಸಿ ಅವರ ಸಾಧನೆಯನ್ನು ಹೆಚ್ಚಿಸುವುದು.

      ೧೦. ಒಂದು ಶಾಲೆಯ ಉತ್ತಮಾಂಶಗಳನ್ನು ಗುರುತಿಸುವುದು. ಆ ಅನುಭವ ವಿನಿಮಯ

       ಮಾಡಿಕೊಳ್ಳುವುದು.

      ೧೧.ಅತ್ಯಂತ ತುರ್ತು ತೀರ್ಮಾನ ತೆಗೆದುಕೊಳ್ಳಬೇಕಾದ ಅಂಶಗಳ ಬಗ್ಗೆ ಸೂಕ್ತ ಕ್ರಮ ವಹಿಸುವುದು.

      ೧೨.ಹಿರಿಯ ಅಧಿಕಾರಿಗಳಿಗೆ ಅಗತ್ಯ ನೈಜ ಸಂಗತಿಗಳನ್ನು ಸ್ಪಷ್ಟಪಡಿಸುವುದು.

      ೧೩. ಶಾಲೆಯು ತನ್ನ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು/ಸುಧಾರಿಸಿಕೊಳ್ಳಲು ಸ್ಪಷ್ಟ

     ಕಾರ್ಯತಂತ್ರಗಳನ್ನು ಸೂಚಿಸುವುದು.

     ೧೪.ಶಾಲೆಗೆ ಸಂಬAಧಿಸಿದ ಆಡಳಿತಾತ್ಮಕ ತೊಡಕುಗಳ ನಿರ್ವಹಣೆಯ ಸಮಯವನ್ನು

     ಮಿತಗೊಳಿಸುವುದು.

     ೧೫.ಶಾಲೆಯ ನಿರ್ವಹಣೆಯನ್ನು ವಿವಿಧ ಕ್ಷೇತ್ರಗಳಿಗೆ ಅನುಗುಣವಾಗಿ ವರ್ಗೀಕರಿಸಿ ಅಲ್ಲಿ ಪರಿಶೀಲಿಸಿದ

    ಅಂಶಗಳನ್ನು ಆಧರಿಸಿ ಸಲಹೆ ಮಾರ್ಗೋಪಾಯಗಳನ್ನು ನೀಡುವುದು.

    ೧೬. ಶಾಲಾ ದಾಖಲೆಗಳನ್ನು ತಂತ್ರಜ್ಞಾನ ಬಳಕೆ ಮೂಲಕ ನಿರ್ವಹಣೆ ಉತ್ತಮಪಡಿಸುವುದು.

    ೧೭.ಸಮುದಾಯದ ಆಶಯಗಳ ಈಡೇರಿಕೆಯಲ್ಲಿ ಶಾಲಾ ವ್ಯವಸ್ಥೆಯ ಸ್ಪಂದನೆಯನ್ನು ಖಾತ್ರಿಪಡಿಸಿಕೊಳ್ಳುವುದು.

ಒಟ್ಟಾರೆಯಾಗಿ ಶಾಲೆ ಕೇವಲ ಮಕ್ಕಳನ್ನು ಶಿಕ್ಷಣಾಸಕ್ತರನ್ನಾಗಿಸದೆ  ಇಡೀ ಸಮುದಾಯವನ್ನು ಶೈಕ್ಷಣಿಕವಾಗಿ ಅಣಿಗೊಳಿಸಬೇಕಾಗಿದೆ. ಇದಕ್ಕಾಗಿ ಶಾಲೆಯ ಪೋಷಕರು ಮತ್ತು ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಏರ್ಪಡುವಂತೆ ಶ್ರಮಿಸಬೇಕಾಗಿದೆ.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

One thought on “

  1. ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಸಮುದಾಯದ ಪಾತ್ರ ಬಹುಮುಖ್ಯ. ಅರ್ಥಪೂರ್ಣ ಲೇಖನ. ನಿಮ್ಮ ಸಾಹಿತ್ಯಯಾನ ಹೀಗೆ ಮುಂದುವರೆಯಲಿ

Leave a Reply

Back To Top