ಕಾವ್ಯ ಸಂಗಾತಿ
ಗಜಲ್
ಅನಸೂಯ ಜಹಗೀರದಾರ
ನಾವು ಜೊತೆಯಿಲ್ಲವೆಂದ ಮಾತ್ರಕ್ಕೆ ಪ್ರೀತಿಯಿಲ್ಲವೆಂದು ಹೇಗೆ ಹೇಳುವೆ
ಪ್ರತಿದಿನ ಉರುಳುವ ಕಾಲ ಕಾಣುವುದಿಲ್ಲವೆಂದು ಹೇಗೆ ಹೇಳುವೆ
ಯಾವ ಉಮೇದಿಯೂ ಘನೀಕೃತವಾಗಲಿಲ್ಲ ಕರಗುತ್ತ ನೀರಾಯಿತು
ಎಲ್ಲ ಮೌನವಾದ ಮೇಲೆ ಕನಸಹಕ್ಕಿ ಕೂಗಲಿಲ್ಲವೆಂದು ಹೇಗೆ ಹೇಳುವೆ
ದಿನದ ಜಂಜಡಗಳಲಿ ಕಳೆದುಹೋದೆವು ಮರೀಚಿಕೆಯ ದುಡಿಮೆಯಲಿ
ನನಗೂ ಪುರುಸೊತ್ತಿಲ್ಲದ ದಂದಗ ನಿನ್ನ ವಿಚಾರಿಸಲಿಲ್ಲವೆಂದು ಹೇಗೆ ಹೇಳುವೆ
ಬಿಟ್ಟೆನೆಂದರೂ ಬಿಡದ ಮಾಯೆಯಲಿ ಸಿಲುಕಿದವರೇ ಜಗದಲಿರುವರು
ದಿನದ ಕರ್ಮದ ದಾರಿ ನಡೆಯುತ್ತ ನಿನ್ನ ನೋಡಲಾಗಲಿಲ್ಲವೆಂದು ಹೇಗೆ ಹೇಳುವೆ
ಸ್ವಭಾವಕೆ ಮದ್ದಿಲ್ಲ ಚಿಂತಿಸಿ ಮಾಡುವುದೇನಿದೆ ವ್ಯರ್ಥ ಅನಾರೋಗ್ಯಕೆ ದಾರಿಯಲ್ಲವೆ ಅನು
ಬದುಕ ನಡೆಯಲಿ ನಿನ್ನ ಗುಣಾವಗುಣಗಳ ಸ್ವೀಕರಿಸಲಿಲ್ಲವೆಂದು ಹೇಗೆ ಹೇಳು