ಡಾ. ತಯಬಅಲಿ.ಅ. ಹೊಂಬಳ ಕವಿತೆ-ಅಚ್ಚ ಮಲ್ಲಿಗೆ

ಕಾವ್ಯ ಸಂಗಾತಿ

ಅಚ್ಚ ಮಲ್ಲಿಗೆ

ಡಾ. ತಯಬಅಲಿ.ಅ. ಹೊಂಬಳ

ಚಲವಿ ನೀ ನಕ್ಕೆಂದ್ರ
ಅಚ್ಚ ಮಲ್ಲಿಗೆ ಹೂ
ಬಿಚ್ಚಿ ಬಿಚ್ಚಿ
ಒಗೆದಂಗ ಆಕತೈತಿ.

ಚಲವಿ ನೀ ನಕ್ಕೆಂದ್ರ
ಬಿದ್ದ ಅಚ್ಚ ಮಲ್ಲಿಗೆ ಹೂ
ಜೊಡಿಸಿ ನಿನ್ನ
ಮೂಡಿಸಿದಂಗ ಆಕತೈತಿ.

ಚಲುವಿ ನೀ ಕಣ್ಣೇತ್ತಿ ನೋಡಿದರ
ನನ್ನ ಮಿಡಿಯುತ್ತಿರುವ ಹೃದಯ
ಬೆಸೆದಂಗ ಆಕತೈತಿ.

ಚಲುವಿ ನೀ ನನ್ನ ನೋಡಿ
ನಕ್ಕೆಂದ್ರ ಆ ಕ್ಷಣದಲ್ಲಿ
ನನ್ನ ಜೀವ ಹೋದಂಗ
ಆಕತೈತಿ.

ನಿನ್ನ ಅಚ್ಚ ಮಲ್ಲಿಗೆ ನಗು
ಬಿಚ್ಚಿ ಬಿಚ್ಚಿ ನಗುತ್ತಿದ್ದರು
ನನ್ನ ಜೀವನ ಬಹಳ
ಛಂಧ ಆಕತೈತಿ.


One thought on “ಡಾ. ತಯಬಅಲಿ.ಅ. ಹೊಂಬಳ ಕವಿತೆ-ಅಚ್ಚ ಮಲ್ಲಿಗೆ

  1. ಆಕತೈತಿ ಬದಲಾಗಿ ಆಕ್ಕೈತಿ ಅಂತಾ ಬಳಸಬಹುದಾಗಿತ್ತು.

Leave a Reply

Back To Top