ಪ್ರೊ.ರಾಜನಂದಾ ಘಾರ್ಗಿ-ಗಜಲ್

ಕಾವ್ಯ ಸಂಗಾತಿ

ಗಜಲ್

ಪ್ರೊ.ರಾಜನಂದಾ ಘಾರ್ಗಿ

ಸೂರ್ಯನಂತೆ ಪ್ರಖರನಾಗಿ ಬಾಳಲಿ ಬೆಳಕನು ತುಂಬಿದೆ
ಚಂದ್ರನಂತೆ ಶಾಂತನಾಗಿ ಹೃದಯದಲಿ ತಂಪನು ತುಂಬಿದೆ

ಜನ್ಮ ಜನ್ಮಕೂ ಕೂಡುತ ಬಾಳ ಜೊತೆಗಾರನಾದೆ ನೀನು
ಆತ್ಮ ಸಂಗಾತಿಯಾಗಿ ಜೀವನದಲಿ ಅರ್ಥವನು ತುಂಬಿದೆ

ನಾ ಕಂಡ ಪ್ರತಿ ಯಶಸ್ಸಿನ ಅದೃಶ್ಯ ಮೆಟ್ಟಲಾಗುತ ಬಂದೆ
ದಿಗಂತಕ್ಕೆ ಏಣಿಯಾಗಿ ಆಕಾಶಕ್ಕೆರುವ ಆಶೆಯನು ತುಂಬಿದೆ

ನಾ ನಡೆದ ಹಾದಿಯುದ್ದಕ್ಕೂ ಹೂವು ಹಾಸುತ ನಿಂತೆ
ಪಾರಿಜಾತವ ತಂದು ಬೊಗಸೆಯಲಿ ಸುಗಂದವನು ತುಂಬಿದೆ

ಆತ್ಮ ಸಾಂಗತ್ಯಕ್ಕೆ ನವ್ಯ ದಿವ್ಯ ಪರಿಭಾಷೆಯನು ನೀಡಿದೆ
ರಾಜಿಯ ಮನದಲಿ ಪರಿಪೂರ್ಣ ಆರಾಧನೆಯನು ತುಂಬಿದೆ


Leave a Reply

Back To Top