ಕಾವ್ಯ ಸಂಗಾತಿ
ಭರವಸೆಯ ಶಕ್ತಿ..
ಸವಿತಾ ಇನಾಮದಾರ್
ಓ ನನ್ನ ಪ್ರೀತಿಯ ನಲ್ಲಾ
ಇಂದೇಕೋ ಎನಗೆ ಕೆಲಸದಲ್ಲಿ ಮನಸೇ ಇಲ್ಲ
ನಿನ್ನ ನೆನಪು ಬಲು ಕಾಡುತಿದೆ
ಓಡೋಡಿ ನಿನ್ನ ಸೇರಬೇಕೆಂದು ಎನಿಸುತಿದೆ
ಬರಲೇ ನಾ ಅಲ್ಲಿ ಹಾರಿ..
ದೂರವಿಲ್ಲ ನಮ್ಮ ನಡುವಿನ ದಾರಿ.
ಅಪರಂಜಿಯಂಥಾ ನಮ್ಮ ಪ್ರೀತಿಯ ಕಂಡು
ಆ ಮಹಾದೇವನೇ ಒಲಿದಿರುವನು
ಪ್ರತಿ ಕ್ಷಣವೂ ನಿನ್ನನ್ನೇ ನೆನೆಯುವಂತೆ ಮಾಡಿಹನು.
ನಮ್ಮ ಪ್ರೇಮದಲ್ಲಿ ಅಡಗಿದೆ ಭರವಸೆಯ ಶಕ್ತಿ
ಕಳೆದು ಹೋದ ಪ್ರೀತಿ ಮರಳಿ ಪಡೆದಾಗ
ಹೆಚ್ಚುವುದು ಆ ಶಿವನಲ್ಲಿ ಭಕ್ತಿ.