ಕಾವ್ಯ ಸಂಗಾತಿ
ಬೆವರ ಕಾಲುವೆ
ಪಿ.ನಂದಕುಮಾರ್
.
ಮಡಿವಂತರ ಹೊಲಸ ಬಾಚಿದರು
ಎಂಟಾಣೆಗೆ ಕುಣಿ ಹೊಡೆದು
ನಾಕಾಣೆಯ ಸಿಂಧಿ ಕುಡಿದು
ಊರ ಹೊರಗಿಟ್ಟವರ
ಹೆಣ ಭಾರ ಹೊತ್ತು
ಬಿಟ್ಟಿ ದುಡಿಮೆಯ ಬೆವರ ಕಾಲುವೆ ಹರಿಸಿ
ಮನುಷ್ಯರಾಗಲು ತವಕಿಸಿದರು
ಕೈ ರೇಖೆಗಳ ಸವಸಿ
ಬಂಡೆಗಲ್ಲುಗಳ ಸೀಳಿ
ರಕ್ತ, ಮಾಂಸ ಖಂಡಗಳ ಕರಗಿಸಿ
ದಾರಿ ನಿರ್ಮಿಸಿದವರು
ಸೂರ್ಯನನ್ನು ಕರಗಿಸಿ
ದೀಪ ಹಚ್ಚಿದವರು
ಈಗಲೂ ಕತ್ತಲೆಯ
ಕರಾಳಲೋಕದ ಕನಸಿನಲ್ಲಿ
ಬೆಚ್ಚಿ ಬೀಳುವವರು
—————————
ಬಹಳ ಚೆನ್ನಾಗಿ ಕವಿತೆ ಮೂಡಿಬಂದಿದೆ ಹಾಗೆ ಭೂತ ಮತ್ತು ವಾಸ್ತವ ಹೇಳುವ ಪ್ರಯತ್ನ ಚೆನ್ನಾಗಿ ಮಾಡಿದ್ದೀರಿ…..
ಧನ್ಯವಾದಗಳು
ತುಂಬಾ ಅರ್ಥ ಪೂರ್ಣ ವಾಗಿದೆ
ತುಂಬಾ ಅರ್ಥಪೂರ್ಣವಾದ ಕವಿತೆ. ಇಲ್ಲಿನ ಪ್ರತಿಯೊಂದು ಸಾಲುಗಳು ಮನಮಿಡಿಯುವಂತಿವೆ. ಧನ್ಯವಾದಗಳು ಸರ್
ಧನ್ಯವಾದಗಳು
ಕವನ ಸರ್
ಅನುಭವದಿಂದ ಒಡಮೂಡಿದ ಹಾಗೆ ಇದೆ ಸರ್ ಕವನ
Super nandhu
ಪ್ರೀತಿಯ ನಂದಕುಮಾರ,
ನಿನ್ನ ಕವಿತೆ ಬೆವರ ಕಾಲುವೆ ಓದಿದೆ.ಸಂತೋಷವಾಯಿತು.
ಸತ್ಯ ಮತ್ತು ಸತ್ವಯುತ ಸಾತ್ವಿಕ ಸಾಲುಗಳು.
ಲೇಖನಿ ಹಾಗೆಯೇ ನಿರಂತರವಾಗಿ ಓದು ಮತ್ತು ಲೋಕಾನುಭವದೊಂದಿಗೆ ಮುಂದುವರಿಯಲಿ.