ಕಾವ್ಯಸಂಗಾತಿ
ಬಾಗೇಪಲ್ಲಿಯವರ ಹೊಸ ಗಜಲ್
ನೀನು ಎಣಿಸಿದಷ್ಟು ಕೆಟ್ಟವನೆ? ನಾನು ಗೆಳತಿ
ಹೆಣ್ಣಿಗಾಗಿ ನಾಚಿಕೆ ಬಿಟ್ಟವನೆ? ನಾನು ಗೆಳತಿ
ಕಾಣದ ನಿನ್ನಲಿ ಅಮಿತ ಗೌರವ ತೋರಿದೆನಲ್ಲಾ
ಕನ್ನಡಿಗಂಟನೂ ಅರಿಯದವನೆ? ನಾನು ಗೆಳತಿ
ಸುಂದರ ಚೆಲವೆಯರನೆಷ್ಟೋ! ಕಂಡಿಹೆ ನಾನು
ಹುಚ್ಚನಾಗಿ ದುಂಬಾಲು ಬಿದ್ದವನೆ? ನಾನು ಗೆಳತಿ
ನಿನ್ನಡೆ ಚೂರು ಮೋಹಗೊಂಡದ್ದು ಖರೆ ಎನ್ನೋಣ
ತಪ್ಫೋ! ಒಪ್ಪೋ ಎಲ್ಲೆ ಮೀರಿದವನೆ? ನಾನು ಗೆಳತಿ.
ಕೃಷ್ಣಾ! ಸಹಸ್ರರಾರು ಗೋಪಿಯರ ಒಮ್ಮೆಲೇ ಮರೆತ.
ಮೂರ್ತಿಮಾತ್ರ ನಾ ಎಂಬುದು ಬಲ್ಲವನೆ! ನಾನು ಗೆಳತಿ