ಕಾವ್ಯ ಸಂಗಾತಿ
ಅವಳದೆ ಪ್ರತಿಬಿಂಬ
ಶ್ರೀಕಾಂತಯ್ಯ ಮಠ
ನನ್ನ ಭಾವದ ಆಸೆಗಳು ತೀರುತ್ತಿಲ್ಲ
ನಾ ಕರೆದವಳು
ಜೊತೆಯಾಗಿ ಬರುತ್ತಿಲ್ಲ
ಆಸೆಗಳು ಕಮರುತ್ತಿವೆ
ಮನಸ್ಸು ಮರುಗುತ್ತಿದೆ
ಭಾವನೆಯಲ್ಲಿ ಜೀವನ
ಕರಗುತ್ತಿದೆ.
ನನ್ನ ಬದುಕಿನ ದಾರಿ ತಪ್ಪುತ್ತಿದೆ
ಬದುಕುವ ಯೋಚನೆಗಳು ಮರೆಯಾಗುತ್ತಿವೆ
ನಿರ್ವಹಿಸುವ ಜೀವನ ಬಯಲಲ್ಲಿ ಬೆತ್ತಲಾಗುತ್ತಿದೆ
ಏಕ ಅನೇಕ ವಿಚಾರಗಳ ಲೋಕ ದೂರಾಗುತ್ತಿದೆ.
ಹರಿದು ಬಂದವೊ ಚಿಂತೆಯ ಅಲೆಗಳು
ಎದೆಹೊಕ್ಕಾವೊ ಹರಿದು ತಿಂದು ಹೊರಹಾಕಲು
ಇರಿದು ತಿವಿದಂತೆ ನೋವಿನ ಕೂಗಿಗೆ ಕಿವುಡಾದ ನನ್ನವರು
ಏಟು ತಿಂದು ಎಂಟು ಗಂಟುಳ್ಳ ದೇಹಕ್ಕೆ ಯಾವ ಜಾಗದಲ್ಲಿ ಯಾರ ಸಹಕಾರ.
ನನಗಾಗಿ ಬರುವ ದಿನಗಳು ನಗು ತರದೆ ಹೋದವು
ನಗುವೆಂಬುದು ಕನಸಾದರೂ ಮನಸ್ಸಿನೊಳಗೆ ಭರವಸೆ ಭರಪೂರ
ಇರುವ ಪ್ರೀತಿಯೊಳಗೆ ನಿನ್ನ ಪ್ರತಿಬಿಂಬ
ನೀನಿಲ್ಲದೆ ಹೋದರೆ ದುಃಖ ದುಮ್ಮಾನದ ನಾನೊಬ್ಬ ಹುಂಬ.