ಕಾವ್ಯ ಸಂಗಾತಿ
ನೀನು ಬೆಳದಿಂಗಳ ಬಿತ್ತಿ
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ನಿನ್ನ ಇರವಲ್ಲಿ ಬೆಳದಿಂಗಳು
ಬಿಡಾರ ಹೂಡಿತ್ತು
ನೀನು ನಡೆದಲ್ಲೆಡೆ ನಕ್ಷತ್ರ
ಬಂದು ಮಿನುಗುತ್ತಿತ್ತು
ಎದೆಯ ಸಂತೆಯಲ್ಲಿ
ನೀನು ಹೆಜ್ಜೆ ಇಟ್ಟದ್ದೇ ಬಂತು
ವಹಿವಾಟ ವ್ಯಾಪಾರ ಜೋರಾಗಿ ಬಿಟ್ಟಿತು
ಹೃದಯದ ಒಳಗೆ
ಬಲಗಾಲು ಇಕ್ಕಿ ಬಂದಾಗಲೇ
ನಿನ್ನೊಡನೆ ಸ್ವರ್ಗವು ಒಳ ಸೇರಿತ್ತು
ನಿನ್ನ ಮಡಿಲು
ಸಮಸ್ಯೆಗಳ ಮರೆಯುವ ಬಂದರು
ಪ್ರೇಮ ಸಮುದ್ರ ಅಲ್ಲಿ
ಒಕ್ಕುವುದು ಅಷ್ಟೇ ಗೊತ್ತು
ನಿನ್ನ ಹಸನ್ಮುಖ
ನನ್ನ ಬಾಳು ಬೆಳಗುವುದು
ಜಗತ್ತಿನ ವೈಭವಗಳೆಲ್ಲ
ನಿನ್ನ ಕಿರು ಬೆರಳ ಗೆರೆಗಳು
ಇದೀಗ ಮೂವತ್ತು ವರ್ಷಗಳು
ನೀನು ಬೆಳದಿಂಗಳ ಬಿತ್ತಿ
ನಕ್ಷತ್ರಗಳ ಫಸಲಿಸಿದೆ
ಅದರ ದೇದಿಪ್ಯಮಾನ
ನನ್ನ ನೀರುಮ್ಮಳನ್ನಾಗಿಸಿದೆ
INSPIRING POEM MADAM
Nice mam