ಕಾವ್ಯ ಸಂಗಾತಿ
ಅನುಭಾವ
ಮಾಜಾನ್ ಮಸ್ಕಿ
ಅನುಭಾವದ ಬದುಕು ಇದು
ಜಾನ್!!
ಆದರ್ಶಗಳು ಗಟ್ಟಿಯಾಗಿ ನೆಲೆಯೂರಿವೆ
===
ಅವಮಾನ, ಅಪವಾದಗಳಿಂದ ನೊಂದು ಸಾವಿನ ಶಿಖರ ಏರಿ ಇಳಿದಾಗಲು
ಜಾನ್!!
ಉಳಿದ ಈ ಮುಗ್ಧ ಹೃದಯ ಪ್ರೀತಿಸುವರನ್ನು ಕಂಡೆ
===
ಎಲ್ಲಾ ವಿಷ ಬಾಣಗಳ ತಪ್ಪಿಸಿ ಬದುಕುತ್ತಿರುವೆ
ಜಾನ್!!??
ಬದುಕಿನ ಕಲೆಯನ್ನು ಅರಿತು ಕಲಿಯುತ್ತಿರುವೆ
===
ಪ್ರೇಮ ಬಾಳಿನ ಉಷೆ, ಮನದ ಉನ್ಮಾದ, ಸ್ವರ್ಗದ ಒಡಲು
ಜಾನ್!!
ಇಷ್ಕ ಕಾ ನಷೆ ಇಳಿದಾಗ ಎದುರಾಗುವುದು ನರಕ ದರ್ಶನ .