ಕಾವ್ಯ ಸಂಗಾತಿ
ಜಯಶ್ರೀ ಭ ಭಂಡಾರಿ ಗಜಲ್
ಅಕ್ಷರಗಳ ಬೆಳಕು ಹುಡುಕುವ ತವಕದಲಿ ಎತ್ತರಕ್ಕೆ ಏರಿದೆ ನೀನು
ನಕ್ಷತ್ರಗಳ ಸಾಲಿನಲಿ ಹೊಳೆಯುವ ಗುಂಗಿನಲಿ ನಸುನಗೆ ಬೀರಿದೆ ನೀನು.
ಬದುಕಿನ ಬಂಡಿ ಓಡಲು ವಿದ್ಯೆಯೇ ಕೇಂದ್ರಬಿಂದು ಅಲ್ಲವೇ ಹೇಳು
ತದುಕುತ ಭಾವಗಳ ಬಿತ್ತಿಯನು ಓದುವ ಹವ್ಯಾಸ ತೋರಿದೆ ನೀನು.
ಜಗದ ಕತ್ತಲೆ ಕಳೆಯಲು ಜ್ಞಾನ ದೀವಿಗೆ ಹೊತ್ತಿಸಿ ಬೆಳಗಬೇಕು.
ಮೊಗದ ಕಳೆ ಹೆಚ್ಚಿಸಲು ಅಭ್ಯಾಸ ಮಾಡುವ ಕಲೆ ಮೀರಿದೆ ನೀನು.
ಪದಗಳಲಿ ಅವಿತ ಕವಿತೆ ಬರೆದು ಸಂಗೀತದೌತಣ ನೀಡಿ ನಲಿಯಬೇಕು.
ಹದವಾದ ಶಬ್ದಗಳ ಪ್ರೌಢ ಬರಹದಿ ಉನ್ನತ ಶಿಕ್ಷಣಕೆ ಏರಿದೆ ನೀನು
ಡಾಕ್ಟರೇಟ್ ಪದವಿಗಾಗಿ ಸಂಶೋಧನೆ ಪ್ರಬಂಧದ ಬಯಕೆ ಜಯಳಿಗಿದೆ
ಸಿಕ್ರೇಟ್ ಅರಿಯದೇ ಅನುಮೋದನೆ ಸಿಗದೆ ಬಂಧನದಿ ಸೇರಿದೆ ನೀನು
————————————–