ವಾಣಿ ಯಡಹಳ್ಳಿಮಠ-ಗಝಲ್

ಕಾವ್ಯ ಸಂಗಾತಿ

ಗಝಲ್

ವಾಣಿ ಯಡಹಳ್ಳಿಮಠ

ಎಲ್ಲರನೂ ನಿನ್ನವರೆನ್ನುವಿಯಾದರೂ ನಿನಗ್ಯಾರಿಲ್ಲ
ಎಲ್ಲರ ನೋವಿಗೂ ನೀರಾಗುವಿಯಾದರೂ ನಿನಗ್ಯಾರಿಲ್ಲ

ನಿನಗಳಿಸಿದರೂ ನೀನರಳಿಸುವೆ ಅವರ ಮೊಗವ
ವಿಷವುಂಡು ಅಮೃತ ಉಣಿಸುವಿಯಾದರೂ ನಿನಗ್ಯಾರಿಲ್ಲ

ಕಣ್ರೆಪ್ಪೆಯು ಕಣ್ಣೀರಿಗೆ ಕೊಡೆ ಹಿಡಿದಂತಿದೆ
ಅವರಾಕ್ರಂದನಕೆ ನೀ ಆಸರೆಯಾಗುವಿಯಾದರೂ ನಿನಗ್ಯಾರಿಲ್ಲ

ಕಡಲಲೆಗಳಿಗೆ ಕಿನಾರೆಯ ಸೇರುವ ಖಯಾಲಿ
ಅಲೆಗಳಾರಭಸಕೆ ನೀ ತತ್ತರಿಸುವಿಯಾದರೂ ನಿನಗ್ಯಾರಿಲ್ಲ

ಎದೆಗೂಡು ಗಾಯಗಳ ಮಸಣವಾಗುತಿದೆ ‘ವಾಣಿ ‘
ಒಲವ ಉಸಿರು ಸೋಕದೆ ಚಿತೆಗೇರುತಿರುವಿಯಾದರೂ ನಿನಗ್ಯಾರಿಲ್ಲ


4 thoughts on “ವಾಣಿ ಯಡಹಳ್ಳಿಮಠ-ಗಝಲ್

  1. ಬದುಕಿನ ಸತ್ಯದ ಅನಾವರಣ ..ಸತ್ಯದ ಮಾತು.ಅಭಿನಂದನೆ ಮೆಡಮ್

Leave a Reply

Back To Top